ರಾಕ್ಷಸನಾದ ರವಿ! ಡೀಮನ್ ವೇಷದಲ್ಲಿ ಅಬ್ಬರಿಸುತ್ತಿರುವ ಉಡುಪಿಯ ಸಮಾಜ ಸೇವಕ

ಉಡುಪಿ: ಸಮಾಜ ಸೇವಕ ರವಿ ಕಟಪಾಡಿ  ಪ್ರತಿ ಬಾರಿಯೂ ವಿನೂತನ ವೇಷ ಧರಿಸಿ ಗಮನ ಸೆಳೆಯುತ್ತಾರೆ. ಈ ಬಾರಿ ‘ಡೀ ಮನ್’ ರೂಪದಲ್ಲಿ ಅಬ್ಬರಿ ಸುತ್ತಿದ್ದಾರೆ. ಬಡವರಿಗೆ ನೆರವಾಗುವ ದೃಷ್ಟಿಯಿಂದ ಪ್ರತಿ ಬಾರಿಯೂ ವೇಷ ಧರಿಸಿ ಜನರ ಮುಂದೆ ಬರುತ್ತಿರುವ ರವಿ , ಒಂದು ವೇಷ ಕ್ಕಾಗಿ ಹಲವು ದಿನಗಳ ತಯಾರಿ ನಡೆಸುತ್ತಾರೆ. ತಮ್ಮ ಆಹಾರ ನಿದ್ರೆಯನ್ನು ತೊರೆದು ವೇಷ ಧರಿಸಿ ಜನರ ಮನ ರಂಜಿಸಿ ಹಣ ಸಂಗ್ರಹಣೆ ಮಾಡಿ ಅದನ್ನು ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ವ್ಯಯಿಸುತ್ತಾರೆ. […]

ಜಗತ್ತಿಗೆ ಗುರುವಾದ ಜಗದೊಡೆಯನ ಜನುಮ ದಿನದ ಶುಭಾಶಯಗಳು

ಈ ಜಗತ್ತಿನಲ್ಲಿ ಕೃಷ್ಣ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವ ಸ್ಥಳಗಳು, ಮೊದಲನೆಯದ್ದು ಮಥುರಾ, ಎರಡನೆಯದ್ದು ದ್ವಾರಕ, ಮೂರನೆಯದ್ದು ನಮ್ಮ ತುಳುನಾಡಿನ ಒಡಿಪು(ಉಡುಪಿ). ಗೋಕುಲ- ಮಥುರಾದಲ್ಲಿ ಹುಟ್ಟಿ ಬೆಳೆದ ಕೃಷ್ಣ ಮುಂದೆ ದ್ವಾರಕೆಯನ್ನು ತನ್ನ ಕರ್ಮ ಭೂಮಿಯನ್ನಾಗಿಸಿದ. ಮಥುರಾದ ಜನ್ಮ ಭೂಮಿಯಿಂದ, ದ್ವಾರಕೆಯ ಕರ್ಮ ಭೂಮಿಗೆ ಅವಿನಾಭಾವ ಸಂಬಂಧ. ಅಂತೆಯೆ ನಮ್ಮ ಒಡಿಪು ಅಂದರೆ ಕೃಷ್ಣ, ಕೃಷ್ಣ ಅಂದರೆ ಒಡಿಪು! ಕಲಿಯುಗ ವ್ಯಾಸರೆಂದೆ ಖ್ಯಾತಿವೆತ್ತ ಮಧ್ವಾಚಾರ್ಯರ ದಯದಿಂದ, ಬಹುಶಃ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ಇಂದಿನ ಉಡುಪಿಗೂ ಕೃಷ್ಣನ […]

ಪೀಸ್ ಫೌಂಡೇಶನ್ ಭಿನ್ನ ಸಾಮರ್ಥ್ಯದ ಸದಸ್ಯರಿಂದ ಹುಲಿ ವೇಷ ಪ್ರದರ್ಶನ

ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಣಿಪಾಲದ ‘ಪೀಸ್ ಫೌಂಡೇಶನ್’ನ ವಿಕಲಚೇತನ ಸದಸ್ಯರು ಹುಲಿ ವೇಷ ತೊಟ್ಟು ಸಂಭ್ರಮಿಸಿದರು.

ಹಿರ್ಗಾನ: ಆಗಸ್ಟ್ 20 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ

ಉಡುಪಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 20 ರಂದು ಕಾರ್ಕಳ ತಾಲೂಕು ಅಜೆಕಾರು ಹೋಬಳಿಯ ಹಿರ್ಗಾನ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾ ಭವನದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಹಿರ್ಗಾನ ಗ್ರಾಮದ ಗ್ರಾಮಸ್ಥರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತ್ರಿಶಾ ಕ್ಲಾಸಸ್: ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಮಂಗಳೂರು: ತ್ರಿಶಾ ಕ್ಲಾಸಸ್ ನಲ್ಲಿ ತರಬೇತಿ ಪಡೆದು ಕಳೆದ ಜೂನ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊ. ಜಯ್ ಪ್ರಭುಲಾಲ್ ಶಾ ಅವರು ಯೋಜನೆಯುತವಾದ ಕಲಿಕೆ ಮತ್ತು ಆಸಕ್ತಿ ವಿದ್ಯಾರ್ಥಿಯನ್ನು ತನ್ನ ಗುರಿಯತ್ತ ಸಾಗಲು ಸಹಾಯಮಾಡುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 36 ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ಅಭಿನಂದನಾ […]