ಶಿರ್ವ: ಫ್ರೆಂಡ್ಸ್ ಗ್ರೂಪ್ ಕಳತ್ತೂರು ವತಿಯಿಂದ ಆಟಿಡೊಂಜಿ ದಿನಾಚರಣೆ

ಶಿರ್ವ: ಆಟಿಯ ತಿಂಗಳ ಪ್ರಯುಕ್ತ ಜುಲೈ 31 ರಂದು ತುಳುನಾಡಿನ ವಿಶಿಷ್ಟ ಆಚರಣೆಗಳುಳ್ಳ ಆಂಟಿಡೊಂಜಿ ದಿನ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಬಬಿತ ಅರಸ್ ರವರು ಆಟಿ ದಿನದ ವಿಶೇಷತೆ, ಹಿಂದಿನ ಆಟಿ ತಿಂಗಳ ಸಂಕಷ್ಟದ ದಿನಗಳ ಬಗ್ಗೆ ನೆನೆಪಿಸಿಕೊಂಡರು. ಫ್ರೆಂಡ್ಸ್ ಗ್ರೂಪ್ ವತಿಯಿಂದ ಕಳತ್ತೂರು ರಂಗನಾಥ ಶೆಟ್ಟಿ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಶೇಖರ ಶೆಟ್ಟಿ ಕಳತ್ತೂರು, ವಾಸು ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು. ಶ್ರೀಮತಿ ಸುಮನ ದೇವಾಡಿಗ ಸ್ವಾಗತಿಸಿದರು, […]

ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಿದ ಕೀರ್ತಿ ಡಾಕ್ಟರ್ ಸತೀಶ್ ಹೊಸಮನಿ ಸಲ್ಲುತ್ತದೆ: ರಮಾನಂದ ಗುರೂಜಿ

ಹೊಸಪೇಟೆ: ಜ್ಞಾನಭಂಡಾರಗಳೆನಿಸಿದ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಿ ಪ್ರತಿಯೊಬ್ಬರಿಗೂ ದೊರಕುವಂತೆ ಮಾಡಿದ ಕೀರ್ತಿ ಡಾಕ್ಟರ್ ಸತೀಶ ಹೊಸಮನಿ ಅವರಿಗೆ ಲಭಿಸುತ್ತದೆ. ಇವರ ಸಾಧನೆ ಎಲ್ಲರಿಗೂ ಮಾದರಿಯಾಗಲಿ ಎಂದು ರಮಾನಂದ ಗುರೂಜಿ ಹೇಳಿದರು. ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಹೊಸಪೇಟೆಯಲ್ಲಿ ನಡೆದ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ಸಾಂಸ್ಕೃತಿಕ ಲೋಕೋತ್ಸವ 2022 ಹಾಗೂ ಜುಲೈ 31ರ೦ದು ನೆರವೇರಲಿರುವ ವಿಜಯನಗರ ಕರ್ನಾಟಕ 4 ನೇ ಸಾಂಸ್ಕೃತಿಕ […]

ಮೆಸ್ಕಾಂ ಉಡುಪಿ ವೃತ್ತ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್ ಬೀಳ್ಕೋಡುಗೆ

ಉಡುಪಿ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್ ಸುಮಾರು 32 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಶನಿವಾರ ಸೇವಾ ನಿವೃತ್ತಿ ಹೊಂದಿದರು. ಇವರ ಬೀಳ್ಕೋಡುಗೆ ಸಮಾರಂಭ ನೌಕರ ಸಂಘದ ಸಭಾ ಭವನ ಕುಂಜಿಬೆಟ್ಟು ಇಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯ ನಿರ್ವಾಹಕ ಇಂಜಿನಿಯರ್ ರಾಕೇಶ್ ಕುಂದಾಪುರ ವಹಿಸಿದ್ದರು. ಇವರು ನರಸಿಂಹ ಪಂಡಿತ್ ದಂಪತಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನರಸಿಂಹ ಪಂಡಿತ್ ಇವರು ಉಡುಪಿ […]

ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಪತ್ನಿ ನಾಗರತ್ನ ಹೆಗ್ಡೆ ನಿಧನ

ಕುಂದಾಪುರ: ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಪತ್ನಿ ನಾಗರತ್ನ ಹೆಗ್ಡೆ(80) ಭಾನುವಾರ ಸಂಜೆ ಬಸ್ರೂರಿನ ತಮ್ಮ ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ಮಧ್ಯಾಹ್ನ ಕೊಲ್ಲೂರು ಸಮೀಪದ ಕೂಡುರು ಮನೆಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದ್ದು, ಬೆಳಗ್ಗೆ 11 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇಡಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ.

ಭಾರತದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ ದಾಖಲೆ: 313 ಕಿಲೋ ಭಾರ ಎತ್ತಿ ಚಿನ್ನದ ಪದಕ ಗೆಲುವು

ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ವೇಟ್‌ಲಿಫ್ಟಿಂಗ್ ಪದಕದ ಬೇಟೆಯು ಮೂರನೇ ದಿನವೂ ಮುಂದುವರೆಯಿತು. ಭಾರತದ 73 ಕೆಜಿ ಪ್ರತಿನಿಧಿ ಅಚಿಂತಾ ಶೆಯುಲಿ ಈವೆಂಟ್‌ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. 20 ವರ್ಷದ ಆಟಗಾರ 313 ಕಿಲೋ (ಸ್ನ್ಯಾಚ್‌ನಲ್ಲಿ 143 ಕೆಜಿ ಮತ್ತು ಕ್ಲೀನ್ & ಜರ್ಕ್‌ನಲ್ಲಿ 170 ಕೆಜಿ) ಭಾರ ಎತ್ತಿ ಸ್ವರ್ಣ ಪದಕ ಗೆದ್ದಿದ್ದಾರೆ. ಸೌಹಾರ್ದ ಪಂದ್ಯಗಳ ಈ ಆವೃತ್ತಿಯಲ್ಲಿ ಅತ್ಯುತ್ತಮ ತಂಡವು ಈಗಾಗಲೇ 6 ಪದಕಗಳನ್ನು ಪಡೆದಿರುವುದರಿಂದ ಭಾರತವು ವೇಟ್‌ಲಿಫ್ಟಿಂಗ್‌ನಲ್ಲಿ ಅಸಾಧಾರಣ […]