ಕಡಿಯಾಳಿ ತಿರುಗುವ ಮುಚ್ಚಿಗೆ ನಿರ್ಮಾತೃ-ಖ್ಯಾತ ಕಾಷ್ಠ ಶಿಲ್ಪಿ ಸುದರ್ಶನ ಆಚಾರ್ಯ ಇವರಿಗೆ  ಎಸ್.ಕೆ.ಜಿ.ಐ- ಫಾಲ್ಕೆ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇವರು ವಿಶ್ವಕರ್ಮರ ಸಾಂಪ್ರದಾಯಿಕ ಪಂಚವೃತ್ತಿಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕುಶಲ ಕರ್ಮಿಗಳನ್ನು ಗುರುತಿಸಿ ಗೌರವಿಸಲು ನೀಡುವ ‘ಎಸ್.ಕೆ.ಜಿ.ಐ-ಫಾಲ್ಕೆ ಪ್ರಶಸ್ತಿ’ ಗೆ ಕಡಿಯಾಳಿ ತಿರುಗುವ ಮುಚ್ಚಿಗೆಯ ನಿರ್ಮಾತೃ ಕಾಷ್ಠ ಶಿಲ್ಪಿ  ಸುದರ್ಶನ ಆಚಾರ್ಯ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಸ್ವರ್ಣ ಶಿಲ್ಪ ಕ್ಷೇತ್ರದ ಸಾಧನೆಗಾಗಿ ಎಂ.ಸುಧಾಮ‌ ಆಚಾರ್ಯ ಮಂಗಳೂರು, ಎರಕ ಶಿಲ್ಪಿ ನಾಗೇಶ್ ಆಚಾರ್ಯ ಶಂಕರಪುರ, ಆಯಸ್ ಶಿಲ್ಪಿ ಗೋಪಾಲ‌ ಆಚಾರ್ಯ ಪುತ್ತೂರು ಮತ್ತು ಶಿಲಾ ಶಿಲ್ಪ ಕ್ಷೇತ್ರದ ವಿಶೇಷ ಸಾಧನೆಗೈದ […]

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಸರು ತಂದ ಕೊಡವೂರಿನ ಮಗಳಿಗೆ ಸನ್ಮಾನ 

ಉಡುಪಿ:  ಕೊಡವೂರಿನ ಜುಮಾದಿ ನಗರದ ಶ್ರೀನಿವಾಸ ಹಾಗೂ ಗಿರಿಜಾ ಸುವರ್ಣ ದಂಪತಿಗಳ ಪುತ್ರಿ ಶ್ರೀಮತಿ ಶಶಿಕಲಾ ಪ್ರಕಾಶ್ ಇವರು ಕೊಡವೂರು ಹಾಗೂ ಕ್ರಿಶ್ಚಿಯನ್ ಹೈಸ್ಕೂಲ್ ಎಂ ಜಿ ಎಂ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಪಡೆದು ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವು ಪದಕ ಪಡೆದು,  18 ವರ್ಷ ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರವಾದ ಬಹರೈನ್ ಗೆ  ತೆರಳಿ ಅಲ್ಲಿನ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಇವರಿಗೆ ಕೊಡವೂರು ಹಾಗೂ ಉಡುಪಿ ಜಿಲ್ಲೆಯ ನಾಗರಿಕರ […]

ಮಣಿಪಾಲ: ಮೀನು ಹಿಡಿಯಲು ಹೋದ ವ್ಯಕ್ತಿ ಕೆರೆಗೆ ಬಿದ್ದು ಸಾವು

ಮಣಿಪಾಲ: ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರು ಮಣಿಪಾಲದ ಮಣ್ಣಪಳ್ಳ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಕುಂದಾಪುರದ ಪ್ರಕಾಶ್ (35) ಎಂದು ಗುರುತಿಸಲಾಗಿದೆ. ಇವರು ಮಣ್ಣಪಳ್ಳ ಕೆರೆಯಲ್ಲಿ ಗಾಳಹಾಕಿ ಮೀನು ಹಿಡಿಯುತ್ತಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಹಾಗೂ ಮಣಿಪಾಲ ಠಾಣಾಧಿಕಾರಿ ರಾಜಶೇಖರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಾದರು.

ಪ್ರಧಾನಿ ಮೋದಿ ಜನ್ಮದಿನದಿಂದ ಮಹಾತ್ಮಾ ಗಾಂಧಿ ಜನ್ಮದಿನದವರೆಗೆ ಬಿಜೆಪಿ ಸೇವಾ ಪಾಕ್ಷಿಕ ಅಭಿಯಾನ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಅಪ್ರತಿಮ ನಾಯಕತ್ವದಲ್ಲಿ ಕೇಂದ್ರ ಸರಕಾರವು ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ. ಸರಕಾರದ ಅನೇಕ ಜನಪರ ಯೋಜನೆಗಳನ್ನು ಸ್ವೀಕರಿಸಿ ಫಲಾನುಭವಿಗಳಾಗುವ ಮೂಲಕ ದೇಶವಾಸಿಗಳು ಇದನ್ನು ಅನುಮೋದಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಹೇಳಿದರು. ಅವರು ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ, ಸೆ.25 ರಂದು ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್‌ ಉಪಾಧ್ಯಾಯರವರ ಜನ್ಮದಿನ, ಅ.2 ರಂದು ಮಹಾತ್ಮಾ ಗಾಂಧಿ […]

ಬೈಂದೂರು: ಮಹಿಳೆ ನಾಪತ್ತೆ

ಉಡುಪಿ: ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮದ ಹಾಲಂಬೇರು ಗುಡ್ಡೆಮನೆ ನಿವಾಸಿ ಸಾಕು (52) ಎಂಬ ಮಹಿಳೆಯು ಸೆಪ್ಟಂಬರ್ 8 ರಂದು ಬೆಳಗ್ಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 08254-251033, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 08254-251031 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೈಂದೂರು ಪೊಲೀಸ್ ಠಾಣೆಯ […]