ಭಾರತೀಯ ವಾಯುಪಡೆಯ ಹೊಸ ಯುದ್ದ ಸಮವಸ್ತ್ರ ಅನಾವರಣ

ಚಂಡೀಗಢ: ಭಾರತೀಯ ವಾಯುಪಡೆಯು ಶನಿವಾರದಂದು ತನ್ನ 90 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊಸ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ವಾಯುಪಡೆಯಲ್ಲಿ ವೆಪನ್ ಸಿಸ್ಟಮ್ಸ್ (ಶಸ್ತ್ರಾಸ್ತ್ರ ವ್ಯವಸ್ಥೆ) ಶಾಖೆ ಎಂದು ಕರೆಯಲ್ಪಡುವ ಹೊಸ ಶಾಖೆಯನ್ನು ರಚಿಸಲು ಸರ್ಕಾರವು ಅನುಮೋದಿಸಿದೆ. ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರನ್ನು ಒಂದೇ ಘಟಕದ ಅಡಿಯಲ್ಲಿ ಏಕೀಕರಿಸುವ ಗುರಿಯನ್ನು ಇದು ಹೊಂದಿದೆ. ವಾಯುಪಡೆಯ ಹೊಸದಾಗಿ ವಿನ್ಯಾಸಗೊಳಿಸಿದ ಯುದ್ಧ ಟೀ ಶರ್ಟ್ ಅನ್ನು ಕೂಡಾ ಸೇನೆಗೆ ಸೇರ್ಪಡೆಗೊಳಿಸಲಾಗಿದೆ.

ಸುಧಾರಿತ ವೈಶ್ವಿಕ ಯುದ್ಧ ಶೈಲಿಗಳನ್ನು ಗಮನದಲ್ಲಿರಿಸಿಕೊಂಡು ಅತಿ ಹೆಚ್ಚು ಅಗತ್ಯವಿದ್ದ ಸಮವಸ್ತ್ರವನ್ನು ಸ್ಥಾಯಿ ವಸ್ತ್ರ ಸಮಿತಿ ವಿನ್ಯಾಸಗೊಳಿಸಿದೆ. ಯುದ್ದದ ಸಮಯದಲ್ಲಿ ಶತ್ರುಗಳಿಗೆ ಮಂಕುಬೂದಿ ಎರಚಲು ಈ ಸಮವಸ್ತ್ರವು ಸಹಾಯ ಮಾಡಲಿದೆ.