ಒಂದು ಜಿಲ್ಲೆ ಒಂದು ಉತ್ಪನ್ನ ಉಡುಗೊರೆ ಕ್ಯಾಟಲಾಗ್‌ನ ಡಿಜಿಟಲ್ ಆವೃತ್ತಿ ಬಿಡುಗಡೆ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಅವರು ‘ಒಂದು ಜಿಲ್ಲೆ ಒಂದು ಉತ್ಪನ್ನ’ ಉಡುಗೊರೆ ಕ್ಯಾಟಲಾಗ್‌ನ ಡಿಜಿಟಲ್ ಆವೃತ್ತಿಯನ್ನು ಅನಾವರಣಗೊಳಿಸಿದರು. 5 ಆಗಸ್ಟ್ 2022 ರಂದು ವಾಣಿಜ್ಯ ಭವನದಲ್ಲಿ ರಫ್ತು ಉತ್ತೇಜನಾ ಮಂಡಳಿಗಳು ಮತ್ತು ಉದ್ಯಮ ಸಂಘಗಳೊಂದಿಗಿನ ಸಭೆಯಲ್ಲಿ ಡಿಜಿಟಲ್ ಆವೃತ್ತಿ ಬಿಡುಗಡೆ ಗೊಳಿಸಲಾಯಿತು. ಉಡುಗೊರೆ ಕ್ಯಾಟಲಾಗ್ ಸುಗಂಧ ದ್ರವ್ಯಗಳು ಮತ್ತು ತೈಲಗಳು, ಭಾರತೀಯ ಸ್ಪಿರಿಟ್ ಗಳು, ಗೃಹಾಲಂಕಾರ ಉತ್ಪನ್ನಗಳು, ಬಟ್ಟೆಗಳು ಮತ್ತು […]

ಬ್ರಹ್ಮಾವರ: ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ವತಿಯಿಂದ ಹಾಸ್ಟೆಲ್ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

ಬ್ರಹ್ಮಾವರ: ಭಾನುವಾರದಂದು ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಹಾಗೂ ಉಡುಪಿ ಟೆಂಪಲ್ ಸಿಟಿ ಲೀಜನ್ ವತಿಯಿಂದ ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಮೆಟ್ರಿಕ್ ಪೂರ್ವ ಮಕ್ಕಳಿಗಾಗಿ ಇರುವ ದೇವರಾಜ್ ಅರಸು ಹಿಂದುಳಿದ ವಿಭಾಗದ ಬಾಲಕಿಯರ ಹಾಸ್ಟೆಲ್ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಚೇಂಬರ್ ನ ಎಲ್ಲಾ ಹಿರಿಯ ಸದಸ್ಯರು ಉಪಸ್ಥಿತರಿದ್ದರು.

ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು

ಉಡುಪಿ: ಪ್ರಯಾಯ ಶ್ರೀ ಕೃಷ್ಣಾಪುರ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದು.

ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಉಡುಪಿ: ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಉಡುಪಿ ವಲಯ, ನಿಕ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಪ್ರವಾಸೋಧ್ಯಮ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ “ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ” ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ 10,000.00ರೂ, ದ್ವಿತೀಯ ಬಹುಮಾನ 5,000.00ರೂ ಮತ್ತು ತೃತೀಯ ಬಹುಮಾನ 3,000.00ರೂ ಹಾಗೂ 5 ಸಮಾಧಾನಕರ ಬಹುಮಾನಗಳು, ಆಕರ್ಷಕ ಸ್ಮರಣಿಕೆ ಮತ್ತು ವಿಶೇಷ ಉಡುಗೊರೆಗಳು ಇರಲಿವೆ. ಸ್ಪರ್ಧೆಯ ನಿಯಮಗಳು: […]