ಕೊಡವೂರು: ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರ ಉದ್ಘಾಟನೆ

ಕೊಡವೂರು: ಇಲ್ಲಿನ ಪರಿಸರದಲ್ಲಿ ಅನೇಕ ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಆದ್ದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹತ್ತಿರದಲ್ಲಿ ಉತ್ತಮವಾದ ಮತ್ತು ಉಚಿತ ಆರೋಗ್ಯ ಸೇವೆ ಪಡೆಯಬೇಕಾದರೆ ನಮ್ಮ ಪರಿಸರದಲ್ಲಿಯೇ ಆರೋಗ್ಯ ಕೇಂದ್ರ ಬೇಕು ಎಂದು ಹಲವಾರು ವರ್ಷಗಳ ಹೋರಾಟ ನಡೆಸಿದ ಬಳಿಕ ಇಂದು ನಮ್ಮ ವಾರ್ಡಿನಲ್ಲಿ ಸರ್ಕಾರಿ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಉತ್ತಮವಾದ ಸೇವೆಯೊಂದಿಗೆ ಪ್ರತಿಯೊಬ್ಬರಿಗೂ ಉಚಿತವಾಗಿ […]

ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ಸದಾ ಸ್ಮರಣೆ ಮಾಡುವುದು ಅವಶ್ಯ: ನರೇಂದ್ರ ಕುಮಾರ್ ಕೋಟ

ಕುಂದಾಪುರ: ಮೇಧಾವಿಗಳು, ತಿಳಿದವರ ಶಿಕ್ಷಣದ ಕುರಿತು ವ್ಯಾಖ್ಯಾನದ ಪ್ರಕಾರ ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗಬಾರದು, ಅದರಾಚೆಗೂ ನಮ್ಮ ಬದುಕಿಗೆ ಪೂರಕವಾದ ಶಿಕ್ಷಣವು ದೊರೆತಾಗ ಆ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಣವು ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಹೊಸ ಶಿಕ್ಷಣ ನೀತಿಯೂ ಮಕ್ಕಳನ್ನು ತರಗತಿಯೊಳಗೆ ಮಾತ್ರವಲ್ಲದೇ ಅದರಾಚೆಗೆ ತೆರಡಿದಲು ಸಾಧ್ಯವಾಗಿದೆ. ವಿದ್ಯಾರ್ಥಿಗಳೆಲ್ಲರೂ ಶೈಕ್ಷಣಿಕ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ಇಂದು ಮಾತ್ರ ನೆನೆಯುವುದು ಅಲ್ಲ, ಅವರನ್ನು ಸದಾ […]

ಇತಿಹಾಸದಲ್ಲಿ ಮೊದಲ ಬಾರಿ ಇಸ್ರೇಲಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ: ಎಸ್ ಜೈಶಂಕರ್

ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷವು ಯುಗಗಳಿಂದಲೂ ನಡೆಯುತ್ತಿದೆ. ನಮಗೆ ಕೆಲವು ರಾಜಕೀಯ ಕಾರಣಗಳಿವೆ, ಇದರಿಂದಾಗಿ ನಾವು ಇಸ್ರೇಲ್ ಜೊತೆಗಿನ ನಮ್ಮ ಸಂಬಂಧವನ್ನು ಮುಂದುವರಿಸಲಿಲ್ಲ. ನಾವು ನಮ್ಮನ್ನು ನಿರ್ಬಂಧಿಸಿದ್ದೇವೆ. ಭಾರತದ ಇತಿಹಾಸದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ. ನಾವು ಬಾಂಧವ್ಯದಿಂದ ಪ್ರಯೋಜನ ಪಡೆಯಬಹುದೆಂದು ಇಡೀ ದೇಶಕ್ಕೆ ತಿಳಿದಿದೆ. ಒಮ್ಮೆ ನೀವು ವೋಟ್ ಬ್ಯಾಂಕ್ ರಾಜಕೀಯದಿಂದ ಹೊರಬಂದರೆ, ಅದು ನಿಮ್ಮ ವಿದೇಶಾಂಗ ನೀತಿಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ವೋಟ್ ಬ್ಯಾಂಕ್ ರಾಜಕೀಯವು ರಾಷ್ಟ್ರೀಯ […]

ತ್ರಿಶಾ ವಿದ್ಯಾ ಕಾಲೇಜು: ಬಿ.ಕಾಂ ಫೋಕಸ್ 360 ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

ಉಡುಪಿ: ತ್ರಿಶಾ ವಿದ್ಯಾ ಕಾಲೇಜಿನ ಬಿ.ಕಾಂ ಫೋಕಸ್ 360 ಯ ನೂತನ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ, ಲೆಕ್ಕ ಪರಿಶೋಧಕ ಗೋಪಾಲ ಕೃಷ್ಣ ಭಟ್, ಬಿ.ಕಾಂ ಫೋಕಸ್ 360 ವಿದ್ಯಾರ್ಥಿಗಳ ಸೃಜನಶೀಲ ಬೇಳವಣಿಗೆಗೆ ಪೂರಕವಾಗಿರುವುದು ಮಾತ್ರವಲ್ಲದೆ ಅವರಲ್ಲಿ ವೃತ್ತಿ ಕೌಶಲಗಳನ್ನು ಹೆಚ್ಚಿಸುತ್ತದೆ ಎಂದರು. ನೂತನ ಬಿ.ಕಾಂ ಫೋಕಸ್ 360 ಯ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ […]

ತುಳುವ ಮಣ್ಣಿನ ಕಂಪು ಪಸರುವ ಕಾಂತಾರಾ ಚಿತ್ರದ ಟ್ರೈಲರ್ ಬಿಡುಗಡೆ

ಮಂಗಳೂರು/ಉಡುಪಿ: ಅವಿಭಜಿತ ದ.ಕ ಜಿಲ್ಲೆಯ ಬಹುಮುಖ ಪ್ರತಿಭೆ, ಕುಂದಾಪುರದ ಅಭಿಜಾತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಾಂತಾರಾ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಖುದ್ದು ರಿಷಬ್ ಶೆಟ್ಟಿ ಚಿತ್ರಕಥೆ ಬರೆದು ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ನಲ್ಲಿ ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ದೃಶ್ಯಗಳು ಮನೋಜ್ಞವಾಗಿ ಮೂಡಿಬಂದಿವೆ. ನಾಯಕಿಯಾಗಿ ಸಪ್ತಮಿ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮತೊಬ್ಬ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸಂಗೀತ ಮತ್ತು ಹಿನ್ನೆಲೆ ಸಂಗೀತವು […]