ಗುಂಡಿಬೈಲು ಪಡಿತರ ವಿತರಣೆ ಸ್ಥಗಿತ: ಪೊರ್ಟೆಬಿಲಿಟಿ ಮೂಲಕ ಆಹಾರ ಸರಬರಾಜು ಅಬಾಧಿತ

ಉಡುಪಿ: ಉಡುಪಿ ತಾಲೂಕಿನ ಗುಂಡಿಬೈಲು ನ್ಯಾಯಬೆಲೆ ಅಂಗಡಿ ಮಾಲಿಕ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಸದ್ರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಸ್ಥಗಿತಗೊಳಿಸಲಾಗಿರುತ್ತದೆ. ಪ್ರಸ್ತುತ ಪೋರ್ಟೆಬಿಲಿಟಿ ಮೂಲಕ ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶವಿರುವುದರಿಂದ ಗುಂಡಿಬೈಲು ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಪಡಿತರದಾರರು ಅಂಬಾಗಿಲು ಹೆರ್ಗ ಸಿ.ಎ ಬ್ಯಾಂಕ್, ಪೆರಂಪಳ್ಳಿ ಹೆರ್ಗ ಸಿ.ಎ ಬ್ಯಾಂಕ್, ಆದಿ ಉಡುಪಿ ಲ್ಯಾಂಪ್ ಸೊಸೈಟಿ ಅಥವಾ ಇತರೆ ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ಆದೇಶದವರೆಗೆ ಪಡಿತರ ಪಡೆದುಕೊಳ್ಳಬಹುದಾಗಿದೆ ಎಂದು ಆಹಾರ ಮತ್ತು […]

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಬಿಡುಗಡೆ: ಚಿರತೆಗಳನ್ನು ನೋಡಲು ಇನ್ನೂ ಸ್ವಲ್ಪ ಕಾಯಬೇಕು ಎಂದ ಪ್ರಧಾನಿ

ನಮೀಬಿಯಾದಿಂದ ಸ್ಥಳಾಂತರಗೊಳಿಸಲಾದ 8 ಚಿರತೆಗಳನ್ನು ಶನಿವಾರದಂದು ಪ್ರಧಾನಿ ಮೋದಿ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದರು. ಆ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿ, ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸಿದಾಗ ನಮ್ಮ ಭವಿಷ್ಯವೂ ಸುಭದ್ರವಾಗುತ್ತದೆ. ಬೆಳವಣಿಗೆ ಮತ್ತು ಸಮೃದ್ಧಿಯ ಮಾರ್ಗಗಳು ಸಹ ತೆರೆದುಕೊಳ್ಳುತ್ತವೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ಮತ್ತೆ ಓಡಾಡುವಾಗ ಹುಲ್ಲುಗಾವಲು ಪರಿಸರ ವ್ಯವಸ್ಥೆ ಮತ್ತೆ ಪುನಃಸ್ಥಾಪಿತವಾಗುತ್ತದೆ. ಜೈವಿಕ ವೈವಿಧ್ಯತೆ ಮತ್ತಷ್ಟು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ಪರಿಸರ ಪ್ರವಾಸೋದ್ಯಮವೂ ಹೆಚ್ಚಾಗಲಿದೆ, ಇಲ್ಲಿ ಅಭಿವೃದ್ಧಿಯ ಹೊಸ ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ, […]

ತ್ರಿಶಾ ಕ್ಲಾಸಸ್ ನಲ್ಲಿ ಸಿಎ ಫೌಂಡೇಶನ್ ಕ್ರ್ಯಾಶ್ ಕೋರ್ಸ್ ಆರಂಭ

ಉಡುಪಿ: ಕರ್ನಾಟಕದ ಕರಾವಳಿ ಭಾಗದಲ್ಲಿ ವಾಣಿಜ್ಯ ಶಿಕ್ಷಣದ ಜೊತೆ ವೃತ್ತಿಪರ ಕೋರ್ಸ್ ಗಳೊಂದಿಗೆ ವಿಶಿಷ್ಟ ಛಾಪು ಮೂಡಿಸಿರುವ ತ್ರಿಶಾ ಕ್ಲಾಸಸ್ ವತಿಯಿಂದ ಡಿಸೆಂಬರ್ 2022 ರಲ್ಲಿ ಸಿಎ ಫೌಂಡೇಶನ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 20 ರವರೆಗೆ ಕ್ರ್ಯಾಶ್ ಕೋರ್ಸ್ ಹಾಗೂ ನವೆಂಬರ್ ತಿಂಗಳಲ್ಲಿ ಮಾದರಿ ಸಿದ್ಧತಾ ಪರೀಕ್ಷೆ ಆರಂಭವಾಗಲಿದೆ. ಕ್ರ್ಯಾಶ್ ಕೋರ್ಸ್ ನ ವಿಶೇಷತೆಗಳು: # ನುರಿತ ಪ್ರಾಧ್ಯಾಪಕರಿಂದ ತರಬೇತಿ # ತರಬೇತಿ ಅಂತ್ಯದಲ್ಲಿ ರಿವಿಜ಼ನ್ ಪುಸ್ತಕ # ಮಾದರಿ ಸಿದ್ಧತಾ […]

ಪ್ರಧಾನಿ ಮೋದಿಯವರ 1200 ಕ್ಕೂ ಹೆಚ್ಚು ಸ್ಮರಣಿಕೆಗಳು ಮತ್ತು ಉಡುಗೊರೆಗಳ ಇ-ಹರಾಜು ಪ್ರಾರಂಭ

ನವದೆಹಲಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಅವರಿಗೆ ದೊರೆತ ಸ್ಮರಣಿಕೆಗಳು ಮತ್ತು ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಶನಿವಾರದಂದು ಆರಂಭವಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ಈ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿದೆ. ಇದು ಹಾರಾಜು ಪ್ರಕ್ರಿಯೆಯ ನಾಲ್ಕನೇ ಆವೃತ್ತಿಯಾಗಿದ್ದು, ಅಕ್ಟೋಬರ್ 2 ರವರೆಗೆ ಇ-ಹರಾಜು ಪ್ರಕ್ರಿಯೆ ಮುಂದುವರಿಯಲಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಇ-ಹರಾಜು ಪ್ರಾರಂಭವಾಗಿದ್ದು, https://pmmementos.gov.in ನಲ್ಲಿ ನೋಂದಣಿ ಮಾಡುವ ಮೂಲಕ ಭಾಗವಹಿಸಿ ಪ್ರಧಾನಿ ಮೋದಿಯವರಿಗೆ ದೊರೆತ ಪಟ್ಟಿಮಾಡಲಾದ ವಿಶೇಷ ಉಡುಗೊರೆಗಳ ಹರಾಜಿನಲ್ಲಿ ಭಾಗವಹಿಸಬಹುದು ಎಂದು […]

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಕುಂದಾಪುರ: ಕುಂದಾಪುರ ತಾಲ್ಲೂಕಿನ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಇವರು ಪಂದ್ಯವನ್ನುದ್ಘಾಟಿಸಿ ಮಾತನಾಡಿ, ಪಾಠದ ಜೊತೆಗೆ ಆಟವೂ ಕೂಡ ಅಷ್ಟೇ ಮುಖ್ಯವಾಗಿದೆ. ವಿದ್ಯಾರ್ಥಿಗಳು ಲವಲವಿಕೆಯಿಂದ ಭಾಗವಹಿಸಿದಾಗ ಆಟಕ್ಕೆ ಕಳೆಬರುತ್ತದೆ. ಸ್ಪರ್ಧಾಳುಗಳು ಆಟದ ಕೊನೆಯವರೆಗೂ ತಂಡದ ಉತ್ಸಾಹವನ್ನು ಕಳೆದುಕೊಳ್ಳದೆ ಹುರುಪಿನೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸುವಂತೆ ಆಟವಾಡಬೇಕೆಂದು ಹೇಳುತ್ತಾ, ಸಂಸ್ಥೆಯ ಅಚ್ಚುಕಟ್ಟಾದ ಕ್ರೀಡಾ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ […]