ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಸಂಪದ ಉಡುಪಿ ವತಿಯಿಂದ ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಅಭಿಯಾನ

ಉಡುಪಿ: ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಸಂಪದ ಉಡುಪಿ ಸಹಯೋಗದಲ್ಲಿ ರಾಷ್ಟ್ರೀಯ ಸಂಸ್ಥೆಯಾದ ಕ್ಯಾರಿಟಾಸ್ ಇಂಡಿಯಾ ಜೊತೆ ಕೈಜೋಡಿಸಿ ಕ್ಯಾನರ್ ಪೀಡಿತರಿಗಾಗಿ ಕೇಶ ದಾನ ಮಾಡುವ ಅಭಿಯಾನವನ್ನು ಹಮ್ಮಿಕೊಂಡಿದೆ. ದೇಶದಲ್ಲಿ ಹಲವಾರು ಕ್ಯಾನ್ಸರ್ ಪೀಡಿತ ರೋಗಿಗಳಿದ್ದು ಚಿಕಿತ್ಸೆಯ ಸಂದರ್ಭದಲ್ಲಿ ಇವರು ತಮ್ಮ ಕೇಶವನ್ನು ಕಳೆದುಕೊಂಡು ಮುಜುಗರ ಪಟ್ಟುಕೊಳ್ಳುತ್ತಾರೆ ಅಥವಾ ಖಿನ್ನತೆಗೆ ಜಾರುತ್ತಾರೆ. ಇಂತಹವರಿಗಾಗಿ ವಿಗ್ ಗಳನ್ನು ತಯಾರಿಸಲು ಕೂದಲಿನ ಅವಶ್ಯಕತೆ ಇರುತ್ತದೆ.

ಕ್ಯಾನ್ಸರ್ ಪೀಡಿತರು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಕೇಶದಾನ ಮಾಡುವ ಇಚ್ಛೆ ಇದ್ದವರು ಉಡುಪಿಯ ಸಂಪದ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ಕೇಶವನ್ನು ದಾನ ಮಾಡಬಹುದು.

ಕೇಶದಾನ ಮಾಡುವ ನಿಯಮಗಳು:

# ದಾನಮಾಡಲಿಚ್ಚಿಸುವ ಕೇಶವು 12 ಇಂಚಿಗಿಂತ ಹೆಚ್ಚು ಉದ್ದವಿರಬೇಕು, ಆದ್ಯತೆಯನುಸಾರ 18 ಇಂಚಿಗಿಂತ ಉದ್ದ
# ಕೂದಲನ್ನು ಕತ್ತರಿಸುವ ಮೊದಲು ಅದನ್ನು ಜಿಗುಟಿಲ್ಲದಂತೆ ಸ್ವಚ್ಛಗೊಳಿಸಿ ಆಮೇಲೆ ಅದನ್ನು ಒಣಗಿಸಿ ಸ್ವಚ್ಛವಾದ ಕೂದಲನ್ನು ಮಾತ್ರ ನೀಡಬೇಕು.
# ಕೂದಲನ್ನು ಕತ್ತರಿಸಿದ ಬಳಿಕ ಸಿಕ್ಕಾಗದಂತೆ ಅದನ್ನು ಮೂರು ಭಾಗಗಳಲ್ಲಿ(ಮೇಲೆ, ಮಧ್ಯ ಮತ್ತು ಕೆಳಗೆ) ರಬ್ಬರ್ ಬ್ಯಾಂಡಿನಿಂದ ಕಟ್ಟಿರಬೇಕು.
# ಕಟ್ಟಿದ ಕೂದಲನ್ನು ಸ್ವಚ್ಛವಾದ ಬ್ಯಾಗಿನಲ್ಲಿಟ್ಟು ಸಂಬಂಧಪಟ್ಟವರಿಗೆ ಹಸ್ತಾಂತರಿಸಬೇಕು.

ಸಂಪದ ಸಂಸ್ಥೆಯ ಕಡೆಯಿಂದ ಕೇಶದಾನಿಗಳಿಗೆ ಅವರ ಹೆಸರಿನಲ್ಲಿ ಕೇಶದಾನದ ಪ್ರಮಾಣಪತ್ರ ನೀಡಲಾಗುವುದು.

ಆಸಕ್ತ ದಾನಿಗಳು ಇವರನ್ನು ಸಂಪರ್ಕಿಸಬಹುದಾಗಿದೆ

ರೊ.ಡಾ ಡಿ ಶ್ರೀಧರ್ 9900688477, ರೊ. ನಿತ್ಯಾನಂದ ನಾಯಕ್ 9844547477 , ರೊ. ಹಿಲ್ಡಾ ಕಾರ್ನೆಲಿಯೋ 9945271585