ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳದಿಂದ ತಡೆ ಪ್ರಕರಣ: ಯಾವುದೇ ದಾಳಿ ನಡೆದಿಲ್ಲ ಎಂದ ಮಂಗಳೂರು ‌ಕಮಿಷನರ್ ಶಶಿಕುಮಾರ್

ಮಂಗಳೂರು: ಇಲ್ಲಿನ ಪಬ್ ಒಂದರಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆಯೊಡ್ಡಿದ ಪ್ರಕರಣ ಸಂಬಂಧಿಸಿ ಮಂಗಳೂರು ‌ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದು, ಪಬ್ ಮೇಲೆ ದಾಳಿ ಅಂತ ಕೆಲ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಈ ವರದಿ ಸತ್ಯಕ್ಕೆ ದೂರ, ಯಾವುದೇ ಗ್ರಾಹಕರು ಅಥವಾ ಯಾರ ಮೇಲೂ ದಾಳಿ ನಡೆದಿಲ್ಲ ಎಂದು ಮಂಗಳೂರು ‌ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿದೆ. ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಪೂರೈಕೆ ನಡೆಸುತ್ತಿದುದನ್ನು ಆರೋಪಿಸಿ ಸಂಘಟನೆಯವರು ಬಂದಿದ್ದಾರೆ. ಬೌನ್ಸರ್ […]

ಸಿ.ಆರ್.ಝೆಡ್ ವಿಸ್ತರಣೆಯಿಂದ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಬೊಮ್ಮಾಯಿ

ನವದೆಹಲಿ: ಕರಾವಳಿ ನಿಯಂತ್ರಣಾ ವಲಯ ವಿಸ್ತರಣೆಯನ್ನು ರಾಜ್ಯದ ಕರಾವಳಿ ಪ್ರದೇಶಗಳಿಗೂ ಪಡೆಯಲು ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದ್ದು, ಇದರಿಂದ ಕರಾವಳಿ ಪ್ರದೇಶ ಅಭಿವೃದ್ಧಿಗೊಳ್ಳಲಿದೆ. ಗೋವಾ ಹಾಗೂ ಕೇರಳಗಳಲ್ಲಿ ಕರಾವಳಿ ನಿಯಂತ್ರಣಾ ವಲಯ ( ಸಿ ಆರ್ ಝೆಡ್ ) ವಿಸ್ತರಣೆಗೆ ಅನುಮತಿ ನೀಡಿರುವುದರಿಂದ ಹೋಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಿದೆ. ಇದೇ ರೀತಿ ರಾಜ್ಯದ ಕರಾವಳಿ ಪ್ರದೇಶಗಳಿಗೂ ಸಿ ಆರ್ ಝೆಡ್ ವಿಸ್ತರಣೆ ಪಡೆಯಲು ಗಂಭೀರ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ […]

ಕರ್ನಾಟಕದ ಗಂಡು ಕಲೆಗೆ ಅವಮಾನ; ಕರಾವಳಿಗರು ಕೆಂಡಾಮಂಡಲ: ಝೀ ವಾಹಿನಿ ಕ್ಷಮೆ ಕೇಳಿದರು ತಗ್ಗಲಿಲ್ಲ ಕೋಪ

ಬೆಂಗಳೂರು: ಕರಾವಳಿಯಲ್ಲಿ ಬಹಳ ಪೂಜ್ಯ ಭಾವನೆಯಿಂದ ಕಾಣಲಾಗುವ ಗಂಡು ಕಲೆ ಯಕ್ಷಗಾನಕ್ಕೆ ಝೀ ಕನ್ನಡ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಅವಮಾನವಾಗಿರುವ ಬಗ್ಗೆ ಕರಾವಳಿಗರು ಕೆಂಡಾಮಂಡಲರಾಗಿದ್ದು, ವಾಹಿನಿಯ ಮುಖ್ಯಸ್ಥ, ನೃತ್ಯ ನಿರ್ದೇಶಕ, ನಿರೂಪಕಿ ಹಾಗು ತೀರ್ಪುಗಾರರಿಗೆ ಮಾತಿನ ಚಾಟಿ ಏಟು ಬೀಸಿದ್ದು, ಬಾಯ್ಕಾಟ್ ಝೀ ಎನ್ನುವ ಅಭಿಯಾನಕ್ಕೆ ನಾಂದಿ ಹಾಡಿದ್ದರು. ಕರಾವಳಿಗರ ಮತ್ತು ಯಕ್ಷಾಭಿಮಾನಿಗಳ ಕೋಪಕ್ಕೆ ಹೆದರಿದ ವಾಹಿನಿ ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ್ದರೂ ಅಭಿಮಾನಿಗಳ ಕೋಪ ಇನ್ನೂ ಆರಿಲ್ಲ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಪುಷ್ಪಾ […]

“ಕ್ರಿಯೇಟ್ ಫಾರ್ ಇಂಡಿಯಾ” ಅಭಿಯಾನದಲ್ಲಿ ಭಾಗವಹಿಸಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸಿ

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಂದು ಪ್ರಾರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 16 ವಿಭಾಗಗಳಲ್ಲಿ 215 ಸದಸ್ಯರ ಭಾರತೀಯ ಅಥ್ಲೀಟ್ ತಂಡವು ಭಾಗವಹಿಸಲು ಸಿದ್ಧವಾಗಿದೆ. “ಕ್ರಿಯೇಟ್ ಫಾರ್ ಇಂಡಿಯಾ” ಅಭಿಯಾನದೊಂದಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಭಾರತೀಯ ಕ್ರೀಡಾ ಪ್ರಾಧಿಕಾರವು ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಭಾಗವಹಿಸುವವರು #create4India ಮತ್ತು #cheer4India ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ತಮ್ಮ ಸೃಜನಾತ್ಮಕ ನಮೂದುಗಳನ್ನು ಕ್ರೀಡಾ ಪ್ರಾಧಿಕಾರಕ್ಕೆ ಜುಲೈ 26, 2022 ರೊಳಗೆ ಸಲ್ಲಿಸಬಹುದು.

ತಾಜಾ ಮತ್ತು ಪಾಶ್ಚರೀಕರಿಸಿದ ಹಾಲು ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ: ಸರ್ಕಾರ ಸ್ಪಷ್ಟನೆ

ನವದೆಹಲಿ: ತಾಜಾ ಹಾಲು ಮತ್ತು ಪಾಶ್ಚರೀಕರಿಸಿದ ಹಾಲಿಗೆ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. ಇದಲ್ಲದೆ, ಹಾಲಿನ ಉತ್ಪನ್ನಗಳಾದ ಮೊಸರು, ಲಸ್ಸಿ, ಬೆಣ್ಣೆ ಹಾಲು ಮತ್ತು ಪನೀರ್ ಅನ್ನು ಸಹ ಪೂರ್ವ-ಪ್ಯಾಕೇಜ್ ಮಾಡಿದ ಮತ್ತು ಲೇಬಲ್ ಮಾಡಲಾದ ರೂಪಗಳಲ್ಲಿ ಮಾರಾಟ ಮಾಡುತ್ತಿಲ್ಲವಾದರೆ ಜಿಎಸ್‌ಟಿ ಯಿಂದ ವಿನಾಯಿತಿ ನೀಡಲಾಗುತ್ತದೆ. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 5 ಪ್ರತಿಶತದಷ್ಟು ನಾಮಮಾತ್ರ ಜಿಎಸ್‌ಟಿ ಮೊಸರು, […]