ಮೃತದೇಹದ ಮರಣೋತ್ತರ ಪರೀಕ್ಷೆಯ ನೂತನ ವಿಧಾನ ‘ವರ್ಟೊಪ್ಸಿ’: ಆಗ್ನೇಯ ಏಷ್ಯಾದಲ್ಲಿ ವರ್ಟೊಪ್ಸಿ ತಂತ್ರಜ್ಞಾನ ಬಳಸುವ ಏಕೈಕ ಆಸ್ಪತ್ರೆ ದೆಹಲಿ ಏಮ್ಸ್

ಶವಪರೀಕ್ಷೆ ಅಥವಾ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಮ್) ಎನ್ನುವುದು ಅತ್ಯಂತ ವಿಶೇಷವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಇದು ವ್ಯಕ್ತಿಯ ಸಾವಿನ ಕಾರಣ ಮತ್ತು ವಿಧಾನವನ್ನು ನಿರ್ಧರಿಸುವ ಮತ್ತು ಯಾವುದೇ ರೋಗ ಅಥವಾ ಗಾಯವನ್ನು ಮೌಲ್ಯಮಾಪನ ಮಾಡುವ ಶವದ ಸಂಪೂರ್ಣ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಸಾಂಪ್ರದಾಯಿಕ ಶವ ಪರೀಕ್ಷೆಯಲ್ಲಿ ಶವದ ದೇಹವನ್ನು ಕತ್ತರಿಸಿ ಪರೀಕ್ಷೆ ನಡೆಸಬೇಕಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ಮೃತರ ಸಂಬಂಧಿಕರಿಗೆ ಈ ವಿಧಾನವು ಇರಿಸು ಮುರುಸನ್ನು ಉಂಟುಮಾಡುತ್ತದೆ. ಸಂಪ್ರದಾಯಗಳಲ್ಲಿ ಮರಣಾನಂತರ ಶವವನ್ನು ಕತ್ತರಿಸುವುದು ನಿಷಿದ್ದವಿದ್ದಲ್ಲಿ ಅಂತಹ ಕುಟುಂಬಿಕರು ವೇದನೆ ಅನುಭವಿಸಬೇಕಾಗುತ್ತದೆ. ಸಾಂಪ್ರದಾಯಿಕ […]

ಉಡುಪಿ: ಕೊಲೆ ಬೆದರಿಕೆ ಹಾಕಿದ್ದ ಆರೋಪಿ ದೋಷಮುಕ್ತ

ಉಡುಪಿ: ಕೊಲೆ ಬೆದರಿಕೆಯೊಡ್ಡಿದ ಆರೋಪಿಯನ್ನು ಆರೋಪ ಮುಕ್ತಗೊಳಿಸಿ, ಬಿಡುಗಡೆ ಮಾಡಿ ಉಡುಪಿ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ವಿನಾಯಕ ವಾನಖಂಡೆ ಅವರು ತೀರ್ಪು ನೀಡಿದ್ದಾರೆ. ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಕುಂಜಾರುಗಿರಿ ಅಂಚೆ ವ್ಯಾಪ್ತಿಯ ನಿವಾಸಿ, ಸದಾನಂದ ಮಡಿವಾಳ ಯಾನೆ ಸಾಧು ಅವರು ಮಹಿಳೆಯೊಬ್ಬರಿಗೆ ಜಾತಿ ನಿಂದನೆ, ಗಾಯ ಹಾಗೂ ಕೊಲೆ ಬೆದರಿಕೆ ಪ್ರಕರಣದಡಿ ವಿಚಾರಣೆಯಲ್ಲಿದ್ದರು. ಬುಧವಾರ ಸಂಪೂರ್ಣ ವಿಚಾರಣೆ ನಡೆಸಿ ಇವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿ ತೀರ್ಪು ನೀಡಲಾಗಿದೆ. […]

ಹಾಸ್ಟೆಲ್ ನಿಂದ ತಪ್ಪಿಸಿಕೊಂಡ ಮೂವರು ವಿದ್ಯಾರ್ಥಿನಿಯರು: ಹುಡುಗಿಯರಿಗಾಗಿ ಶೋಧಿಸುತ್ತಿರುವ ಪೊಲೀಸರು

ಮಂಗಳೂರು: ಬುಧವಾರದಂದು ಇಲ್ಲಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಮೂರು ಪದವಿ ಪೂರ್ವ ವಿದ್ಯಾರ್ಥಿನಿಯರು ತಪ್ಪಿಸಿಕೊಂಡಿದ್ದು, ವಿದ್ಯಾರ್ಥಿನಿಯರನ್ನು ಶೋಧಿಸಲು ಪೊಲೀಸರು ಇತರ ಜಿಲ್ಲೆಗಳ ಠಾಣೆಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ. ಮೂವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಬೆಂಗಳೂರಿನವರಾಗಿದ್ದು, ಒಬ್ಬಾಕೆ ಚಿತ್ರದುರ್ಗದವಳಾಗಿದ್ದಳು. ತನಿಖೆ ನಡೆಸುತ್ತಿರುವ ಪೊಲೀಸರು, ಮೂವರು ವಿದ್ಯಾರ್ಥಿನಿಯರಿಂದ ಯೋಜಿಸಲಾದ ಪೂರ್ವ ಯೋಜಿತ ಕೃತ್ಯ ಇದಾಗಿದೆ ಎನ್ನುವ ಅನುಮಾನ ವ್ಯಕ್ತ ಪಡಿಸಿದ್ದಾರೆ. ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಕಿಟಕಿಯ ಸರಳುಗಳನ್ನು […]

ಮಂಗಳೂರು: ಪಿಎಫ್‌ಐ, ಎಸ್‌ಡಿಪಿಐ ಕಚೇರಿಗಳ ಮೇಲೆ ಎನ್‌ಐಎ ದಾಳಿ

ಮಂಗಳೂರು: ಇಲ್ಲಿನ ಪಿ.ಎಫ್.ಐ, ಎಸ್.ಡಿಪಿ.ಐ ಸಂಘಟನೆಗಳ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಜನರ ವಿರುದ್ಧ ಸಂಸ್ಥೆಯ ರಾಷ್ಟ್ರವ್ಯಾಪಿ ಶೋಧದ ಭಾಗವಾಗಿ ಗುರುವಾರ ಬೆಳಿಗ್ಗೆ ಈ ದಾಳಿ ನಡೆಸಲಾಗಿದೆ. ಎರಡೂ ಸಂಘಟನೆಗಳ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಬಜ್ಪೆ, ನೆಲ್ಲಿಕಾಯಿ ಮಾರ್ಗ, ಕುಳಾಯಿ ಮತ್ತು ಕಾವೂರಿನಲ್ಲಿ ಎನ್.ಐ.ಎ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ವೇಳೆ […]

ಎಡಪಂಥೀಯ ಉಗ್ರವಾದದ ಪ್ರಮಾಣದಲ್ಲಿ ಗಣನೀಯ ಇಳಿಕೆ: ಉಗ್ರವಾದದ ವಿರುದ್ದ ಶೂನ್ಯ ನೀತಿಗೆ ದೊರೆತ ಫಲ

ನವದೆಹಲಿ: ಮೂರು ದಶಕಗಳಿಂದ ಮಾವೋವಾದಿಗಳ ಭದ್ರಕೋಟೆಯಾಗಿದ್ದ ಜಾರ್ಖಂಡ್‌ನ ಬುಧಾ ಪಹಾಡ್ ಅನ್ನು ಇದೀಗ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ ಮತ್ತು ಭದ್ರತಾ ಪಡೆಗಳ ಶಾಶ್ವತ ನೆಲೆಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲದೀಪ್ ಸಿಂಗ್ ಹೇಳಿದ್ದಾರೆ. ಎಡಪಂಥೀಯ ಉಗ್ರವಾದದ ವಿರುದ್ಧ (ಎಲ್‌ಡಬ್ಲ್ಯುಇ) ಭದ್ರತಾ ಪಡೆಗಳು ಸಾಧಿಸಿದ ಯಶಸ್ಸಿನ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಭದ್ರತಾ ಪಡೆಗಳ ಶಿಬಿರಗಳನ್ನು ಸ್ಥಾಪಿಸಲು ಮತ್ತು ಪ್ರದೇಶವನ್ನು ನಿಯಂತ್ರಣಕ್ಕೆ ತರಲು ಈ ವರ್ಷದ ಏಪ್ರಿಲ್‌ನಿಂದ ಬುಧಾ ಪಹಾಡ್‌ನಲ್ಲಿ […]