ಕೆ.ಸಿ.ರಾವ್ ರಾಷ್ಟ್ರೀಯ ಪಕ್ಷ ಘೋಷಣೆ: ಪಕ್ಷ ಸದಸ್ಯರಿಂದ ಮದ್ಯದ ಬಾಟಲಿ ಮತ್ತು ಕೋಳಿ ವಿತರಣೆ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆಸಿ ರಾವ್ ನಾಳೆ ವಾರಂಗಲ್‌ನಲ್ಲಿ ರಾಷ್ಟ್ರೀಯ ಪಕ್ಷವನ್ನು ಆರಂಭಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಟಿಆರ್‌ಎಸ್ ನಾಯಕ  ಸ್ಥಳೀಯರಿಗೆ ಮದ್ಯದ ಬಾಟಲ್ ಮತ್ತು ಕೋಳಿ ವಿತರಿಸುತ್ತಿರುವ ವೀಡಿಯೋವನ್ನು ಸುದ್ದಿ ಸಂಸ್ಥೆ ಎ.ಎನ್.ಐ ಹಂಚಿಕೊಂಡಿದೆ. #WATCH | TRS leader Rajanala Srihari distributes liquor bottles and chicken to locals ahead of Telangana CM KC Rao launching a national party tomorrow, in Warangal […]

ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಭಜನೆ

ಹಿರಿಯಡಕ: ಭಾರತಾಂಬೆ ಸಗ್ರಿ ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ವತಿಯಿಂದ ಅರವಿಂದ ಭಂಡಾರಿಯವರ ನೇತೃತ್ವದಲ್ಲಿ ನವರಾತ್ರಿಯ ಪ್ರಯುಕ್ತ ಜಿಲ್ಲಾ ಕಾರಾಗೃಹದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು. ರಾಷ್ಟ್ರ ಸ್ವಯಂ ಸೇವಿಕಾ ಸಮಿತಿ ಉಡುಪಿ ಜಿಲ್ಲೆಯ ನಿಧಿಪ್ರಮುಖ್ ಭಾರತೀ ಎಚ್.ನಾಯಕ್, ಹಿರಿಯ ರಾಷ್ಟ್ರ ಸ್ವಯಂ ಸೇವಕಿ ಶ್ರೀಮತಿ ಸ್ನೇಹ ಪ್ರಭಾ ಕೆ. ರಾವ್, ಉಡುಪಿ ಕಾರ್ಯವಾಹಿಕಾ ಶ್ರೀಮತಿ ಶಕುಂತಲಾ ಆರ್ ಶೆಣೈ, ಭಾರತಾಂಬೆ ಸಗ್ರಿ ಶಾಖೆಯ ಪ್ರಮುಖ ಶಿಕ್ಷಕಿ ಮಂಜುಳಾ ಪ್ರಸಾದ್ ಹಾಗೂ ಕಾರಾಗೃಹದ ಅಧಿಕಾರಿ ಎಸ್.ಬಿ.ಪಟೇಲ್ ಅವರ ಸಹಕಾರದೊಂದಿಗೆ […]

ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸಲು ವಿಜ್ಞಾನ ಮತ್ತು ಪದವಿ ವಿದ್ಯಾರ್ಥಿಗಳಿಗೆ ಡಾ.ಎಸ್.ಕೆ ಶಿವಕುಮಾರ್ ಪ್ರಶಸ್ತಿ, ವಿಜ್ಞಾನ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರೊ.ಯು.ಆರ್ ರಾವ್ ಪ್ರಶಸ್ತಿ ಹಾಗೂ ಜನಸಾಮಾನ್ಯರ ಆವಿಷ್ಕಾರಗಳಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ […]

ಬ್ರಹ್ಮಾವರ: ಬಿಜೆಪಿ ಗ್ರಾಮಾಂತರ ವತಿಯಿಂದ ಖಾದಿ ಮೇಳ

ಬ್ರಹ್ಮಾವರ: ಬಿಜೆಪಿಯ ಸೇವಾ ಪಾಕ್ಷಿಕ ಅಭಿಯಾನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚಣೆ ಅಂಗವಾಗಿ ಬಿಜೆಪಿ ಉಡುಪಿ ಗ್ರಾಮಾಂತರ ವತಿಯಿಂದ ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಆಯೋಜಿಸಿದ್ದ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಖಾದಿ ಮೇಳವನ್ನು ಬಿಜೆಪಿ ಉಡುಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷೆ ವೀಣಾ ವಿ. ನಾಯ್ಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸದಾನಂದ ಉಪ್ಪಿನಕುದ್ರು, ಬಿಜೆಪಿ ಜಿಲ್ಲಾ […]

ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿ ಭಾರತೀಯ ಮೂಲದ ನಾಲ್ವರ ಅಪಹರಣ

ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಸೋಮವಾರ (ಸ್ಥಳೀಯ ಕಾಲಮಾನ) ಭಾರತೀಯ ಮೂಲದ ಪರಿವಾರವೊಂದು ಅಪಹರಣಗೊಂಡಿರುವುದಾಗಿ ವರದಿಯಾಗಿದೆ. ಅಪಹರಣಗೊಂಡ ನಾಲ್ವರಲ್ಲಿ 8 ತಿಂಗಳ ಹೆಣ್ಣು ಮಗು ಮತ್ತು ಆಕೆಯ ಪೋಷಕರು ಸೇರಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. 36 ವರ್ಷದ ಜಸ್ದೀಪ್ ಸಿಂಗ್, 27 ವರ್ಷದ ಜಸ್ಲೀನ್ ಕೌರ್ ಮತ್ತು ಅವರ ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು 39 ವರ್ಷದ ಅಮನದೀಪ್ ಸಿಂಗ್ ಅವರನ್ನು ಕರೆದೊಯ್ಯಲಾಗಿದೆ ಎಂದು ಮರ್ಸಿಡ್ ಕೌಂಟಿ ಶೆರಿಫ್ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿರುವುದಾಗಿ […]