ಪ್ರಚೋದನಕಾರಿ ಭಾಷಣಗಳು ಅಮಾಯಕರ ಕೊಲೆಗೆ ಕಾರಣ: ರಮಾನಾಥ್ ರೈ
ಮಂಗಳೂರು: ಪ್ರಚೋದನಕಾರಿ ಭಾಷಣಗಳಿಂದ ಅಮಾಯಕರ ಕೊಲೆಗಳು ನಡೆದಿವೆ, ಇದರಿಂದ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದವರು ಗಲಭೆಗಳ ಹಿಂದೆ ಇರುತ್ತಾರೆ. ಇಂತಹ ಪ್ರಕರಣ ನಡೆದಾಗ ಅಮಾಯಕರು ಬಲಿಯಾಗುತ್ತಾರೆ. ಹಣ ಹಾಗೂ ಅಧಿಕಾರಕ್ಕಾಗಿ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯ. ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಸರಕಾರ ನಿರ್ಲಕ್ಯ ವಹಿಸಿರುವುದು ಖಂಡನೀಯ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗು ಇಬ್ಬರ ಕುಟುಂಬಕ್ಕೂ ಯಾವುದೇ ತಾರತಮ್ಯ ಮಾಡದೆ […]
17 ವರ್ಷ ವಯಸ್ಸಿನವರು ಮತದಾರರ ಗುರುತಿನ ಚೀಟಿಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು: ಚುನಾವಣಾ ಆಯೋಗ
ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಮತದಾರರ ನೋಂದಣಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 17 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತದಾರರ ಗುರುತಿನ ಚೀಟಿಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಪ್ರಕಟಿಸಿದೆ. ಈ ಮೊದಲು, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನಾಗರಿಕರಿಗೆ ಜನವರಿ 1 ರಂದು 18 ವರ್ಷ ವಯಸ್ಸು ತುಂಬಬೇಕಾಗಿತ್ತು. ಈಗ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಯುವಕರು ಪ್ರತಿ ವರ್ಷ ನಾಲ್ಕು ಅವಕಾಶಗಳನ್ನು ಪಡೆಯುತ್ತಾರೆ. 17 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರಿಗಾಗಿ ಮೂರು ಅರ್ಹತಾ ದಿನಾಂಕಗಳನ್ನು ಉಲ್ಲೇಖಿಸಿ – […]
ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಪ್ರಾಂಶುಪಾಲರಾಗಿರುವ ಗಣೇಶ ಮೊಗವೀರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲಾವಿದ ರಾಮ್ ಶೆಟ್ಟಿ ಅತ್ತಿಕಾರ್ ಕುಂದಾಪ್ರ ಕನ್ನಡ ಆಚರಣೆಯ ಮಹತ್ವದ ಕುರಿತು ಮಾತನಾಡಿದರು. ಪ್ರಾಂಶುಪಾಲ ಗಣೇಶ್ ಮೊಗವೀರ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆ ಅಗತ್ಯತೆ ಹಾಗೂ ಕುಂದಕನ್ನಡದ ಸಾಧಕರ ಕುರಿತು ಮಾಹಿತಿ ನೀಡಿದರು. ಸಮಾರಂಭದಲ್ಲಿ ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳವಾರ, […]
ವಿಕ್ರಾಂತ್ ರೋಣಾಗೆ ಶುಭ ಹಾರೈಸಿದ ರಾಜಮೌಳಿ; ಸಿನಿಮಾ ನೋಡಿ ಕಿಚ್ಚನಿಗೆ ಜೈ ಅಂದ ಪ್ರೇಕ್ಷಕರು
ನಿರ್ದೇಶಕ ಎಸ್ಎಸ್ ರಾಜಮೌಳಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಿರ್ದೇಶಕರಲ್ಲಿ ಒಬ್ಬರು. ಇವರ ಹೆಸರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಅಂತಹ ಒಬ್ಬ ನಿರ್ದೇಶಕನ ಕೈಯಲ್ಲಿ ಹೊಗಳಿಸಿಕೊಳ್ಳುವುದೆಂದರೆ ನಿಜವಾಗಿಯೂ ಖುಷಿಯ ವಿಚಾರ. ಬುಧವಾರ, ವಿಶ್ವ ದರ್ಜೆಯ ನಿರ್ದೇಶಕ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಕ್ರಾಂತ್ ರೋಣ ಚಿತ್ರ ತಂಡ ಮತ್ತು ಕಿಚ್ಚ ಸುದೀಪ್ ಅವರಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಬುಧವಾರ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಎಸ್‌ಎಸ್ ರಾಜಮೌಳಿಯವರು ವಿಕ್ರಾಂತ್ ರೋಣದ ನಾಯಕ ನಟ ಕಿಚ್ಚ ಸುದೀಪ್ ಅವರನ್ನು ಹೊಗಳಿ ಬರೆದಿದ್ದಾರೆ. “ಸುದೀಪ್ […]
ಕುಂದಾಪುರದ ಹೆಸರನ್ನು ಬಾನೆತ್ತರಕ್ಕೆ ಹಾರಿಸಿದ ಕುಂದಾಪ್ರ ಕನ್ನಡಿಗರು ನಮ್ಮ ಹೆಮ್ಮೆ ನಮ್ಮ ಆದರ್ಶ: ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಪ್ರಗತಿ ಬರೆದ ವಿಶೇಷ ಬರಹ..
ಕುಂದಾಪುರ ಎಂದಾಗ ಮೊದಲು ನೆನಪಾಗುವುದು ಇಲ್ಲಿನ ಭಾಷೆ. ಬೇರೆಲ್ಲಾ ಕನ್ನಡಕ್ಕಿಂತ ಕೇಳಲು ಸ್ವಲ್ಪ ಭಿನ್ನಾವಾಗಿಯೇ ಇದೆ. ಕೇಳಲು ಚಿಕ್ಕದಾಗಿ ಚೊಕ್ಕದಾಗಿ ಇರುವ ಭಾಷೆ ಎಂದರೆ ಅದೇ ನಮ್ಮ ಕುಂದಗನ್ನಡ. ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಹಾಗೂ ರುಚಿ ರುಚಿಯಾದ ಅಡುಗೆಗಳು ಇಲ್ಲಿನ ವಿಶೇಷತೆ. ಕುಂದಾಪುರದ ಆಹಾರ ಪದಾರ್ಥಗಳಲ್ಲಿ ಬೈಗೆ ಮೀನು ಸಾಂಬಾರು ಹೆಚ್ಚು ರುಚಿಕವಾದ ಅಡುಗೆಯಾಗಿದೆ. ಬೈಗೆ ಮೀನು ಎಂದಾಗಲೇ ಹೆಚ್ಚಿನವರ ಬಾಯಲ್ಲಿ ನೀರು ಬರುವಂತಾಗಿರುತ್ತದೆ. ” ಕೊಚ್ಚಕ್ಕಿ ಕೂಳಿಗೂ ಬೈಗಿ ಮೀನ್ ಹೊಳಿಗೂ ” ಎಂಥಹಾ […]