ಕಾಪು ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

ಕಾಪು: ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವನ್ನು ಸೆ 26ರಿಂದ ಅ. 05.10.2022ರವರೆಗೆ ಆಚರಿಸಲಾಗುವುದು. ಅ.11 ರಂದು ಚಂಡಿಕಾಯಾಗ ಪೂರ್ಣಾಹುತಿ ಜರಗಲಿರುವುದು. ತಾವು ಇಷ್ಟಮಿತ್ರ ಬಂಧು- ಬಾಂಧವರೊಡಗೂಡಿ ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃತಾರ್ಥರಾಗಬೇಕಾಗಿ ಅಪೇಕ್ಷಿಸುವ, ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು.

ಕಾರ್ಯಕ್ರಮಗಳ ವಿವರ:
ತಾ 26.09.2022 ರಿಂದ ಪ್ರತಿ ದಿನ ಶ್ರೀ ದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆ
ತಾ 04.10.2022 ರವರೆಗೆ ಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ಅನ್ನ ಸಂತರ್ಪಣೆ
ತಾ 27.09.2022 ನೇ ಮಂಗಳವಾರ: ಕದಿರು ಕಟ್ಟುವುದು
ತಾ 02.10.2022 ನೇ ರವಿವಾರ: ಶಾರದಾ ಪೂಜೆ
ತಾ 03.10.2022 ನೇ ಸೋಮವಾರ: ದುರ್ಗಾಷ್ಟಮಿ, ದುರ್ಗಾ ನಮಸ್ಕಾರ ಪೂಜೆ
ತಾ 05.10.2022 ನೇ ಬುಧವಾರ: ವಿಜಯದಶಮಿ, ಕಲಶೆ ವಿಸರ್ಜನೆ
ತಾ 11.10.2022 ನೇ ಮಂಗಳವಾರ: ಚಂಡಿಕಾಯಾಗ, ಪೂರ್ಣಾಹುತಿ , ಮಹಾ ಅನ್ನಸಂತರ್ಪಣೆ
ತಾ 26.09.2022 ನೇ ಸೋಮವಾರದಿಂದ ತಾ 04.10.2022 ನೇ ಮಂಗಳವಾರದವರೆಗೆ ಪ್ರತಿ ದಿನ ಸಾಯಂಕಾಲ ಗಂಟೆ 6.00 ರಿಂದ ಭಜನಾ ಕಾರ್ಯಕ್ರಮ ( ವಿವಿಧ ಭಜನಾ ಮಂಡಳಿಯವರಿಂದ) ನಡೆಯಲಿರುವುದು.
ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ತಾ. 26.09.2022 ನೇ ಸೋಮವಾರ ಮೊದಲ್ಗೊಂಡು ತಾ. 04.10.2022 ನೇ ಮಂಗಳವಾರ ಪರ್ಯಂತ ಪ್ರತಿ ದಿನ ರಾತ್ರಿ ಗಂಟೆ 7.00 ಕ್ಕೆ ಶ್ರೀ ದುರ್ಗಾ ನಮಸ್ಕಾರ ಪೂಜೆ,ತಾ. 05.10.2022 ನೇ ಬುಧವಾರ ಚಂಡಿಕಾಯಾಗ ಜರುಗಲಿರುವುದು.

ಮೊ: 9886620944, 9844559928, 9964246255, 9964144100