ರಾಜ್ಯದ ರೈತರ ಮೊಗದಲ್ಲಿ ಸಂತಸ ಮೂಡಿಸುತ್ತಿವೆ ತೆಂಗಿನಕಾಯಿ ಚಿಪ್ಪುಗಳು

ಬೆಂಗಳೂರು: ದೇಶಾದ್ಯಂತ ವಿವಿಧ ಕೈಗಾರಿಕೆಗಳಲ್ಲಿ ಸಕ್ರಿಯ ಇಂಗಾಲ ಮತ್ತು ಇದ್ದಿಲಿನ ಬಳಕೆ ಹೆಚ್ಚಿದ್ದರಿಂದ ತೆಂಗಿನಕಾಯಿ ಚಿಪ್ಪಿಗೆ ಬಹುಬೇಡಿಕೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಒಂದು ಟನ್ ತೆಂಗಿನ ಚಿಪ್ಪಿನ ಬೆಲೆ ಬಹುತೇಕ ದುಪ್ಪಟ್ಟಾಗಿದೆ. ಈ ಹಿಂದೆ 7,000 ದಿಂದ 8,000 ರೂ.ನಲ್ಲಿ ಲಭ್ಯವಿದ್ದ ತೆಂಗಿನ ಚಿಪ್ಪಿಗೆ ಈಗ ಒಂದು ಟನ್‌ಗೆ ಸುಮಾರು 14,500 ರೂ. ಅಥವಾ ಅದಕ್ಕೂ ಹೆಚ್ಚು ಬೆಲೆ ನೀಡಬೇಕಾಗುತ್ತದೆ.

ಈ ಚಿಪ್ಪುಗಳನ್ನು ಸಂಸ್ಕರಿಸುವ ಕೈಗಾರಿಕೆಗಳು ಅವುಗಳನ್ನು ಕರಕುಶಲ ಕಲೆಗಾರಿಕೆ, ಅಗರಬತ್ತಿಗಳು ಮತ್ತು ಜೈವಿಕ ಗೊಬ್ಬರಗಳಲ್ಲಿ ಬಳಸುತ್ತವೆ. ಚಿಪ್ಪಿನಿಂದ ದೊರೆಯುವ ಇದ್ದಿಲು ಮತ್ತು ಸಕ್ರಿಯ ಇಂಗಾಲವನ್ನು ಲೋಹಗಳನ್ನು ಕರಗಿಸಲು ಮತ್ತು ಶುದ್ದೀಕರಿಸಲು, ಇಂಜಿನ್ ಎಣ್ಣೆ, ನೀರಿನ ಶುದ್ಧೀಕರಣ, ಬಣ್ಣಗಳು, ಸೌಂದರ್ಯವರ್ಧಕಗಳು ಮತ್ತು ಔಷಧಗಳಲ್ಲಿ ಬಳಸಲಾಗುತ್ತದೆ.

Amazing Uses of Coconut Shell Charcoal - Barail Coco

ಕೇರಳ ಮತ್ತು ತಮಿಳುನಾಡಿನ ಬಳಿಕ ಕರ್ನಾಟಕವು ಅತಿದೊಡ್ಡ ತೆಂಗಿನಕಾಯಿ ಉತ್ಪಾದಿಸುವ ರಾಜ್ಯವಾಗಿದೆ. ವಿಶ್ವದ ತೆಂಗಿನಕಾಯಿ ಪೂರೈಕೆಯಲ್ಲಿ ಭಾರತವು 34 ಪ್ರತಿಶತವನ್ನು ಉತ್ಪಾದಿಸುತ್ತದೆ. ಈ ವರ್ಷ, ತೆಂಗಿನಕಾಯಿ ಮತ್ತು ಸಂಬಂಧಿತ ಉತ್ಪನ್ನಗಳ ರಫ್ತು ಒಟ್ಟು 3,237 ಕೋಟಿ ರೂ.ಗಳಾಗಿದ್ದು, ಸಾಗಣೆಯು ಕಳೆದ ವರ್ಷದ 2,294 ಕೋಟಿಗಳಿಗಿಂತ ಸುಮಾರು 40 ಪ್ರತಿಶತದಷ್ಟು ಹೆಚ್ಚಾಗಿದೆ.

ತೆಂಗಿನ ಚಿಪ್ಪುಗಳನ್ನು ಅತಿ ಹೆಚ್ಚು ತಾಪಮಾನದಲ್ಲಿ ಉರಿಸಿದಾಗ ಉತ್ಪತ್ತಿಯಾಗುವ ಅನಿಲದಿಂದ ಜೈವಿಕ ಡೀಸಲ್ ಮತ್ತು ಎಣ್ಣೆಗಳನ್ನು ತಯಾರಿಸಬಹುದು. ತೆಂಗಿನ ಗೆರಟೆಗಳಿಗೂ ಇದೀಗ ಬೇಡಿಕೆ ಇದೆ. ಗೆರಟೆಯಿಂದ ಗೃಹಾಲಂಕಾರ ಮತ್ತು ಮಹಿಳಾ ಆಭರಣಗಳನ್ನು ತಯಾರಿಸಲಾಗುತ್ತಿದೆ. ತೆಂಗಿನ ಗೆರಟೆಯಲ್ಲಿ ನೀಡಲಾಗುವ ಗೆರಟೆ ಚಹಾ ಕ್ಕೂ ಬಹಳ ಬೇಡಿಕೆ ಇದೆ.

Brown Coconut Shell Tea Cup, for Home, Rs 195/piece Blue Bull Agency | ID:  14585305455

 

ತೆಂಗಿನಕಾಯಿ ಚಿಪ್ಪು ಆಧಾರಿತ ವ್ಯವಹಾರಗಳನ್ನು ಸ್ಥಾಪಿಸಲು ಸುಮಾರು 5 ಕೋಟಿ ಆರಂಭಿಕ ಹೂಡಿಕೆ ಮತ್ತು 4-5 ಕೋಟಿ ದುಡಿಯುವ ಬಂಡವಾಳದ ಅಗತ್ಯವಿದೆ. ಈ ವ್ಯವಹಾರ ಮಾಡುವ ಇಚ್ಛೆ ಇದ್ದವರು ರಫ್ತು ಶಿಷ್ಟಾಚಾರದ ಬಗ್ಗೆ ಮಾಹಿತಿಯನ್ನು ಹೊಂದಿರಬೇಕಾಗುತ್ತದೆ. ಇಂತಹ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಟೆಕ್ನಾಲಜಿ ಮಿಷನ್ ಆನ್ ಕೊಕೊನಟ್ ಯೋಜನೆಯಡಿ ಉದ್ಯಮಿಗಳಿಗೆ ಸರ್ಕಾರವು ಶೇಕಡಾ 25 ರಷ್ಟು ಆರ್ಥಿಕ ನೆರವು ನೀಡುತ್ತದೆ.

ಮಾಹಿತಿ: ಡೆಕ್ಕನ್ ಹೆರಾಲ್ಡ್