ಮರವಂತೆ: ಜುಲೈ 28ರಂದು ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ “ಕರ್ಕಾಟಕ ಅಮಾವಾಸ್ಯೆ ಜಾತ್ರೆ”
ಕುಂದಾಪುರ: ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಮರವಂತೆ ಬೈಂದೂರು ತಾಲೂಕುನಲ್ಲಿ ವರ್ಷಂಪ್ರತಿ ಶ್ರೀ ವರಾಹ ದೇವರ ಸನ್ನಿಧಿಯಲ್ಲಿ ನಡೆಯಲಿರುವ “ಕರ್ಕಾಟಕ ಅಮಾವಾಸ್ಯೆ ಜಾತ್ರೆ” ಯು ಇದೇ ತಾ.28-07-2022ನೇ ಗುರುವಾರ ಜರುಗಲಿರುವ ಪ್ರಯುಕ್ತ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ, ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಸಹಕರಿಸಿ, ಶ್ರೀದೇವರ ಸಿರಿಮುಡಿ ಗಂಧ- ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗಬೇಕಾಗಿ ಅಪೇಕ್ಷಿಸುವ ದೇವಸ್ಥಾನದ ಅರ್ಚಕರು ಉಪಾದಿವಂತರು, ನೌಕರ ವರ್ಗ ಮತ್ತು ಆಸುಪಾಸಿನ ಊರಿನ ಗ್ರಾಮಸ್ಥರು ಸತೀಶ ಎಂ. ನಾಯಕ ವ್ಯವಸ್ಥಾಪನಾ ಸಮಿತಿಯ […]
ಬೆಳ್ಳಾರೆ ಉದ್ವಿಗ್ನ: ನಳಿನ್ ಕುಮಾರ್ ಕಟೀಲ್ ಕಾರಿಗೆ ಮುತ್ತಿಗೆ; ಸಾರ್ವಜನಿಕರಿಂದ ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್
ಸುಳ್ಯ: ನಿನ್ನೆ ತಡರಾತ್ರಿ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರೆ ಅವರ ಬರ್ಬರ ಹತ್ಯೆ ನಡೆದಿದ್ದು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಶಿಕ್ಷಿಸುವ ಭರವಸೆ ನೀಡಿದ್ದರೂ ಸಾರ್ವಜನಿಕರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ. ಘಟನೆಯ ಬಳಿಕ ಸುದ್ದಿ ತಿಳಿದ ಸಂಸದ, ಸಚಿವರು, ಶಾಸಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಸಂದರ್ಭ ಜನತೆಯ ಮಡುಗಟ್ಟಿದ ಆಕ್ರೋಶ ಕಾರಿಗೆ ಮುತ್ತಿಗೆ ಹಾಕುವ ರೂಪದಲ್ಲಿ ವ್ಯಕ್ತವಾಗಿದೆ. ಸಂಸದ ನಳಿನ್ ಕುಮಾರ್, ಸಚಿವ ಸುನಿಲ್ ಕುಮಾರ್ ಮತ್ತು ಸ್ಥಳೀಯ ಶಾಸಕರ ಕಾರಿಗೆ ಮುತ್ತಿಗೆ […]
ಜುಲೈ 29 ರಂದು ಉಡುಪಿ ತಾ.ಪಂ ಸಾಮಾನ್ಯ ಸಭೆ
ಉಡುಪಿ: ಉಡುಪಿ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆಯು ಜುಲೈ 29 ರಂದು ಬೆಳಗ್ಗೆ 11.30 ಕ್ಕೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಆಡಳಿತ ಅಧಿಕಾರಿ ಬಾಬು ಎಮ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಉಡುಪಿ: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಪರಿಶಿಷ್ಟ ವರ್ಗದ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಂದ ಅರ್ಹತಾ ವಿದ್ಯಾರ್ಥಿವೇತನಕ್ಕೆ ವೆಬ್ಸೈಟ್ www.tw.kar.nic.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಣಿಪಾಲ ದೂ.ಸಂಖ್ಯೆ: 0820-2574814, 2950198 ಅಥವಾ ಉಡುಪಿ ದೂ.ಸಂಖ್ಯೆ: 0820-258884, ಕುಂದಾಪುರ ದೂ.ಸಂಖ್ಯೆ: 08254-234609 ಹಾಗೂ ಕಾರ್ಕಳ ದೂ.ಸಂಖ್ಯೆ: 08258-232133 […]
ಒಂದು ತಿಂಗಳಲ್ಲಿ 3,419 ಕೋಟಿ ವಿದ್ಯುತ್ ಬಿಲ್: ಮಧ್ಯಪ್ರದೇಶ ವಿದ್ಯುತ್ ನೌಕರನ ಅವಾಂತರಕ್ಕೆ ತಲೆ ತಿರುಗಿ ಆಸ್ಪತ್ರೆ ಸೇರಿದ ಮನೆ ಹಿರಿಸದಸ್ಯ
ಭೋಪಾಲ್: ಒಂದೇ ತಿಂಗಳಲ್ಲಿ 3,419 ಕೋಟಿ ರೂಪಾಯಿ ವಿದ್ಯುತ್ ಖರ್ಚು! ಈ ವಿದ್ಯುತ್ ಬಿಲ್ ನೋಡಿ ಮನೆಯ ಮಾಲೀಕರಿಗೆ ತಲೆ ತಿರುಗಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಗ್ವಾಲಿಯರ್ನ ಶಿವ ವಿಹಾರ್ ಕಾಲೋನಿ ನಿವಾಸಿ ಪ್ರಿಯಾಂಕಾ ಗುಪ್ತಾ ಮನೆಗೆ ಜುಲೈನಲ್ಲಿ 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಬಂದಾಗ ಮನೆ ಮಂದಿಯೆಲ್ಲಾ ಆಘಾತಕ್ಕೊಳಗಾಗಿ ಮನೆಯ ಹಿರಿಯ ಸದಸ್ಯ, ಪ್ರಿಯಾಂಕಾರವರ ಮಾವ ಅಸ್ವಸ್ಥರಾಗಿ ಆಸ್ಪತ್ರೆ ಸೇರಬೇಕಾಗಿ ಬಂದಿದೆ. ತನ್ನ ತಂದೆ ವಿದ್ಯುತ್ ಬಿಲ್ ನೋಡಿ […]