ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಹಂತಕರನ್ನು ಎನ್ಕೌಂಟರ್ ಮಾಡಲು ಆಗ್ರಹಿಸಿದ ಕುಯಿಲಾಡಿ; ಜಿಹಾದಿಗಳಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಿ ಎಂದ ಯಶಪಾಲ್ ಸುವರ್ಣ

ಉಡುಪಿ: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ಕಾನೂನಾತ್ಮಕ ಉಗ್ರ ಶಿಕ್ಷೆಗೆ ಒಳಪಡಿಸುವ ಜೊತೆಗೆ ಹಂತಕರ ಹಿಂದಿರುವ ಸಂಘಟನೆಯನ್ನು ಪತ್ತೆ ಹಚ್ಚಿ ರೂವಾರಿ ಜಿಹಾದಿಗಳನ್ನು ಹೈದರಾಬಾದ್ ಮಾದರಿಯಲ್ಲಿ ಎನ್ಕೌಂಟರ್ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ. ಶಿವಮೊಗ್ಗದ ಹರ್ಷ ಹತ್ಯೆಯ ಬಳಿಕ ಇದೀಗ ನಡೆದಿರುವ‌ ಪ್ರವೀಣ್ ನೆಟ್ಟಾರು ಕಗ್ಗೊಲೆ ರಾಜ್ಯ ಗೃಹ ಖಾತೆಗೆ ಸವಾಲಾಗಿ […]

ಮಹಾತ್ಮರು ನಡೆದಾಡಿದ ಪುಣ್ಯ ಭೂಮಿ ನಮ್‌ ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಲಾವಣ್ಯ ಬರೆದ ವಿಶೇಷ ಬರಹ

ನಮ್ಮೂರಾದ ಕುಂದಾಪುರವು ತನ್ನ ವಿಶಿಷ್ಟವಾದ ಭಾಷೆ, ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ಆಹಾರ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಒಳಗೊಂಡು ಕರ್ನಾಟಕ ರಾಜ್ಯದಲ್ಲಿ ಎಲ್ಲರಿಂದಲೂ ಗುರುತಿಸಲ್ಪಡುವ ತಾಲೂಕಾಗಿದೆ. ಇದರ ಜೊತೆಗೆ ವಿಶ್ವ ಕುಂದಾಪುರ ದಿನವನ್ನು ಇಡೀ ದೇಶದಾದ್ಯಂತ ಆಚರಿಸುತ್ತಾರೆ ಎನ್ನುವುದು ನಮಗೆ ಅಭಿಮಾನದ ಸಂಗತಿ. ಹಾಗಾಗಿ ವಿಶ್ವ ಕುಂದಾಪುರ ದಿನದ ಸಲುವಾಗಿ ಈ ಲೇಖನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿರುವುದಲ್ಲ. ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನ ಇದರ […]

ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಅಧ್ಯಕ್ಷರಾಗಿ ಕೆ.ಉದಯ ಕುಮಾರ್ ಶೆಟ್ಟಿ ನೇಮಕ

ಉಡುಪಿ: ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಅಧ್ಯಕ್ಷರಾಗಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ

ಪ್ರವೀಣ್ ನೆಟ್ಟಾರ್ ಹತ್ಯೆ ಅಮಾನವೀಯ: ಕಾಪು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಚರಣ್ ವಿಠಲ್

ಉಡುಪಿ: ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ, ಸಂಘಟನಾ ಕಾರ್ಯದರ್ಶಿ ಹಾಗೂ ಹಿಂದೂ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕೊಲೆ ಅಮಾನವೀಯ ಹಾಗೂ ಖಂಡನೀಯ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ (ಉತ್ತರ) ಅಧ್ಯಕ್ಷ ಚರಣ್ ವಿಠ್ಠಲ್ ಹೇಳಿದ್ದಾರೆ. ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರ ಹತ್ಯೆ ನೆಡೆಯುತ್ತಲೇ ಇದೆ, ಇದರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಕಠಿಣ ಕ್ರಮವನ್ನು ಕೈಗೊಂಡು ರಾಜ್ಯದ ಪ್ರತಿಯೊಬ್ಬ ಜನತೆಗೆ ರಕ್ಷಣೆ ನೀಡಬೇಕು. ಕೊಲೆ ಮಾಡಿದಂತಹ ದುಷ್ಕರ್ಮಿಗಳನ್ನು […]

ಗೆಳೆಯರ ಬಳಗ ಲಕ್ಷ್ಮೀನಗರ ಗರ್ಡೆ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಉಡುಪಿ: ಗೆಳೆಯರ ಬಳಗ ಲಕ್ಷ್ಮೀನಗರ ಗರ್ಡೆ ವತಿಯಿಂದ ಕೃಷ್ಣಪ್ಪ ಕಾಂಪ್ಲೆಕ್ಸ್ ನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ನಗರ ಸಭಾ ಸದಸ್ಯ ವಿಜಯ್ ಕೊಡವೂರು, ಇಂದು ನಮಗೆ ನಮ್ಮ ಹಿರಿಯರು ನಡೆದ ಹೆಜ್ಜೆ ಗುರುತುಗಳು ನೆನಪಾಗಲು ಪ್ರಾರಂಭವಾಗಿದೆ. ಇದು ಒಳ್ಳೆಯ ವಿಷಯವಾದ್ದರಿಂದ ನಾವು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾರ್ಯಕ್ರಮವು ಕೇವಲ ತಿಂಡಿ ತಿನಿಸುಗಳಿಗೆ ಮಾತ್ರ ಸೀಮಿತವಾಗಿರದೆ, ಹಿರಿಯರು ನಡೆದ ಜೀವನದ ಪ್ರತಿಕ್ಷಣವೂ ಅವರ ಪ್ರತಿ ಗುಣವೂ ನಮ್ಮದಾಗಬೇಕಾಗಿದೆ. ಒಂದು ಮನೆಯಲ್ಲಿ ಒಟ್ಟಾಗಿ […]