ನೀಟ್‌ ಫಲಿತಾಂಶ : ಜ್ಞಾನಸುಧಾದ 9 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ

ಕಾರ್ಕಳ : ಎಂ.ಬಿ.ಬಿ.ಎಸ್‌ ಹಾಗೂ ಇತರ ವೈದ್ಯಕೀಯ ಕ್ಷೇತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್‌ ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾದ 9 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 76 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು ಗಳಿಸಿದ್ದಾರೆ. ಅಖಿಲ್‌.ಯು.ವಾಗ್ಲೆ 99.87ಪರ್ಸಂಟೈಲ್‌ ನೊಂದಿಗೆ 665 ಅಂಕ, ಪ್ರಜ್ವಲ್‌ ಜೆ.ಪಿ. 655 ಅಂಕ, ಆರ್ಯ.ಪಿ ಶೆಟ್ಟಿ 640 ಅಂಕ, ಅನಿರುದ್ಧ್‌ ಭಟ್‌ 640 ಅಂಕ, ರಮ್ಯ ಎಸ್‌.ಗೌಡ 630 ಅಂಕ, ಕಾರ್ತಿಕ್‌ ಬ್ಯಾಕೊಡ್‌ 626 ಅಂಕ, ಶರ್ಮದಾ 613 ಅಂಕ, ಆರ್ಯನ್‌.ವಿದ್ಯಾಧರ್.ಶೆಟ್ಟಿ 610 ಅಂಕ, […]

ಪೋಷಣ್ ಅಭಿಯಾನ- ಮಾತೃವಂದನ ಸಪ್ತಾಹ ಕಾರ್ಯಕ್ರಮ

ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪೋಷಣ್ ಮಾಸಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃವಂದನ ಯೋಜನೆಯ ಸಪ್ತಾಹ ಕಾರ್ಯಕ್ರಮವು ಬುಧವಾರ ನಗರದ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಭಾಗೀದಾರ ಇಲಾಖೆಗಳು ಪೋಷಣ್ ಮಾಸಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮಗಳನ್ನು ವೇಳಾಪಟ್ಟಿಯನ್ವಯ ಆಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಕಾರ್ಯಕ್ರಮದಲ್ಲಿ ಪೋಷಣ್ ಮಾಸಾಚರಣೆಯ ಪೋಸ್ಟರ್‌ಗಳನ್ನು […]

ಏಷ್ಯಾಕಪ್ ಪಂದ್ಯ: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಅಭಿಮಾನಿಗಳ ನಡುವೆ ಘರ್ಷಣೆ

ಶಾರ್ಜಾ: ಬುಧವಾರ ಶಾರ್ಜಾದಲ್ಲಿ ನಡೆದ ಏಷ್ಯಾ ಕಪ್ 2022 ರ ಕ್ರಿಕೆಟ್ ಪಂದ್ಯವನ್ನು ಗೆದ್ದ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಬೆಂಬಲಿಗರ ಮಧ್ಯೆ ಸಂಘರ್ಷ ನಡೆದಿದೆ ಎಂದು ವರದಿಯಾಗಿದೆ. ಪಂದ್ಯದ ಬಳಿಕ ಅಫ್ಘಾನ್ ಅಭಿಮಾನಿಗಳು ಕ್ರಿಕೆಟ್ ಸ್ಟೇಡಿಯಂಗೆ ಹಾನಿ ಮಾಡಲು ಪ್ರಾರಂಭಿಸಿದ್ದಾರೆ. ಅಫ್ಘಾನ್ ಅಭಿಮಾನಿಗಳು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ಕ್ರೀಡಾಂಗಣದಲ್ಲಿ ಪಾಕಿಸ್ತಾನಿ ಅಭಿಮಾನಿಗಳಿಗೆ ಹೊಡೆಯುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಘರ್ಷಣೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. This is what […]

ಕೇರಳದಲ್ಲಿಂದು ಸಂಭ್ರಮದ ಓಣಂ: ವಾಮನ-ಬಲಿಯ ನೆನಪಿನ ಕುರುಹು ಈ ಹಬ್ಬ

ಶ್ರಾವಣ ಮಾಸದ ಶ್ರವಣಾ ನಕ್ಷತ್ರದಂದು ಮಹಾವಿಷ್ಣು ವಾಮನರೂಪದಲ್ಲಿ ಅವತರಿಸಿ, ಇಂದ್ರ ಪದವಿಯಲ್ಲಿದ್ದ ಬಲಿ ಚಕ್ರವರ್ತಿಯ ವಿಶ್ವಜಿತ್ ಯಾಗದಲ್ಲಿ ಮೂರು ಹೆಜ್ಜೆ ಭೂದಾನ ಕೇಳಿ, ಬಲಿಯ ಅಹಂಕಾರದ ಅಂಧಕಾರವನ್ನು ಕಳೆದು ಜ್ಞಾನದ ದೀವಿಗೆಯನ್ನು ಬೆಳಗಿದ ದಿನದ ನೆನಪಿಗಾಗಿ ಕೇರಳದಲ್ಲಿ ಆಚರಿಸುವ ಹಬ್ಬವೆ ಓಣಂ. ಸಂಸ್ಕೃತದ ಶ್ರಾವಣ ಅಪಭ್ರಂಶವಾಗಿ ಓಣಂ ಎಂದಾಗಿದೆ. ಬಲಿಯನ್ನು ಭಾರತದಿಂದ ಹೊರಗೆ ಕಳುಹಿಸಿದ್ದರ ಕುರುಹಾಗಿ ಅಂದು ಬಲಿಯ ಕಡೆಯವರು ದೋಣಿಗಳ ಮೂಲಕ ಪಲಾಯನಗೊಂಡದ್ದನ್ನು ಈ ದಿನದಂದು ದೋಣಿ ಸ್ಪರ್ಧೆಗಳ ಮೂಲಕ ನೆನಪಿಸಿಕೊಳ್ಳಲಾಗುತ್ತದೆ. ಅವಿಭಜಿತ ದ.ಕ ಜಿಲ್ಲೆಯಲ್ಲಿ […]

ಮೀನುಗಾರಿಕಾ ಸೀಮೆಎಣ್ಣೆಗೆ ಅರ್ಜಿ ಸಲ್ಲಿಸಿದವರಿಗೆ ಸೆ 13-14 ರಂದು ಜಂಟಿ ತಪಾಸಣೆ

ಉಡುಪಿ: ಆಹಾರ, ಕಂದಾಯ ಮತ್ತು ಮೀನುಗಾರಿಕಾ ಇಲಾಖೆಗಳ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಮೀನುಗಾರಿಕಾ ಸೀಮೆಎಣ್ಣೆ ಹೊಸತು ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸೆಪ್ಟಂಬರ್ 13 ರಂದು ಬೆಳಗ್ಗೆ 9.30 ಕ್ಕೆ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ಶಾಲೆ ಬಳಿ ಹಾಗೂ ಮಧ್ಯಾಹ್ನ 2.30 ಕ್ಕೆ ಉಚ್ಚಿಲ ಮೊಗವೀರ ಸಭಾಭವನದ ಹತ್ತಿರ ಮತ್ತು ಸೆ. 14 ರಂದು ಬೆಳಗ್ಗೆ 9.30 ಕ್ಕೆ ಮಲ್ಪೆ ಟೆಗ್ಮಾದ ಬಳಿ ಜಂಟಿ ತಪಾಸಣೆಯನ್ನು ನಡೆಸಲಾಗುವುದು. ಹೊಸ ರಹದಾರಿ ಕೋರಿ ಅರ್ಜಿ […]