ಮೋಹಿನಿ ರೂಪದಲ್ಲಿ ಕಂಗೊಳಿಸಿದ ಪೊಡವಿಗೊಡೆಯ ಶ್ರೀಕೃಷ್ಣ ಪರಮಾತ್ಮ

ಉಡುಪಿ: ನವರಾತ್ರಿಯ ಪ್ರಯುಕ್ತ ಶ್ರೀಕೃಷ್ಣದೇವರಿಗೆ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ‘ಮೋಹಿನಿ’ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಗಿರಿಜಾ ಹೆಲ್ತ್ ಕೇರ್ ಎಂಡ್ ಸರ್ಜಿಕಲ್ಸ್ ವತಿಯಿಂದ ಫಾರ್ಮಸಿಸ್ಟ್ ದಿನಾಚರಣೆ

ಉಡುಪಿ: ಗಿರಿಜಾ ಹೆಲ್ತ್ ಕೇರ್ ಎಂಡ್ ಸರ್ಜಿಕಲ್ಸ್ ನಲ್ಲಿ ಗಿರಿಜಾಗ್ರೂಪ್ ಆಫ್ ಕನ್ ಸರ್ನ್ಸ್ ವತಿಯಿಂದ ಉಡುಪಿಯ ಸೀನಿಯರ್ ಜೇಸಿ ಟೆಂಪಲ್ ಸಿಟಿ ಲೀಜನ್ ಸಹಕಾರದೊಂದಿಗೆ ಸೆ.26 ರಂದು ಉಡುಪಿ ಭಾಗದ ಕೆಲ ಹಿರಿಯ ಫಾರ್ಮಸಿಸ್ಟ್ ಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿನ ಅವರ ನಿಸ್ವಾರ್ಥ ಮತ್ತು ಜವಾಬ್ದಾರಿಯುತ ಸೇವೆಗಾಗಿ ಗುರುತಿಸಿ ಗೌರವಿಸಲಾಯಿತು. ಉಡುಪಿ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಶಂಕರ್ ನಾಯ್ಕ್ ಅತಿಥಿಯಾಗಿ ಪಾಲ್ಗೊಂಡು ಫಾರ್ಮಸಿಸ್ಟ್ ಗಳ ಪ್ರಾಮುಖ್ಯತೆ, ಅವರ ಜವಾಬ್ದಾರಿ, ಅವಿರತ ಸೇವೆಯ ಬಗ್ಗೆ ಮಾತನಾಡಿ, ಗಿರಿಜಾ […]

ಹಿಂದೂ ಸಮಾಜದ ಒಗ್ಗಟ್ಟು ಮತ್ತು ಧರ್ಮ ಜಾಗೃತಿಗಾಗಿ ದುರ್ಗಾದೌಡ್: ಸುನಿಲ್ ಕುಮಾರ್

ಕಾರ್ಕಳ: ಅ.2 ರಂದು ಜಿಲ್ಲೆಯಲ್ಲಿ ದುರ್ಗಾ ದೌಡ್ ಆಯೋಜಿಸಲಾಗಿದ್ದು, ಅದರ ಪೂರ್ವಾಭಾವಿ ಸಭೆ ಸೆ.25 ರಂದು ಕಾರ್ಕಳದ ಗಾಂಧಿ ಮೈದಾನದ ಬಳಿ ಇರುವ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಜರುಗಿತು. ದೇಶದಲ್ಲಿ ಪ್ರಸಕ್ತ ವಾತಾವರಣವನ್ನು ಗಮನಿಸಿದಾಗ ಹಿಂದೂ ಸಮಾಜವು ಒಗ್ಗಟ್ಟಿನೊಂದಿಗೆ ಜಾಗೃತ ಸಮಾಜವನ್ನು ರೂಪಿಸುವ ಅಗತ್ಯವಿದೆ. ದೇಶ ವಿರೋಧೀ ಸಂಘಟನೆಗಳು ವಿಧ್ವಂಸ ಕೃತ್ಯದಲ್ಲಿ ತೊಡಗಿದ್ದು, ತನಿಖೆಯಿಂದ ಸತ್ಯ ಬಯಲಾಗುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಧರ್ಮ ಜಾಗೃತಿಯ ಸಂಕೇತವಾಗಿ ಅ.2 ರಂದು ದುರ್ಗಾ ದೌಡ್ ಅನ್ನು ಆಯೋಜಿಸಲಾಗುತ್ತಿದೆ ಎಂದು […]

ಕಾಪು ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

ಕಾಪು: ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವನ್ನು ಸೆ 26ರಿಂದ ಅ. 05.10.2022ರವರೆಗೆ ಆಚರಿಸಲಾಗುವುದು. ಅ.11 ರಂದು ಚಂಡಿಕಾಯಾಗ ಪೂರ್ಣಾಹುತಿ ಜರಗಲಿರುವುದು. ತಾವು ಇಷ್ಟಮಿತ್ರ ಬಂಧು- ಬಾಂಧವರೊಡಗೂಡಿ ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃತಾರ್ಥರಾಗಬೇಕಾಗಿ ಅಪೇಕ್ಷಿಸುವ, ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು. ಕಾರ್ಯಕ್ರಮಗಳ ವಿವರ: ತಾ 26.09.2022 ರಿಂದ ಪ್ರತಿ ದಿನ ಶ್ರೀ ದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆ ತಾ […]