ಹರ್ ಘರ್ ತಿರಂಗಾ ಅಭಿಯಾನ ಸಂಬಂಧಿತ ಚಟುವಟಿಕೆ: ಕಾರ್ಪೊರೇಟ್ ಕಂಪನಿಗಳ ಸಿಎಸ್ಆರ್ ನಿಧಿ ಖರ್ಚು ಮಾಡಲು ಅವಕಾಶ

ನವದೆಹಲಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಸಿಎಸ್ಆರ್ ಹಣವನ್ನು ಖರ್ಚು ಮಾಡಬಹುದು ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಹೇಳಿದೆ. ಸಚಿವಾಲಯವು ಸುತ್ತೋಲೆಯಲ್ಲಿ, ಈ ಅಭಿಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಉದಾಹರಣೆಗೆ, ರಾಷ್ಟ್ರಧ್ವಜದ ಸಾಮೂಹಿಕ ಉತ್ಪಾದನೆ ಮತ್ತು ಪೂರೈಕೆ, ಅಭಿಯಾನದ ತಲುಪುವಿಕೆ ಮತ್ತು ವರ್ಧನೆ ಪ್ರಯತ್ನಗಳು, ಸಂಸ್ಕೃತಿಗೆ ಸಂಬಂಧಿಸಿದ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಇತರ ಸಂಬಂಧಿತ ಚಟುವಟಿಕೆಗಳು ಕಂಪನಿಗಳ ಕಾಯಿದೆಯ ವೇಳಾಪಟ್ಟಿ VII ಅಡಿಯಲ್ಲಿ ಅರ್ಹವಾದ ಸಿಎಸ್‌ಆರ್ ಚಟುವಟಿಕೆಗಳಾಗಿದ್ದು, ಈ […]

ಬಿಜೆಪಿ ಮುಖಂಡನ ಅಮಾನವೀಯ ಹತ್ಯೆ: ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಶಿಕ್ಷಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ . ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ […]

ಭಾರತದ ಪ್ರಪ್ರಥಮ 5ಜಿ ತರಂಗಾಂತರ ಹರಾಜಿನ ಮೊದಲ ದಿನದಂದು 1.45 ಲಕ್ಷ ಕೋಟಿ ರೂ ದಾಖಲೆ ಬಿಡ್ಡಿಂಗ್ ಸ್ವೀಕರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದ ಪ್ರಪ್ರಥಮ 5ಜಿ ತರಂಗಾಂತರ ಹರಾಜಿನ ಮೊದಲ ದಿನದಂದು ಸರ್ಕಾರವು 1.45 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಬಿಡ್ಡಿಂಗ್ ಅನ್ನು ಸ್ವೀಕರಿಸಿದೆ. ಮೊದಲ ದಿನದಂದು ನಿರ್ಣಾಯಕ 700 MHz ಬ್ಯಾಂಡ್ ಮೊದಲ ಬಾರಿಗೆ ಬಿಡ್ಡಿಂಗ್ ಕಂಡಿತು. ಮಧ್ಯಮ-ಬ್ಯಾಂಡ್ (3.3-3.67 GHz) ಮತ್ತು ಉನ್ನತ-ಬ್ಯಾಂಡ್ (26 GHz) ಏರ್‌ವೇವ್‌ಗಳು ಬಿಡ್ಡುದಾರರಲ್ಲಿ ಬಲವಾದ ಆಸಕ್ತಿಯನ್ನು ಆಕರ್ಷಿಸಿದವು. ಎಲ್ಲಾ ಬಿಡ್‌ಗಳು ಮೂಲ ಬೆಲೆಯಲ್ಲಿವೆ. ಎಲ್ಲಾ ಮೂರು ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು, […]

ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ: ಪುತ್ತೂರಿನಲ್ಲಿ ಸೆಕ್ಷನ್ 144 ಜಾರಿ

ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಎಂಬ ಯುವಕನ ​ ಹತ್ಯೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (32) ಕೊಲೆಯಾದ ದುರ್ದೈವಿ. ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿಯನ್ನು ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ […]

ಕೊಡವೂರು ವಾರ್ಡ್ 20ನೇ ಬೃಹತ್ ಗ್ರಾಮ ಸಭೆ: ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಕಾರ್ಯ ಸಂಪನ್ನ

  ಉಡುಪಿ:  ಕೊಡವೂರು ವಾರ್ಡಿನ 20ನೇ ಗ್ರಾಮ ಸಭೆಯು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಿತು. ಮಲ್ಪೆ ಠಾಣಾಧಿಕಾರಿ  ಶಕ್ತಿವೇಳು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಸಭೆಯನ್ನು ಮಾಡುವ ಮೂಲಕ ಜನರ ಕುಂದು ಕೊರತೆಗಳನ್ನು ತಿಳಿದು ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಬಹುದು. ಅಪರಾಧವಿಲ್ಲದ ಸಮಾಜ ನಿರ್ಮಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ನಾವು ನಮ್ಮ ಮಕ್ಕಳ ಬಗ್ಗೆ ಜವಾಬ್ದಾರಿಯಿಂದ ನಡೆಯಬೇಕು ಎಂದರು. ನಗರಸಭಾ ಸದಸ್ಯ  ವಿಜಯ್ ಕೊಡವೂರು ಮಾತಾನಾಡಿ, ಕೇಂದ್ರ ಮತ್ತು […]