ರಾಕ್ಷಸನಾದ ರವಿ! ಡೀಮನ್ ವೇಷದಲ್ಲಿ ಅಬ್ಬರಿಸುತ್ತಿರುವ ಉಡುಪಿಯ ಸಮಾಜ ಸೇವಕ

ಉಡುಪಿ: ಸಮಾಜ ಸೇವಕ ರವಿ ಕಟಪಾಡಿ  ಪ್ರತಿ ಬಾರಿಯೂ ವಿನೂತನ ವೇಷ ಧರಿಸಿ ಗಮನ ಸೆಳೆಯುತ್ತಾರೆ. ಈ ಬಾರಿ ‘ಡೀ ಮನ್’ ರೂಪದಲ್ಲಿ ಅಬ್ಬರಿ ಸುತ್ತಿದ್ದಾರೆ.

ಬಡವರಿಗೆ ನೆರವಾಗುವ ದೃಷ್ಟಿಯಿಂದ ಪ್ರತಿ ಬಾರಿಯೂ ವೇಷ ಧರಿಸಿ ಜನರ ಮುಂದೆ ಬರುತ್ತಿರುವ ರವಿ , ಒಂದು ವೇಷ ಕ್ಕಾಗಿ ಹಲವು ದಿನಗಳ ತಯಾರಿ ನಡೆಸುತ್ತಾರೆ. ತಮ್ಮ ಆಹಾರ ನಿದ್ರೆಯನ್ನು ತೊರೆದು ವೇಷ ಧರಿಸಿ ಜನರ ಮನ ರಂಜಿಸಿ ಹಣ ಸಂಗ್ರಹಣೆ ಮಾಡಿ ಅದನ್ನು ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ವ್ಯಯಿಸುತ್ತಾರೆ.

ಈ ಬಾರಿ ಡೀ ಮನ್ ಅಂದರೆ ರಾಕ್ಷಸ ವೇಶ ತೊಟ್ಟ ರವಿ,     ಇಂದು ಬೆಳಗ್ಗೆ ಇಲ್ಲಿನ ಕಟಪಾಡಿ ಕೋಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ  ವೇಷಕ್ಕೆ ಚಾಲನೆ ನೀದಿದ್ರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರವಿ, ಕಳೆದ ಏಳು ವರ್ಷಗಳಿಂದ ಕೃಷ್ಣಾಷ್ಟಮಿಯಂದು ವೇಷ ಹಾಕಿ ನನ್ನ ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದೇನೆ. ಈ ಬಾರಿ ಏಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಇದುವರೆಗೆ ನಾವು 90 ತೊಂಬತ್ತು ಲಕ್ಷ ರೂಪಾಯಿಯಷ್ಟು ಹಣವನ್ನು ಸಂಗ್ರಹಣೆ ಮಾಡಿದ್ದು, ಸಾಧಾರಣ 66 ಮಕ್ಕಳಿಗೆ ಚಿಕಿತ್ಸೆಗಾಗಿ ನೀಡಿದ್ದೇವೆ. ಅನೇಕ ಅನಾರೋಗ್ಯ ಪೀಡಿತ ಮಕ್ಕಳ ಪಟ್ಟಿಗಳು ನಮಗೆ ಬಂದಿದ್ದು ಅವರೆಲ್ಲರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ. ಹೀಗಾಗಿ ಎಲ್ಲರೂ ಕೂಡ ಹೆಚ್ಚಿನ ರೀತಿಯ ಸಹಕಾರವನ್ನು ನೀಡಿ ಎಂದು ಮನವಿ ಮಾಡಿದ್ದಾರೆ.  ಜನ ನಮ್ಮ ಮೇಲೆ ನಂಬಿಕೆ ಇಟ್ಟ ದುಡಿದ ಹಣವನ್ನು ನಮಗೆ ಕೊಡ್ತಾರೆ.ಯಾರೂ ಕೂಡ ಜನರು ನಂಬಿಕೆ ಇಟ್ಟು ಕೊಟ್ಟ ಹಣಕ್ಕೆ ಮೋಸ ಮಾಡಬೇಡಿ ಎಂದು ಮನವಿ ಮಾಡಿದರು.

ರವಿ ಕಟಪಾಡಿ ತಂಡದ ಮಾರ್ಗದರ್ಶಕ ಮಹೇಶ್ ಶೆಣೈ ಮಾತನಾಡಿ, ರವಿ ಕಟಪಾಡಿಯವರೊಂದಿಗೆ 2013 ರಿಂದ ಇದ್ದೆನೆ. ಈ ತನಕ 90 ಲಕ್ಷವನ್ನು ಬಡ ಮಕ್ಕಳ ಚಿಕೆತ್ಸೆಗಾಗಿ ನೀಡಿದ್ದಾರೆ. ಈ ಬಾರಿಯೂ 10 ಲಕ್ಷರೂ ಜಮೆ ಮಾಡಿ, 1 ಕೋಟಿ ರುಪಾಯಿಗೆ ಮುಟ್ಟುವ ಭರವಸೆ ಇದೆ ಎಂದರು.

ರವಿ ಕಟಪಾಡಿಯವರ ವೇಷದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸ್ಮಾಟ್ ಆರ್ಟ್ ಸಂಸ್ಥೆಯ ಮುಖ್ಯಸ್ಥ ಆಕ್ಷಯ್ ಮಾತನಾಡಿ ಇದಕ್ಕಾಗಿ ಕಳೆದ ಮೂರು ತಿಂಗಳಿನಿಂದ ಪ್ರಯತ್ನ ಪಟ್ಟಿದ್ದೇವೆ. ದೇಹಕ್ಕೆ ಹಾನಿಕಾರಕವಲ್ಲದ ಬಣ್ಣವನ್ನು ಉಪಯೋಗಿಸುತ್ತಿದ್ದೇವೆ ಎಂದರು.

ಈ ಬಾರಿಯೂ ಜನರ ಮನ ರಂಜಿಸುವಲ್ಲಿ ರವಿ ಯಶಸ್ವಿ ಆಗಿದ್ದಾರೆ.