ಡ್ರೀಮ್ ಕ್ಯಾಚರ್ ಈವೆಂಟ್‌ ಪ್ರಸ್ತುತ ಪಡಿಸುವ ಮಂಗಳೂರು ಗಾಟ್ ಟ್ಯಾಲೆಂಟ್ ಸೀಸನ್- 2 ಶೀಘ್ರದಲ್ಲಿ ಆರಂಭ

ಮಂಗಳೂರು: ಎರಡು ವರ್ಷದ ವಿರಾಮದ ನಂತರ ಮರಳಿ ಬರುತ್ತಿರುವ, ಮಂಗಳೂರಿನ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆ, ಮಂಗಳೂರು ಗಾಟ್ ಟ್ಯಾಲೆಂಟ್ ಸೀಸನ್- 2 ನ ನೋಂದಣಿ ಪ್ರಕ್ರಿಯೆಗಳು ಆಗಸ್ಟ್ 14 ಭಾನುವಾರ 2 ಗಂಟೆಯಿಂದ ಶುರುವಾಗಲಿದೆ. ಈ ಪ್ರತಿಭಾ ಪ್ರದರ್ಶನದ ಸ್ಪರ್ಧೆಯಲ್ಲಿ 16 ವರ್ಷ ಮೇಲ್ಪಟ್ಟ ವ್ಯಕ್ತಿಗಳು ವೈಯಕ್ತಿಕ ಅಥವಾ ಗ್ರೂಪ್ ವಿಭಾಗದಲ್ಲಿ ಭಾಗವಹಿಸಬಹುದು. ಬಹು ನಮೂದುಗಳನ್ನು ಅನುಮತಿಸಲಾಗಿದೆ. ಸಂಗೀತಗಾರರು, ನೃತ್ಯ ಪಟುಗಳು, ಹಾಡುಗಾರರರು, ರಾಪರ್ ಗಳು, ನಟರು, ಕಾಮಿಡಿಯನ್ ಗಳು, ಮ್ಯಾಜಿಷಿಯನ್ ಗಳು ಅಥವಾ ಕಲಾಕಾರರು ಹೀಗೆ […]

ಸಿ.ಎ. ಫೈನಲ್, ಸಿ.ಎ. ಇಂಟರ್ ಮೀಡಿಯಟ್ ಹಾಗೂ ಸಿಎಸ್‍ಇಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ತ್ರಿಶಾ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ

ಮಂಗಳೂರು: ತ್ರಿಶಾ ಕ್ಲಾಸಸ್ ನಲ್ಲಿ ತರಬೇತಿ ಪಡೆದು ಕಳೆದ ಜೂನ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಿ.ಎ. ಫೈನಲ್, ಸಿ.ಎ. ಇಂಟರ್ ಮಿಡಿಯೆಟ್ ಮತ್ತು ಸಿಎಸ್‍ಇಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಗಳೂರಿನ ತ್ರಿಶಾ ಕಾಲೇಜ್ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿ.ಎ.ಸುನೀಲ್‍ ಅಂಬ್ಲಾನಿಯವರು “ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಲಭಿಸಬೇಕಾದರೆ ನಂಬಿಕೆ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಎಂಬ ಮೂರು ಸೂತ್ರಗಳು ಅದರ ಕೀಲಿಕೈ ಆಗಿರಬೇಕು, ಇದನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸು […]

ಪ್ರವೀಣ್ ಹತ್ಯೆ ಹಿನ್ನೆಲೆ: ಶಂಕಿತ ಏಳು ಎಸ್.ಡಿ.ಪಿ.ಐ ಕಾರ್ಯಕರ್ತರು ವಶಕ್ಕೆ

ಸುಳ್ಯ: ಹಿಂದೂ ಕಾರ್ಯಕರ್ತ, ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಂಕೆಯ ಹಿನ್ನಲೆಯಲ್ಲಿ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ತಡರಾತ್ರಿ ಕಾರ್ಯಕರ್ತರ ಮನೆಗೆ ಆಗಮಿಸಿದ ಪೊಲೀಸರು ಎಳು ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ವಶಕ್ಕೆ ಪಡೆದ ಎಲ್ಲಾ ಏಳು ಕಾರ್ಯಕರ್ತರು ಬೆಳ್ಳಾರೆ ಪರಿಸರದ ನಿವಾಸಿಗಳು ಎಂದು ತಿಳಿದು ಬಂದಿದೆ. […]

2025 ರ ಐ.ಸಿ.ಸಿ ಮಹಿಳಾ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್ ಗೆ ಭಾರತದ ಆತಿಥ್ಯ

ನವದೆಹಲಿ: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಖಚಿತಪಡಿಸಿದೆ. ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಶ್ರೀಲಂಕಾವನ್ನು 2024 ರಿಂದ 2027 ವರೆಗೆ ನಡೆಯುವ ಐಸಿಸಿ ಮಹಿಳಾ ವೈಟ್-ಬಾಲ್ ಈವೆಂಟ್‌ಗಳಿಗೆ ನಾಲ್ಕು ಆತಿಥೇಯರು ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶವು 2024 ರ ಮಹಿಳಾ ಟಿ20 ವಿಶ್ವಕಪ್ ಅನ್ನು ಆಯೋಜಿಸಿದರೆ, 2026 ರ ಆವೃತ್ತಿಯು ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಒಂದು ವೇಳೆ ಈವೆಂಟ್‌ಗೆ ಅರ್ಹತೆ ಪಡೆದರೆ, 2027 ರಲ್ಲಿ ನಿಗದಿಪಡಿಸಲಾದ ಮಹಿಳಾ […]