ಆಗಸ್ಟ್ 7: ವಿದ್ಯಾರ್ಥಿ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರಗತಿ ಅಸೋಸಿಯೇಟ್ ಪ್ರಸ್ತುತ ಪಡಿಸುತ್ತಿದೆ 5 ನೇ ಮಹಾ ಉದ್ಯೋಗ ಮೇಳ

ಉಡುಪಿ: ಸರಿಯಾದ ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರಿಗೆ ಅಥವಾ ಹೊಸ ವೃತ್ತಿ ಜೀವನದ ಹುಡುಕಾಟದಲ್ಲಿರುವವರಿಗೆ ಪ್ರಗತಿ ಅಸೋಸಿಯೇಟ್ ಪ್ರಸ್ತುತ ಪಡಿಸುತ್ತಿದೆ 5 ನೇ ಮಹಾ ಉದ್ಯೋಗ ಮೇಳ. ಆಗಸ್ಟ್ 7 ಭಾನುವಾರದಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆವರೆಗೆ ನಗರದ ಕಿದಿಯೂರು ಹೋಟೆಲಿನ ಪವನ್ ರೂಫ್ ಟಾಪ್ ನಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಸ್ಥಳೀಯ ಉದ್ಯಮಗಳು ಹಾಗೂ ಕೈಗಾರಿಕೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಸ್ಥಳೀಯ ವಿದ್ಯಾರ್ಥಿಗಳು ಹಾಗೂ ವೃತ್ತಿ ಅನ್ವೇಷಕರು ಸಂದರ್ಶನದಲ್ಲಿ ಭಾಗವಹಿಸಿ ಕನಸಿನ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ […]
ವರಮಹಾಲಕ್ಷ್ಮಿ ವೃತ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಭಜನಾ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠದಲ್ಲಿ ಶುಕ್ರವಾರ ಶ್ರೀವರಮಹಾಲಕ್ಷ್ಮೀ ವೃತದ ಪ್ರಯುಕ್ತ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಿಪ್ರಮಹಿಳೆಯರಿಂದ ಶ್ರೀಲಕ್ಷ್ಮೀ ಶೋಭಾನೆ ಪಠನಾ ಕಾರ್ಯಕ್ರಮ ನಡೆಯಿತು.
ಉನ್ನತಿ ಕೆರಿಯರ್ ಅಕಾಡೆಮಿ ವತಿಯಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಒಪ್ಪಂದ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ವತಿಯಿಂದ ಕುಂದಾಪುರ ತಾಲೂಕಿನ ಶಂಕರನಾರಾಯಣ ಸರ್ಕಾರಿ ಪ್ರ.ದ.ಕಾಲೇಜಿನ ಅಂತಿಮ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕಮ್ಯೂನಿಕೇಶನ್ ಸ್ಕಿಲ್ಸ್, ವ್ಯಕ್ತಿತ್ವ ವಿಕಸನ, ಸಂದರ್ಶನ ಕಲೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ಇದೇ ಸಂದರ್ಭದಲ್ಲಿ ಉನ್ನತಿ ಸಂಸ್ಥೆ ಹಾಗೂ ಕಾಲೇಜಿನ ನಡುವೆ ಕೌಶಲ್ಯ ಕರ್ನಾಟಕ ಯೋಜನೆಯಡಿ ಬ್ಯಾಂಕಿಂಗ್ ಹಾಗೂ […]
ಎನ್.ಎಮ್.ಎಮ್.ಎಸ್ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ನಡೆದ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನ ಪಡೆಯಲು ವೆಬ್‌ಸೈಟ್ www.scholarships.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 2018 ರಿಂದ 2021 ನೇ ಸಾಲಿನವರೆಗೆ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹೆಸರು ನೋಂದಾಯಿಸಿಕೊಂಡ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ನವೀಕರಣ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನೋಡೆಲ್ ಅಧಿಕಾರಿ ಅಥವಾ ಜಿಲ್ಲಾ ನೋಡೆಲ್ ಅಧಿಕಾರಿಯಾದ ಚಂದ್ರನಾಯ್ಕ್, ಉಪನ್ಯಾಸಕರು, ಡಯಟ್, ಉಡುಪಿ […]
ಕೋಟ: ನವೀಕೃತ ಫೇವರೇಟ್ ಬಿಲ್ಡಿಂಗ್ ನಲ್ಲಿ ಶ್ರೀದೇವಿ ಜ್ಯುವೆಲ್ಲರ್ಸ್ ಶುಭಾರಂಭ

ಕೋಟ: 35 ಸಂವತ್ಸರಗಳ ಚಿನ್ನದ ವ್ಯವಹಾರದಲ್ಲಿ ವಿಶ್ವಾಸರ್ಹತೆಯೊಂದಿಗೆ ಕೋಟದ ಹೃದಯ ಭಾಗದಲ್ಲಿ ನವೀಕರಣಗೊಂಡ ಫೇವರೇಟ್ ಬಿಲ್ಡಿಂಗ್ ನ ಐತಾಳ್ ಕಾಂಪ್ಲೆಕ್ಸ್ ನಲ್ಲಿ ಶ್ರೀದೇವಿ ಜ್ಯುವೆಲ್ಲರ್ಸ್ ನ ಉದ್ಘಾಟನಾ ಸಮಾರಂಭವು ಆಗಸ್ಟ್ 5 ರಂದು ಶುಕ್ರವಾರ ಬೆಳಿಗ್ಗೆ ಜರುಗಿತು. ಕಟ್ಟಡದ ಮಾಲಕಿ ಶ್ರೀಮತಿ ಪೂರ್ಣಿಮಾ ಶಂಕರ್ ಹೆಗ್ಡೆ ಉದ್ಘಾಟನೆಯನ್ನು ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮೊಕೇಸರ ಆನಂದ್ ಸಿ.ಕುಂದರ್, ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ […]