ಕಂಬಳ ಪ್ರಶಸ್ತಿಯ ಸರದಾರ ತೆಳ್ಳಾರು ಮೋಡೆ ಇನ್ನಿಲ್ಲ

ಕಾರ್ಕಳ: ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ತೆಳ್ಳಾರು ಮೋಡೆ ಇನ್ನಿಲ್ಲ. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರೂ, ಔಷಧಿಗೆ ಸ್ವಂದಿಸದೇ ಶನಿವಾರ ಮದ್ಯಾಹ್ನ ಸಾವನ್ನಪ್ಪಿದೆ. ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಕಿರಿಯ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿರುವ ತೆಳ್ಳಾರು ಮೋಡೆ, ಅಡ್ಡ ಹಲಗೆಯಲ್ಲಿ ಪ್ರತಿ ಬಾರಿಯೂ ಸರಣಿ ಪ್ರಶಸ್ತಿ ತನ್ನದಾಗಿರಿಸುವ ಮೂಲಕ ಕಂಬಳ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಕಾರ್ಕಳ ತೆಳ್ಳಾರು ನೇರೋಳ್ಳ ಪಲ್ಕೆ ಬರ್ಕೆ ಮನೆಯ ಕೋಣ ಇದಾಗಿರುವ ಮೂಲಕ ದುರ್ಗ- ತೆಳ್ಳಾರು ಹೆಸರು ಕಂಬಳ […]

ಭಾರತೀಯ ವೈದ್ಯಕೀಯ ಸಂಘದ ವಾರ್ಷಿಕ ಕುಟುಂಬ ಸಮ್ಮಿಲನ ಕಾರ್ಯಕ್ರಮ

ಉಡುಪಿ: ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ವಾರ್ಷಿಕ ಕುಟುಂಬ ಸಮ್ಮಿಲನ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಇತೀಚೆಗೆ ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯತು. ಸಂಘದ ಅಧ್ಯಕ್ಷ ಡಾಕ್ಟರ್ ವಿನಾಯಕ ಶೆಣೈ, ಡಾಕ್ಟರ್ ಹರಿಚಂದ್ರ ಹಾಗೂ ಡಾಕ್ಟರ್ ನವೀನ ಬಲ್ಲಾಳ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾಕ್ಟರ್ ಪಿ.ವಿ. ಭಂಡಾರಿ ಅವರನ್ನು ಅಭಿನಂದಿಸಲಾಯಿತು. ಸಂಘದ ೨೫೦ಕ್ಕೂ ಹೆಚ್ಚಿನ ಸದಸ್ಯರು ಮನೋರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಸಂಪದ ಉಡುಪಿ ವತಿಯಿಂದ ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಅಭಿಯಾನ

ಉಡುಪಿ: ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಸಂಪದ ಉಡುಪಿ ಸಹಯೋಗದಲ್ಲಿ ರಾಷ್ಟ್ರೀಯ ಸಂಸ್ಥೆಯಾದ ಕ್ಯಾರಿಟಾಸ್ ಇಂಡಿಯಾ ಜೊತೆ ಕೈಜೋಡಿಸಿ ಕ್ಯಾನರ್ ಪೀಡಿತರಿಗಾಗಿ ಕೇಶ ದಾನ ಮಾಡುವ ಅಭಿಯಾನವನ್ನು ಹಮ್ಮಿಕೊಂಡಿದೆ. ದೇಶದಲ್ಲಿ ಹಲವಾರು ಕ್ಯಾನ್ಸರ್ ಪೀಡಿತ ರೋಗಿಗಳಿದ್ದು ಚಿಕಿತ್ಸೆಯ ಸಂದರ್ಭದಲ್ಲಿ ಇವರು ತಮ್ಮ ಕೇಶವನ್ನು ಕಳೆದುಕೊಂಡು ಮುಜುಗರ ಪಟ್ಟುಕೊಳ್ಳುತ್ತಾರೆ ಅಥವಾ ಖಿನ್ನತೆಗೆ ಜಾರುತ್ತಾರೆ. ಇಂತಹವರಿಗಾಗಿ ವಿಗ್ ಗಳನ್ನು ತಯಾರಿಸಲು ಕೂದಲಿನ ಅವಶ್ಯಕತೆ ಇರುತ್ತದೆ. ಕ್ಯಾನ್ಸರ್ ಪೀಡಿತರು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಕೇಶದಾನ ಮಾಡುವ ಇಚ್ಛೆ […]

ರಾಜ್ಯಾದ್ಯಂತ 15 ದಿನಗಳ ಬೃಹತ್ ಆರೋಗ್ಯ ಅಭಿಯಾನ: ಸಚಿವ ಸುಧಾಕರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2, ಗಾಂಧಿ ಜಯಂತಿಯವರೆಗೆ 15 ದಿನಗಳ ಬೃಹತ್ ಆರೋಗ್ಯ ಅಭಿಯಾನವನ್ನು ರಾಜ್ಯ ಸರ್ಕಾರವು ಕೈಗೆತ್ತಿಕೊಳ್ಳುತ್ತಿದೆ. ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಪ್ರಕಾರ, ಮಕ್ಕಳಿಂದ ಹಿಡಿದು ಮುದುಕರವರೆಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಭಿಯಾನವನ್ನು ಉದ್ಘಾಟಿಸಲಾಗುವುದು. ಶುಕ್ರವಾರ ಎಲ್ಲ ಜಿಲ್ಲೆಗಳ ಡಿಎಚ್‌ಒಗಳು […]

ಮಾನವ ಶ್ರಮದಿಂದ ಮರಳು ತೆರವು: ದಾಖಲೆ ಸಲ್ಲಿಕೆ ಅವಧಿ ವಿಸ್ತರಣೆ

ಉಡುಪಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಟೆಂಡರ್ ಕಂ ಹರಾಜು ಮೂಲಕ ಮಾನವ ಶ್ರಮದಿಂದ ಮರಳು ಬ್ಲಾಕ್‌ಗಳನ್ನು ವಿಲೇವಾರಿ ಮಾಡಲು ಜಿಲ್ಲೆಯಲ್ಲಿ ಒಂದು ವರ್ಷದಿಂದ ವಾಸ್ತವ್ಯ ಹೊಂದಿರುವ ಬಗ್ಗೆ ಸಂಬಂಧಪಟ್ಟ ತಾಲೂಕು ತಹಶೀಲ್ದಾರರಿಂದ ವಾಸ ದೃಢೀಕರಣ ಪತ್ರ ಹಾಗೂ ಇತರೆ ಪೂರಕ ದಾಖಲೆಗಳನ್ನು ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ಕಚೇರಿಗೆ ಸಲ್ಲಿಸುವ ಅವಧಿಯನ್ನು ಸೆಪ್ಟಂಬರ್ 20 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂ ವಿಜ್ಞಾನಿ ಯವರ […]