ಕ್ರಿಯೇಟಿವ್‌ ಪಿಯು ಕಾಲೇಜಿನಲ್ಲಿ ಕೆಸರ್ಡೊಂಜಿ ದಿನ ಕಾರ್ಯಕ್ರಮ

ಕಾರ್ಕಳ: ಕ್ರಿಯೇಟಿವ್‌ ಪ.ಪೂ. ಕಾಲೇಜಿನಲ್ಲಿ ಹಸಿರೊಡನೆ ಕಲಿಕೆಯ ಕಲರವ ಕಾರ್ಯಕ್ರಮ ಸೆ.19ರಂದು  ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ  ಹರಿಶ್ಚಂದ್ರ ಕುಲಾಲ್‌, ಇಂದು ನಾವು ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಗಮನಿಸುತ್ತಿದ್ದೇವೆ ಆದರೆ ನಮಗೆ ಅನ್ನ ನೀಡುವ ಕೃಷಿ ಭೂಮಿ ಮತ್ತು ಕೃಷಿಕರ ಕುರಿತು ತಿಳುವಳಿಕೆ ಪಡೆಯಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು ಭಾವಿಸದೇ ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]

ಜಾನುವಾರುಗಳಲ್ಲಿ ಹರಡುತ್ತಿದೆ ಮುದ್ದೆಚರ್ಮ ರೋಗ: ಮಾರಕ ರೋಗದಿಂದ ಪ್ರಾಣತೆರುತ್ತಿರುವ ಹಸುಗಳು

ನವದೆಹಲಿ: ಭಾರತದ ಎಂಟು ರಾಜ್ಯಗಳಲ್ಲಿ ಜಾನುವಾರುಗಳಲ್ಲಿ ಮುದ್ದೆ ಚರ್ಮ ರೋಗವು ವೇಗವಾಗಿ ಹರಡುತ್ತಿರುವುದರಿಂದ ಜುಲೈನಿಂದ 85,000 ಜಾನುವಾರುಗಳು ಸಾವನ್ನಪ್ಪಿವೆ ಮತ್ತು 2 ಲಕ್ಷಕ್ಕೂ ಅಧಿಕ ಹಸುಗಳಲ್ಲಿ ಸೋಂಕು ಕಂಡುಬಂದಿದೆ ಎನ್ನಲಾಗಿದೆ. ವೈರಾಣು ಕಾಯಿಲೆಯ ಏಕಾಏಕಿ ಏರಿಕೆಯು ದೇಶದಲ್ಲಿ ಜಾನುವಾರುಗಳಿಗಾಗಿ ಬೃಹತ್ ಚುಚ್ಚುಮದ್ದು ಅಭಿಯಾನವನ್ನು ಅನ್ನು ಪ್ರೇರೇಪಿಸಿದೆ. ಮುದ್ದೆ ಚರ್ಮ ರೋಗದ ಲಕ್ಷಣಗಳು 1. ವೈರಾಣು ರೋಗ- ಮುದ್ದೆ ಚರ್ಮ ರೋಗ- ಮುಖ್ಯವಾಗಿ ಹಸುಗಳ ಮೇಲೆ ಪರಿಣಾಮ ಬೀರುತ್ತದೆ. ಈ ವೈರಸ್ ಪಾಕ್ಸ್‌ವಿರಿಡೆ ಕುಟುಂಬದ ಕ್ಯಾಪ್ರಿಪಾಕ್ಸ್‌ವೈರಸ್ ಕುಲಕ್ಕೆ ಸೇರಿದೆ. […]

ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾಟ: ನಿಟ್ಟೆ ಪ.ಪೂ ಕಾಲೇಜಿನ ಬಾಲಕರ ತಂಡ ಪ್ರಥಮ

ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾರ್ಕಳದ ಕ್ರೈಸ್ಟ್ ಕಿಂಗ್ ಪಿ.ಯು ಕಾಲೇಜಿನ ಆಶ್ರಯದಲ್ಲಿ ಸೆ.19 ರಂದು ನಡೆದ ಕಾರ್ಕಳ ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ನಿಟ್ಟೆಯ ಡಾ. ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದೆ.

ಬಿಹಾರದ ನಿಗೂಢ ಗುಹೆಯಲ್ಲಿದೆ ಅಪರಿಮಿತ ಸ್ವರ್ಣ ಭಂಡಾರ? 1500 ವರ್ಷಗಳ ಹಿಂದಿನ ರಹಸ್ಯದಿಂದ ಪರದೆ ಸರಿಸಲು ಯಾರಿಂದಲೂ ಸಾಧ್ಯವಾಗಿಲ್ಲ!

ಬಿಹಾರದ ರಾಜ್‌ಗಿರ್‌ನಲ್ಲಿರುವ ವೈಭಾರ್ ಬೆಟ್ಟಗಳಲ್ಲಿ ಮಾನವ ನಿರ್ಮಿತ ಗುಹೆಗಳು ಸಾವಿರಾರು ವರ್ಷಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಸ್ವರ್ಣ ಭಂಡಾರವೆನ್ನುವ ಹೆಸರಿನಿಂದ ಕರೆಸಿಕೊಳ್ಳುವ ಈ ಗುಹೆಯಲ್ಲಿ ಲೆಕ್ಕವಿಲ್ಲದಷ್ಟು ಅತ್ಯಮೂಲ್ಯ ಸ್ವರ್ಣದ ಖಜಾನೆಯನ್ನು ಬಚ್ಚಿಡಲಾಗಿದೆ ಎನ್ನುವುದೇ ಈ ಗುಹೆಯನ್ನು ಸಹಸ್ರಾರು ಜನರನ್ನು ಇತ್ತ ಆಕರ್ಷಿಸುತ್ತಿರುವುದು. ದಂತಕಥೆಗಳ ಪ್ರಕಾರ ಈ ಗುಹೆಯನ್ನು ವೈರದೇವ ಎಂಬ ಜೈನ ಸನ್ಯಾಸಿಯೊಬ್ಬರು ನಿರ್ಮಿಸಿದ್ದು, ತನ್ನ ಧ್ಯಾನಕ್ಕಾಗಿ ಈ ಗುಹೆಯನ್ನು ಬಳಸುತ್ತಿದ್ದರು. ಇದೆ ಸಮಯದಲ್ಲಿ ಬಿಂಬಿಸಾರನೆನ್ನುವವನೊಬ್ಬನು ತನ್ನ ಅಪರಿಮಿತ ಪರಾಕ್ರಮದ ಮೂಲಕ 15 ನೇ ವಯಸ್ಸಿನಲ್ಲಿಯೆ ರಾಜನಾಗುತ್ತಾನೆ ಮತ್ತು […]

ಕೇಂದ್ರ ಸಚಿವೆಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಗೆ ನಮನ ಸಲ್ಲಿಕೆ

ವರ್ಕಲ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಸಾಮಾಜಿಕ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ದಿನದಂದು ಕೇರಳದ ವರ್ಕಲದಲ್ಲಿನ ಶ್ರೀ ನಾರಾಯಣ ಗುರುಗಳ ಸಮಾಧಿಗೆ ಭೇಟಿ ನೀಡಿ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.