ಡ್ರೀಮ್ ಕ್ಯಾಚರ್ ಈವೆಂಟ್‌ ಪ್ರಸ್ತುತ ಪಡಿಸುವ ಮಂಗಳೂರು ಗಾಟ್ ಟ್ಯಾಲೆಂಟ್ ಸೀಸನ್- 2 ಶೀಘ್ರದಲ್ಲಿ ಆರಂಭ

  1. ಮಂಗಳೂರು: ಎರಡು ವರ್ಷದ ವಿರಾಮದ ನಂತರ ಮರಳಿ ಬರುತ್ತಿರುವ, ಮಂಗಳೂರಿನ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆ, ಮಂಗಳೂರು ಗಾಟ್ ಟ್ಯಾಲೆಂಟ್ ಸೀಸನ್- 2 ನ ನೋಂದಣಿ ಪ್ರಕ್ರಿಯೆಗಳು ಆಗಸ್ಟ್ 14 ಭಾನುವಾರ 2 ಗಂಟೆಯಿಂದ ಶುರುವಾಗಲಿದೆ.

ಈ ಪ್ರತಿಭಾ ಪ್ರದರ್ಶನದ ಸ್ಪರ್ಧೆಯಲ್ಲಿ 16 ವರ್ಷ ಮೇಲ್ಪಟ್ಟ ವ್ಯಕ್ತಿಗಳು ವೈಯಕ್ತಿಕ ಅಥವಾ ಗ್ರೂಪ್ ವಿಭಾಗದಲ್ಲಿ ಭಾಗವಹಿಸಬಹುದು. ಬಹು ನಮೂದುಗಳನ್ನು ಅನುಮತಿಸಲಾಗಿದೆ.
ಸಂಗೀತಗಾರರು, ನೃತ್ಯ ಪಟುಗಳು, ಹಾಡುಗಾರರರು, ರಾಪರ್ ಗಳು, ನಟರು, ಕಾಮಿಡಿಯನ್ ಗಳು, ಮ್ಯಾಜಿಷಿಯನ್ ಗಳು ಅಥವಾ ಕಲಾಕಾರರು ಹೀಗೆ ಯಾರು ಬೇಕಿದ್ದರೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮಂಗಳೂರು ಗಾಟ್ ಟ್ಯಾಲೆಂಟ್ ಅತ್ಯುತ್ತಮ ವೇದಿಕೆಯಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವವರು ತಮ್ಮ ಹೆಸರನ್ನು ಆಗಸ್ಟ್ 14 ಭಾನುವಾರದಂದು 2 ಗಂಟೆಯಿಂದ ಮಂಗಳೂರು ಡೊಂಗರಕೇರಿಯ ಕೆನರಾ ಹೈ ಸ್ಕೂಲ್ ನ ಭುವನೇಂದ್ರ ಸಭಾ ಭವನದಲ್ಲಿ ನೋಂದಾಯಿಸಬಹುದು.

ನೋಂದಣಿಗಾಗಿ 8884410414 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

ಭಾಗವಹಿಸುವ ಸ್ಪರ್ಧಾಳುಗಳಿಗೆ ನಗದು ಬಹುಮಾನ, ಭಾಗವಹಿಸುವಿಕೆಯ ಪ್ರಮಾಣಪತ್ರ, ಟ್ರೋಫಿಗಳು ಮತ್ತು ಉಡುಗೊರೆ ವೌಚೇರ್ಸ್ ಗಳನ್ನು ನೀಡಲಾಗುವುದು.