ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಸರು ತಂದ ಕೊಡವೂರಿನ ಮಗಳಿಗೆ ಸನ್ಮಾನ 

ಉಡುಪಿ:  ಕೊಡವೂರಿನ ಜುಮಾದಿ ನಗರದ ಶ್ರೀನಿವಾಸ ಹಾಗೂ ಗಿರಿಜಾ ಸುವರ್ಣ ದಂಪತಿಗಳ ಪುತ್ರಿ ಶ್ರೀಮತಿ ಶಶಿಕಲಾ ಪ್ರಕಾಶ್ ಇವರು ಕೊಡವೂರು ಹಾಗೂ ಕ್ರಿಶ್ಚಿಯನ್ ಹೈಸ್ಕೂಲ್ ಎಂ ಜಿ ಎಂ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಪಡೆದು ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವು ಪದಕ ಪಡೆದು,  18 ವರ್ಷ ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರವಾದ ಬಹರೈನ್ ಗೆ  ತೆರಳಿ ಅಲ್ಲಿನ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಇವರಿಗೆ ಕೊಡವೂರು ಹಾಗೂ ಉಡುಪಿ ಜಿಲ್ಲೆಯ ನಾಗರಿಕರ ಪರವಾಗಿ ರಾಜಾoಗಣ ಸಭಾಂಗಣದಲ್ಲಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ,  ಇದು ನಮಗೆ ಹೆಮ್ಮೆ ತಂದಿದೆ.  ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೇರೆ ದೇಶಕ್ಕೆ ಹೋಗಿ ಇಷ್ಟು ಸಾಧನೆ ಮಾಡಿದವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಇವರ ಸಾಧನೆ ಮುಂದಿನ ಪೀಳಿಗೆಯವರಿಗೆ ಮಾದರಿ ಆಗಲಿ ಎಂದರು.

ಈ ಸಂದರ್ಭ ದಲ್ಲಿ ಆಳ್ವಾಸ್ ಸಮೂಹ ಸಂಸ್ಥೆಯ ಸಂ ಸ್ಥಾಪಕ ಡಾ. ಮೋಹನ್ ಆಳ್ವ , ಸಮಾಜ ಕಲ್ಯಾಣ ಸಚಿವ ಕೋಟ  ಶ್ರೀನಿವಾಸ್ ಪೂಜಾರಿ, ರಾಷ್ಟ್ರೀಯ ಪ. ಪೂ ವಿದ್ಯಾರ್ಥಿಗಳ ಶಿಕ್ಷಕ ರಕ್ಷಕ ಸಂಘದ ಸಂಸ್ಥಾಪಕ ಮಿತೇಶ್ ಕುಮಾರ್ ಮೂಡು ಕೊಣಾಜೆ, ಏಕನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ  ಗಣೇಶ್ ದೇವಾಡಿಗ, ಕೊಡವೂರು ಸಿಎ ಬ್ಯಾಂಕ್ ಅಧ್ಯಕ್ಷ  ನಾರಾಯಣ ಬಲ್ಲಾಳ್, ಉದ್ಯಮಿ ಸಿರಿಯಾರ ಗಣೇಶ್ ನಾಯಕ್, ನಟ ಮಿನೀತ್ ಕುಮಾರ್, ಕೊಲ್ಲೂರು ದೇವಸ್ಥಾನದ ಟ್ರಸ್ಟಿ ಸಂಧ್ಯಾ ರಮೇಶ್ , ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಅಧ್ಯಕ್ಷ  ಅಶೋಕ್ ಶೆಟ್ಟಿಗಾರ್ ಉಪಸ್ಥಿತರಿದ್ದರು.