ಪಾಳು ಬಿದ್ದ ಮನೆಯಲ್ಲಿ ಅಡಗಿದ್ದ ಚಿರತೆ ಸೆರೆ

ಉಡುಪಿ: ಇಲ್ಲಿನ ಪಾಳು ಬಿದ್ದಿದ್ದ ಮನೆಯೊಂದರಲ್ಲಿ ಅವಿತುಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇಲ್ಲಿನ ಜನಾಶ್ರಯವಿಲ್ಲದ ಮನೆಯಲ್ಲಿ ಚಿರತೆಯೊಂದು ಅಡಗಿಕೊಂಡಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಸಫಲರಾಗಿದ್ದರೆ. ಮಣಿಪಾಲ, ಸರಳೇಬೆಟ್ಟು ಪರಿಸರದಲ್ಲಿ ಹಲವು ದಿನಗಳಿಂದ ಚಿರತೆ ಓಡಾಟ ಕಂಡುಬಂದಿದ್ದು, ಸ್ಥಳೀಯರು ರಾತಿವೇಳೆ ಓಡಾಡಲು ಭಯಪಡುವಂತಾಗಿದೆ.

ಆಕಾಶ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ನಾಸಾ ಪ್ರವಾಸದ ಅವಕಾಶ

ಉಡುಪಿ: ರಾಷ್ಟ್ರವ್ಯಾಪಿ 2000 ಹಿಂದುಳಿದ ಹೆಣ್ಣು ಮಕ್ಕಳಿಗೆ ಉಚಿತ ಎನ್.ಇ.ಇ.ಟಿ ಮತ್ತು ಜೆಇಇ ಕೋಚಿಂಗ್ ಮತ್ತು ವಿದ್ಯಾರ್ಥಿವೇತನವನ್ನು ನೀಡಲು ಆಕಾಶ್ ಸಂಸ್ಥೆಯು ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನ ಪರೀಕ್ಷೆಯನ್ನು ನವೆಂಬರ್ 5 ರಿಂದ 13 ರ ನಡುವೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನಡೆಸಲಿದೆ ಎಂದು ಸಂಸ್ಥೆಯ ಸಹಾಯಕ ನಿರ್ದೇಶಕ ಶ್ಯಾಮ್ ಪ್ರಸಾದ್ ಹೇಳಿದರು. ಅವರು ಗುರುವಾರ ಕುಂಜಿಬೆಟ್ಟುವಿನಲ್ಲಿರುವ ಆಕಾಶ್ ಸಂಸ್ಥೆಯ ಕಟ್ಟಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಆಕಾಶ್ ಆ್ಯಂತೆಯ 13 ನೇ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಆಕಾಶ್ […]

ಇಂಡೋನೇಶಿಯಾದ ಬಾಲಿ ದ್ವೀಪದಲ್ಲಿದೆ ವಿಶ್ವದ ಅತಿ ಎತ್ತರದ ಗರುಡವಾಹನ ವಿಷ್ಣುವಿನಮೂರ್ತಿ

ಇಂಡೋನೇಶಿಯಾದ ಬಾಲಿ ದ್ವೀಪದಲ್ಲಿ ಭಗವಾನ್ ವಿಷ್ಣು ಮತ್ತು ಗರುಡನ 46 ಮೀ ಪೀಠದ ತಳಭಾಗವನ್ನು ಒಳಗೊಂಡಂತೆ 122 ಮೀ ಎತ್ತರದ ಮೂರ್ತಿ ಇದೆ. ಬಾಲಿಯ ಗರುಡ ವಿಷ್ಣು ಕೆಂಚನಾ ಕಲ್ಚರಲ್ ಪಾರ್ಕ್ ನಲ್ಲಿ ಈ ಪ್ರತಿಮೆಯನ್ನು ಇರಿಸಲಾಗಿದೆ. ನ್ಯೋಮನ್ ನುವಾರ್ಟಾ ವಿನ್ಯಾಸಗೊಳಿಸಿದ ಈ ಮೂರ್ತಿಯನ್ನು ಸೆಪ್ಟೆಂಬರ್ 2018 ರಲ್ಲಿ ಉದ್ಘಾಟಿಸಲಾಯಿತು. ಈ ಪ್ರತಿಮೆಯನ್ನು ಇಂಡೋನೇಷ್ಯಾದ ಅತಿ ಎತ್ತರದ ಪ್ರತಿಮೆಯಾಗಿ ವಿನ್ಯಾಸಗೊಳಿಸಲಾಗಿದೆ. ತಮ್ಮ ಹಿಂದೂ ಸಂಸ್ಕೃತಿಯ ಬೇರುಗಳನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಅಮೃತವನ್ನು ಹುಡುಕಿ ತಂದ ಗರುಡನ ನೆನಪಿಗಾಗಿ ಈ […]

ಪ್ರಥಮ ವರ್ಷದ ನೀಟ್‌ ಫಲಿತಾಂಶದಲ್ಲಿಯೇ ಕ್ರಿಯೇಟಿವ್ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ 

  ಕಾರ್ಕಳ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ ಯು ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ತಾಳಿಕೋಟಿ 646, ಸಾತ್ವಿಕ್‌ ಶ್ರೀಕಾಂತ್‌ ಹೆಗಡೆ 641, ಸೋಹನ್‌ ಎಸ್‌ ನೀಲಕರಿ 598, ಸುದೀಪ್‌ ಅಸಂಗಿಹಾಲ್‌ 552, ಹಾಸನದ ವಿಕಾಸ್‌ ಗೌಡ ಎಂ 608 ಅಂಕಗಳನ್ನು ಗಳಿಸಿದ್ದಾರೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ನಿರ್ಮಿಸಿರುವ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನಡೆಯುತ್ತಿದೆ. ಕಾಲೇಜಿನ […]

ಕರಾವಳಿಯಲ್ಲಿ ಮೊಂತಿ ಫೆಸ್ತ್ ಆಚರಣೆಯ ಸಡಗರ

ಉಡುಪಿ/ಮಂಗಳೂರು: ಇಂದು ಕನ್ಯಾ ಮಾತೆ ಮೇರಿಯ ಜನ್ಮ ದಿನವಾಗಿದ್ದು ಕರಾವಳಿಯ ಕ್ರೈಸ್ತರು ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇಂದು ಕರಾವಳಿ ಕರ್ನಾಟಕದ ಎಲ್ಲಾ ಚರ್ಚುಗಳಲ್ಲಿಯೂ ವಿಶೇಷ ಪ್ರಾರ್ಥನೆಗಳು ಜರುಗುತ್ತವೆ. ಆಗಸ್ಟ್ 30 ರಿಂದ ವಿಶೇಷ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಅಥವಾ ತೆನೆ ಹಬ್ಬದ ಆಚರಣೆ ಆರಂಭವಾಗಿ, 9 ದಿನಗಳ ಕಾಲ ನಡೆಯುತ್ತದೆ. ಪುಟಾಣಿ ಮಕ್ಕಳು ತಮ್ಮ ಮನೆಯಂಗಳದಲ್ಲಿ ಬೆಳೆದ ವಿವಿಧ ಹೂವುಗಳನ್ನು ತಟ್ಟೆಯಲ್ಲಿಟ್ತು ಅಲಂಕರಿಸಿ ಮಾತೆ ಮೇರಿಗೆ ಸಮರ್ಪಿಸುತ್ತಾರೆ. ಕಡೆ ದಿನ, ಸೆಪ್ಟೆಂಬರ್ 8 ರಂದು […]