ಶ್ರೀ ಗಣೇಶ ಚತುರ್ಥಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭ ಹಾರೈಕೆ..
ಶ್ರೀ ಗಣೇಶ ಚತುರ್ಥಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭ ಹಾರೈಕೆ…
ಮಾಹೆ: ವಿದ್ಯಾರ್ಥಿಗಳಿಗಾಗಿ ಜೆಂಡರ್ ಚಾಂಪಿಯನ್ ಕಾರ್ಯಾಗಾರ
ಮಣಿಪಾಲ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ವಿವಿಧ ವಿದ್ಯಾರ್ಥಿ ಸಮುದಾಯಕ್ಕೆ ಜೆಂಡರ್ ಚಾಂಪಿಯನ್ ಕಾರ್ಯಾಗಾರವನ್ನು ಆಗಸ್ಟ್ 27 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ಆಯೋಜಿಸಲಾಗಿತ್ತು. ಮಾಹೆಯ ವಿವಿಧ ಸಂಸ್ಥೆಗಳಿಂದ 55 ಅಧ್ಯಾಪಕ ಸಂಯೋಜಕರು ಮತ್ತು ಆಯ್ದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಾಂತವೀರ ಶಿವಪ್ಪ ಮಾತನಾಡಿ, ಎಲ್ಲಾ ಲಿಂಗಗಳಿಗೂ […]
ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಪ್ರಕ್ರಿಯೆಗಳಿಗೆ ಇತಿಶ್ರೀ ಹಾಕಿದ ಸುಪ್ರೀಂ ಕೋರ್ಟ್
ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಹೋರಾಟಕ್ಕೆ ಸಂಪೂರ್ಣ ತೆರೆ ಹಾಕುವ ಹಿನ್ನೆಲೆಯಲ್ಲಿ ಉಮಾಭಾರತಿ, ಮುರಳಿ ಮನೋಹರ್ ಜೋಶಿ, ಸಾಧ್ವಿ ರಿತಂಬರ, ವಿನಯ್ ಕಟಿಯಾರ್ ಹಾಗೂ ಇತರರ ವಿರುದ್ಧದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಬಿಟ್ಟಿದೆ ಮತ್ತು 1992 ರಲ್ಲಿ ಬಾಬರಿ ಮಸೀದಿ ಧ್ವಂಸದಿಂದ ಉದ್ಭವಿಸಿದ ಪ್ರಕ್ರಿಯೆಗಳನ್ನು ಮುಚ್ಚುವಂತೆ ಆದೇಶಿಸಿದೆ. “ವಿಸ್ತೃತ ಪೀಠದಿಂದ ತೀರ್ಪು ಬಂದಿದೆ. ಈ ವಿಷಯದಲ್ಲಿ ಈಗ ಏನೂ ಉಳಿದಿಲ್ಲ. ನೀವು ಸತ್ತ ಕುದುರೆ ಹೊಡೆಯುವುದನ್ನು ಮುಂದುವರಿಸಲು ಸಾಧ್ಯವಿಲ್ಲ. […]
ಆಗಸ್ಟ್ 31 ರಂದು ಕೋಸ್ಟಲ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಪ್ರಾರಂಭ
ಉಡುಪಿ: ಕೋಸ್ಟಲ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಹವಾನಿಯಂತ್ರಿತ ಸಸ್ಯಾಹಾರಿ ಮತ್ತು ಮಾಂಸಾಹಾರಿ ರೆಸ್ಟೋರೆಂಟ್ ಉಡುಪಿಯ ಹೃದಯ ಭಾಗದ ಸಿಟಿ ಬಸ್ ನಿಲ್ದಾಣದ ಎದುರುಗಡೆ ಪ್ರಾರಂಭವಾಗಲಿದ್ದು, ರೆಸ್ಟೋರೆಂಟಿನ ಉದ್ಘಾಟನಾ ಸಮಾರಂಭವು ಆಗಸ್ಟ್ 31 ಬುಧವಾರದಂದು ಬೆಳಗ್ಗೆ 10.00 ಗಂಟೆಗೆ ಜರುಗಲಿದೆ. ರೆಸ್ಟೋರೆಂಟಿನಲ್ಲಿ ಶುಚಿ-ರುಚಿಯಾದ ಸಮುದ್ರ ಆಹಾರ, ಚೈನೀಸ್, ಭಾರತೀಯ, ತಂದೂರಿ, ಮೀನು ಊಟ, ಜ್ಯೂಸ್ ಮತ್ತು ಐಸ್ ಕ್ರೀಮ್ ಲಭ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ: 8088069166/9108599288
ರಾಜ್ಯದ ರೈತರ ಮೊಗದಲ್ಲಿ ಸಂತಸ ಮೂಡಿಸುತ್ತಿವೆ ತೆಂಗಿನಕಾಯಿ ಚಿಪ್ಪುಗಳು
ಬೆಂಗಳೂರು: ದೇಶಾದ್ಯಂತ ವಿವಿಧ ಕೈಗಾರಿಕೆಗಳಲ್ಲಿ ಸಕ್ರಿಯ ಇಂಗಾಲ ಮತ್ತು ಇದ್ದಿಲಿನ ಬಳಕೆ ಹೆಚ್ಚಿದ್ದರಿಂದ ತೆಂಗಿನಕಾಯಿ ಚಿಪ್ಪಿಗೆ ಬಹುಬೇಡಿಕೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಒಂದು ಟನ್ ತೆಂಗಿನ ಚಿಪ್ಪಿನ ಬೆಲೆ ಬಹುತೇಕ ದುಪ್ಪಟ್ಟಾಗಿದೆ. ಈ ಹಿಂದೆ 7,000 ದಿಂದ 8,000 ರೂ.ನಲ್ಲಿ ಲಭ್ಯವಿದ್ದ ತೆಂಗಿನ ಚಿಪ್ಪಿಗೆ ಈಗ ಒಂದು ಟನ್ಗೆ ಸುಮಾರು 14,500 ರೂ. ಅಥವಾ ಅದಕ್ಕೂ ಹೆಚ್ಚು ಬೆಲೆ ನೀಡಬೇಕಾಗುತ್ತದೆ. ಈ ಚಿಪ್ಪುಗಳನ್ನು ಸಂಸ್ಕರಿಸುವ ಕೈಗಾರಿಕೆಗಳು ಅವುಗಳನ್ನು ಕರಕುಶಲ ಕಲೆಗಾರಿಕೆ, ಅಗರಬತ್ತಿಗಳು ಮತ್ತು ಜೈವಿಕ ಗೊಬ್ಬರಗಳಲ್ಲಿ […]