ಆ.5 ರೊಳಗೆ ನೈಜ ಆರೋಪಿಗಳನ್ನು ಪತ್ತೆ ಹಚ್ಚದಿದ್ದಲ್ಲಿ ಮಂಗಳೂರಿನಲ್ಲಿ ಧರಣಿ ಕೂರುವ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆ ಪ್ರಕರಣಗಳ ನೈಜ ಆರೋಪಿಗಳನ್ನು ಆ.5 ರೊಳಗೆ ಪತ್ತೆಹಚ್ಚಿ ಬಂಧಿಸಬೇಕು. ಆರೋಪಿಗಳ ಪತ್ತೆಯಲ್ಲಿ ಸರಕಾರ ಯಶಸ್ವಿಯಾಗದಿದ್ದಲ್ಲಿ ಆ.6 ರಿಂದ ಮಂಗಳೂರಿನಲ್ಲಿ ಧರಣಿ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಹತ್ಯೆಯಾದ ಮಸೂದ್, ಪ್ರವೀಣ್ ನೆಟ್ಟಾರು, ಸುರತ್ಕಲ್‌ನ ಫಾಝಿಲ್ ಮನೆಗೆ ಸೋಮವಾರ ಭೇಟಿ ನೀಡಿದ ಬಳಿಕ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಸಹಿತ ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ […]

ಆಗಸ್ಟ್ 2 ರಿಂದ 6 ರವರೆಗೆ ಗುಡುಗು ಸಿಡಿಲಿನ ಸಹಿತ ಅಧಿಕದಿಂದ ಅತ್ಯಾಧಿಕ ಮಳೆಯ ಮುನ್ಸೂಚನೆ

ಉಡುಪಿ/ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಮುಂದಿನ ಐದು ದಿನಗಳವರೆಗೆ ಗುಡುಗು ಸಿಡಿಲಿನ ಅಬ್ಬರದ ಸಹಿತ ಅತ್ಯಾಧಿಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆಗಸ್ಟ್ 3 ರಿಂದ 6 ರವರೆಗೆ 115.6 ಮಿಮಿ ನಿಂದ 204.4 ಮಿಮಿ ವರೆಗೆ ಮಳೆಯಾಗುವ ನಿರೀಕ್ಷೆಯಿದ್ದು, ಸಮುದ್ರವೂ ಪ್ರಕ್ಷುಬ್ದವಾಗಲಿರುವ ಹಿನ್ನೆಯಲ್ಲಿ ಮೀನುಗಾರರು ನೀರಿಗೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.

ಮಂಗಳೂರು: ಆಗಸ್ಟ್ 5ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಮಂಗಳೂರು: ದ.ಕ ವ್ಯಾಪ್ತಿಯಲ್ಲಿ ಬೆನ್ನು ಬೆನ್ನಿಗೆ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ, ಕರಾವಳಿ ಜಿಲ್ಲೆಯು ಕುದಿಯುವ ಬಾಣಲೆಯಂತಾಗಿದ್ದು, ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಮಂಗಳೂರು ನಗರ ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಆಗಸ್ಟ್ 1 ರವರೆಗಿದ್ದ ನಿಷೇಧಾಜ್ಞೆಯನ್ನು ಆಗಸ್ಟ್ 5ರ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ. ನಿಷೇಧಾಜ್ಞೆ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವಂತಿಲ್ಲ. ಚೇಷ್ಟೆ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವ ಕ್ರಿಯೆಯನ್ನು ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ. ನಿಷೇಧಿತ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ […]

‘ಒಂದು ರಾಷ್ಟ್ರ ಒಂದು ಚಿನ್ನದ ದರ’ ಕಡೆಗೆ ಹೆಜ್ಜೆಯಿಡುತ್ತಿರುವ ಭಾರತ: ಭಾರತೀಯ ಆಭರಣಕಾರರಿಗೆ ಅಂತರರಾಷ್ಟ್ರೀಯ ಬೆಲೆಯಲ್ಲಿ ಚಿನ್ನ ಆಮದಿಗೆ ಅನುಮತಿ

ಗಾಂಧಿನಗರ: ಶುಕ್ರವಾರ ಗುಜರಾತಿನ ಗಾಂಧಿನಗರದ ‘ಗಿಫ್ಟ್’ ನಗರದಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್ ಬುಲಿಯನ್ ಎಕ್ಸ್‌ಚೇಂಜ್ ಪ್ರಾರಂಭವಾದ ನಂತರ, ಭಾರತೀಯ ಚಿನ್ನ ವ್ಯಾಪಾರಿಗಳು ಉತ್ಸುಕರಾಗಿದ್ದಾರೆ. ಈ ವಿನಿಮಯವು ಭಾರತೀಯ ಚಿನ್ನ ವ್ಯಾಪಾರಿಗಳು ಅಂತರರಾಷ್ಟ್ರೀಯ ಬೆಲೆಯಲ್ಲಿ ಚಿನ್ನವನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಸರಕು ಸಾಗಣೆಯಲ್ಲಿ ದೊಡ್ಡ ಮೊತ್ತ ಉಳಿತಾಯವಾಗುತ್ತದೆ. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಅರ್ಹ ಆಭರಣ ವ್ಯಾಪಾರಿಗಳು ಮತ್ತು ಬ್ಯಾಂಕುಗಳು ಅಂತರರಾಷ್ಟ್ರೀಯ ಬೆಲೆಗೆ ಚಿನ್ನವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುವುದರಿಂದ ವಿನಿಮಯವು ‘ಒಂದು ರಾಷ್ಟ್ರ ಒಂದು ಚಿನ್ನದ ದರ’ ಕಡೆಗೆ […]

ಕೆಸಿಇಟಿ ಇಂಜಿನಿಯರಿಂಗ್ ನಲ್ಲಿ ಜ್ಞಾನಸುಧಾದ ಸ್ತುತಿಗೆ 40ನೇ ರ‍್ಯಾಂಕ್; ಜಿಲ್ಲೆಗೆ ಪ್ರಥಮ ಸ್ಥಾನ

ಕಾರ್ಕಳ : ಕೆಸಿಇಟಿ ಇಂಜಿನಿಯರಿಂಗ್ 2022ರ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕು. ಸ್ತುತಿ ಎಸ್, ಕೆಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 40ನೇ ರ‍್ಯಾಂಕ್ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಈ ವರ್ಷ ರಾಜ್ಯದಲ್ಲಿ ಒಟ್ಟು 2,10,829 ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆ ಬರೆದಿದ್ದು, ಇದರಲ್ಲಿಇವಳ ಸಾಧನೆಯು ಶ್ಲಾಘನೀಯ ಸಂಗತಿಯಾಗಿದೆ. ಈಕೆಯು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಐದು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳಿಸಿ, 593 ಅಂಕಗಳೊಂದಿಗೆ ರಾಜ್ಯಕ್ಕೆ 6 ನೇ ರ‍್ಯಾಂಕ್, ಕಾಮೆಡ್-ಕೆ […]