ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ

ಉಡುಪಿ: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹಾಗೂ ರಾಷ್ಟ್ರೀಯ ಪದವಿ ವಿದ್ಯಾರ್ಥಿಗಳ ಪೋಷಕ ಮತ್ತು ಶಿಕ್ಷಕರ ಸಂಘ ಜಂಟಿಯಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದೆ. ಭಾಷಣದ ವಿಷಯ: “ಭವಿಷ್ಯದ ಜನಪ್ರತಿನಿಧಿ ಹೇಗಿರಬೇಕು?” ಆಗಸ್ಟ್ 14 ಭಾನುವಾರದಂದು ಶ್ರೀಮತಿ ಸೀತಾಲಕ್ಷ್ಮಿ ಮತ್ತು ಬಿ ಎಂ ರಾಮಕೃಷ್ಣ ಹತ್ವಾರ್ ಸಭಾಭವನ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಧ್ಯಾಹ್ನ 1-30 ರಿಂದ ಸ್ಪರ್ಧೆ ನಡೆಯಲಿದೆ. ಕಿರಿಯ […]

ವಿದ್ಯಾಲಕ್ಷ್ಮೀ ಕಾಲೇಜಿನ ಪ್ರಾಂಶುಪಾಲೆ ಸೀಮಾ ಜಿ ಭಟ್ ಅವರಿಗೆ ಡಾಕ್ಟರೇಟ್ ಪದವಿ

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜಿನ ಪ್ರಾಂಶುಪಾಲೆ ಸೀಮಾ ಜಿ ಭಟ್ ಅವರು ಸುಳ್ಯ ಕೆ.ವಿ.ಜಿ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಮ್ಯಾನೇಜ್ ಮೆಂಟ್ ನ ಎಂಬಿಎ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥೆ ಡಾ. ಸುರೇಖಾ ಪ್ರದೀಪ್ ಪ್ರಭು ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿರುವ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ದೊರೆತಿದೆ. “ಆರ್ಗನೈಜೇಷನಲ್ ಎರ್ಗೊನೊಮೊಕ್ಸ್ ಎಂಡ್ ಎಂಪ್ಲಾಯೀ ಸಾಟಿಸಿಫ್ಯಾಕ್ಷನ್ ಇಶ್ಯೂಸ್, ಇನ್ ಫ್ಯ್ಲೂಯೆನ್ಸಸ್ ಎಂಡ್ ಇನ್ಸೈಟ್ಸ್- ಎ ಸ್ಟಡಿ ವಿಥ್ ರೆಫೆರೆನ್ಸ್ ಟು […]

ಪ್ರಧಾನಿಯವರ ಹರ್ ಘರ್ ತಿರಂಗಾ ಅಭಿಯಾನದಿಂದ ಬದಲಾಯ್ತು ವ್ಯಾಪಾರಿಗಳ ಬದುಕು: ಇತಿಹಾಸದಲ್ಲೇ ದಾಖಲೆಯ ರಾಷ್ಟ್ರಧ್ವಜಗಳ ಮಾರಾಟ!

ನವದೆಹಲಿ: ದೇಶದ 75 ನೇ ಸ್ವಾಂತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದು, ರಾಷ್ಟ್ರಧ್ವಜ ಮಾರಾಟ ಮಾಡುವ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬದುಕು ಹಸನಾಗಿದೆ. ಇತಿಹಾಸದಲ್ಲೇ ಅತಿ ಹೆಚ್ಚು ರಾಷ್ಟ್ರಧ್ವಜ ಮಾರಾಟವಾಗುತ್ತಿದ್ದು ವ್ಯಾಪಾರಿಗಳ ಮೊಗದಲ್ಲಿ ಸಂತಸ ಮನೆ ಮಾಡಿದೆ. ಹಿಂದೆಲ್ಲಾ ಜನರು ಒಂದೆರಡು ಧ್ವಜಗಳನು ಖರೀದಿಸುತ್ತಿದ್ದರು, ಆದರೆ ಹರ್ ಘರ್ ಅಭಿಯಾನದಿಂದಾಗಿ ಜನರು ಬೃಹತ್ ಆರ್ಡರ್ ಗಳನ್ನು ನೀಡುತ್ತಿದ್ದು, ಲಕ್ಷಗಟ್ಟಲೆ ಧ್ವಜಗಳು ಈಗಾಗಲೇ ಬಿಕರಿಯಾಗಿದ್ದು ಬೇಡಿಕೆ ಇನ್ನೂ ಹೆಚ್ಚುತ್ತಲೇ ಇದೆ. […]

ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ವಿತರಣೆ

ಉಡುಪಿ: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ವಿವೇಕಾನಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜರಕಾಡು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ವಿತರಣಾ ಕಾರ್ಯಕ್ರಮವು ಜುಲೈ 06 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗುಂಡಿಬೈಲು ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಪ್ರೀತಿ ತಂಗಪ್ಪನ್ ( ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ), ಪತ್ರಕರ್ತ ಜನಾರ್ಧನ ಕೊಡವೂರು, ಉದಯ್ ನಾಯ್ಕ್ ( ಹಿರಿಯ ಮಾರುಕಟ್ಟೆ ಪ್ರಬಂಧಕರು ಸ್ಟಾರ್ ಹೆಲ್ತ್), ಸಂಚಾಲಕ ಅಜಿತ್ ಕುಮಾರ್ […]

ಶ್ರೀಲಕ್ಷ್ಮೀವೆಂಕಟೇಶ ದೇವಳದಲ್ಲಿ ರಂಗಪೂಜೆಯ ಸೊಬಗು: ಪುಷ್ಪಾಲಂಕಾರದಲ್ಲೂ ಮೂಡಿಬಂತು ತ್ರಿವರ್ಣ ಧ್ವಜ!

ಉಡುಪಿ: ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಅಂಗವಾಗಿ ಭಾನುವಾರದಂದು ರಂಗಪೂಜೆಯ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ನಡೆಯಿತು. ಹೂವಿನ ಅಲಂಕಾರದಲ್ಲಿಯೂ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ತೋರಿಸಿದ್ದು ವಿಶೇಷವಾಗಿತ್ತು.