ಹದಗೆಟ್ಟ ಹಿರಿಯಡಕ- ಗುಡ್ಡೆಯಂಗಡಿ ರಸ್ತೆ: ವಾಹನ ಸವಾರರಿಗೆ ಯಮಕೂಪದ ದರ್ಶನ

ಹಿರಿಯಡಕ: ಉಡುಪಿ ತಾಲೂಕಿನ ಹಿರಿಯಡಕ- ಗುಡ್ಡೆಯಂಗಡಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಈ ದಾರಿಯಲ್ಲಿ ಸಾಗುವಾಗ ಯಮಕೂಪದ ದರ್ಶನವಾಗುತ್ತಿದ್ದು, ವಾಹನ ಸವಾರರು ಜೀವವನ್ನು ಅಂಗೈಯಲ್ಲಿಟ್ಟು ಪ್ರಯಾಣಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಿರಿಯಡಕದಿಂದ ಗುಡ್ಡೆಯಂಗಡಿ ಸಂಪರ್ಕಿಸುವ ರಸ್ತೆಯಲ್ಲಿ ಐದಾರು ಕಿಲೋಮೀಟರ್‌ ವರೆಗೆ ಗುಂಡಿಗಳು ಬಾಯ್ತೆರೆದುಕೊಂಡಿದ್ದು,  ಅಪಾಯಕ್ಕೆ ಆಹ್ವಾನಿಸುವಂತಿದೆ. ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್‌ ಸರ್ಕಲ್‌ನಿಂದ ಆರಂಭಗೊಂಡು ಗುಡ್ಡೆಯಂಗಡಿವರೆಗೆ ರಸ್ತೆಯು ತೀರ ದುಃಸ್ಥಿತಿಯಲ್ಲಿದ್ದು, ವಾಹನಗಳ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಈ ದಾರಿಯಲ್ಲಿ ನಿತ್ಯ ಪ್ರಯಾಣಿಸುವ ವಾಹನ ಸವಾರರು ಮತ್ತು ಸಾರ್ವಜನಿಕರು ಸರ್ಕಾರದ ವಿರುದ್ಧ ಹಿಡಿಶಾಪ […]

ಹಾಸ್ಯ ಜಗತ್ತಿನ ಹೆಸರಾಂತ ಕಲಾವಿದ ರಾಜು ಶ್ರೀವಾಸ್ತವ್ ಇನ್ನಿಲ್ಲ

ನವದೆಹಲಿ: ಹೆಸರಾಂತ ಹಾಸ್ಯನಟ ರಾಜು ಶ್ರೀವಾಸ್ತವ ಅವರು 58 ನೇ ವಯಸ್ಸಿನಲ್ಲಿ ದೆಹಲಿಯ ಏಮ್ಸ್‌ನಲ್ಲಿ ನಿಧನರಾದರು. ಇದನ್ನು ಅವರ ಕುಟುಂಬದವರು ಖಚಿತಪಡಿಸಿದ್ದಾರೆ. ಜಿಮ್ ನಲ್ಲಿ ತಾಲೀಮು ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಅವರನ್ನು ಆಗಸ್ಟ್ 10ರಂದು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. 42 ದಿನಗಳ ಕಾಲ ಕೋಮಾದಲ್ಲಿದ್ದ ಅವರು ಬುಧವಾರದಂದು ನಿಧನ ಹೊಂದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಉ.ಪ್ರ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮು.ಮಂ. ಅರವಿಂದ್ […]

ಇರಾನ್ ನಲ್ಲಿ ತಾರಕ್ಕೇರಿದ ಹಿಜಾಬ್ ವಿರೋಧಿ ಪ್ರತಿಭಟನೆ: ಶಿರವಸ್ತ್ರಗಳನ್ನು ಸುಟ್ಟ ಇರಾನಿ ಮಹಿಳೆಯರು

ತೆಹ್ರಾನ್: ಹಿಜಾಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧನಕ್ಕೊಳಗಾದ ಮಹಿಳೆಯೊಬ್ಬರು ಬಂಧನದ ಸಮಯದಲ್ಲಿ ಸಾವನ್ನಪ್ಪಿದ ನಂತರ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಇರಾನಿ ಮಹಿಳೆಯರು, ಶಿರವಸ್ತ್ರಗಳನ್ನು ಸುಟ್ಟು ಮತ್ತು ತಲೆಕೂದಲನ್ನು ಕತ್ತರಿಸುವ ಮೂಲಕ ತಮ್ಮ ಅಸಮ್ಮತಿಯನ್ನು ಹೊರಹಾಕುತ್ತಿದ್ದಾರೆ. ಇರಾನಿ ಆಡಳಿತದ ವಿರುದ್ದ ಮಹಿಳೆಯರ ಪ್ರತಿಭಟನೆಯು ಐದನೇ ದಿನವನ್ನು ಪ್ರವೇಶಿಸಿದ್ದು, ವ್ಯಾಪಕವಾಗಿ ಇತರ ನಗರ ಮತ್ತು ಪಟ್ಟಣಗಳನ್ನು ಆವರಿಸುತ್ತಿವೆ. ಹಿಜಾಬ್ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಮೂರು ದಿನ ಕೋಮಾದಲ್ಲಿದ್ದ ಮಹ್ಸಾ ಅಮಿನಿ ಎಂಬ ಮಹಿಳೆಯೊಬ್ಬರು ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ ಪ್ರತಿಭಟನೆಯ […]

2023ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ: ಗುಜರಾತಿ ಚಲನಚಿತ್ರ ಛೆಲೋ ಶೋ

2023ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಗುಜರಾತಿ ಚಲನಚಿತ್ರ ಛೆಲೋ ಶೋ(ಕೊನೆಯ ಚಿತ್ರ) ಎಂದು ಘೋಷಿಸಲಾಗಿದೆ . ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವನ್ನು ಪ್ರಕಟಿಸಿದೆ. ಈ ಸಿನಿಮಾವು ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ. ಚಿತ್ರವು ಭಾರತದಲ್ಲಿ ಅಕ್ಟೋಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಂಗ್ಲಿಷ್‌ನಲ್ಲಿ ಲಾಸ್ಟ್ ಫಿಲ್ಮ್ ಶೋ ಎಂದು ಹೆಸರಿಸಲಾದ ಛೆಲೋ ಶೋ, 2021 ರಲ್ಲಿ ರಾಬರ್ಟ್ ಡಿನಿರೋ ಅವರ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ […]

ಕೊಡವೂರು: ಕೇಂದ್ರದ ಅನುದಾನದಲ್ಲಿ ನಿರ್ಮಾಣವಾದ ಮನೆ ಹಸ್ತಾಂತರ

ಕೊಡವೂರು: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನ ಕೇಂದ್ರ ಸರ್ಕಾರದ ಅನುದಾನದಲ್ಲಿ ವಸತಿ ನಿರ್ಮಾಣವಾಗಿದ್ದು, ಇದರ ಗೃಹಪ್ರವೇಶ ಕೊಡವೂರಿನಲ್ಲಿ ನಡೆಯಿತು. 2 ವರ್ಷಗಳ ಹಿಂದೆ ನೆರೆಯಲ್ಲಿ ಮನೆ ಕಳೆದು ಕೊಂಡವರಿಗೆ ಕೇಂದ್ರದ ಅನುದಾನದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಹೀಗೆ ಕೇಂದ್ರದ ಎಲ್ಲಾ ಅನುದಾನವನ್ನು ಬಳಸಿಕೊಂಡು ಪ್ರತಿಮನೆಗೆ ತಲುಪಿಸುವ ವ್ಯವಸ್ಥೆ ಕೊಡವೂರು ವಾರ್ಡಿನಲ್ಲಿ ಮಾಡಲಾಗಿದ್ದು ಮಂಗಳವಾರ ಕೊಡವೂರಿನ ವಿವೇಕಾನಂದ ಮಾರ್ಗ ಅತ್ತಲಾಡಿ ಪರಿಸರದ ತೋಮ ಪೂಜಾರಿ ಇವರ ಮನೆಯ ಗೃಹಪ್ರವೇಶವನ್ನು ಮಾಡಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮನೆ […]