ದೊಡ್ಡಣಗುಡ್ಡೆ: ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರ ಶೀಚಕ್ರ ಮಂಡಲ ಪೂಜೆ ಸಂಪನ್ನ
ಉಡುಪಿ: ದೊಡ್ಡಣ್ಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ಅರವಿಂದ ಹೆಬ್ಬಾರ್, ವಸಂತಲಕ್ಷ್ಮೀ ಹೆಬ್ಬಾರ್ ದಂಪತಿ ಸೇವಾರ್ಥವಾಗಿ ಏಕಕಾಲ ಶ್ರೀಚಕ್ರ ಮಂಡಲ ಪೂಜೆ ಸಂಪನ್ನಗೊಂಡಿತು. ಪ್ರಾತಃಕಾಲ ಶ್ರೀ ನಾರಿಕೇಳ ಗಣಯಾಗದೊಂದಿಗೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಇವರು, ದೀಪ ಪ್ರಜ್ವಲಿಸಿ ಪಂಚವರ್ಣದಿಂದ ಕೂಡಿದ ಬಿಂದುವನ್ನಿರಿಸಿ ಶ್ರೀಚಕ್ರಮಂಡಲ ರಚನೆಗೆ ಚಾಲನೆ ನೀಡಿದರು. ವಿಶೇಷವಾಗಿ ಅಲಂಕರಿಸಿದ ಮಂಟಪದೊಳಗೆ ಶ್ರೀಚಕ್ರ ಯಂತ್ರ ರಚನೆ ಮಾಡಿ ಶ್ರೀ ರಾಜರಾಜೇಶ್ವರಿಯನ್ನು ವಿವಿಧ ಪುಷ್ಪಗಳಿಂದ ಅರ್ಚಿಸಿ, […]
ಒಬ್ಬ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪದವಿಯ ಗೌರವ; ದನಕಾಯುವ ಮತ್ತೊಬ್ಬ ಮಹಿಳೆಗೆ ರಾಷ್ಟ್ರಪ್ರಶಸ್ತಿಯ ಗರಿ! ಇದು ಬದಲಾದ ಭಾರತದ ಮಹಿಳೆಯರ ಯಶೋಗಾಥೆ….
ಪಾಲಕ್ಕಡ್: ಆಕೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯ ಎಂಬ ಪುಟ್ಟ ಹಳ್ಳಿಯಲ್ಲಿ ದನ ಮೇಯಿಸುವ ಬುಡಕಟ್ಟು ಜನಾಂಗದ ಮಹಿಳೆ. ಆಕೆ ಹಾಡಿದ ಚಲಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿ ದೊರಕಿದೆ. ಅತ್ತ ಒಡಿಸ್ಸಾದ ಪುಟ್ಟ ಹಳ್ಳಿಯಿಂದ ಬಂದ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು, ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಪದವಿಯನ್ನು ಅಲಂಕರಿಸಿದ್ದಾರೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಇದನ್ನೆಲ್ಲ ಊಹಿಸಲೂ ಸಾಧ್ಯವಿರಲಿಲ್ಲ. ರಾಜಕೀಯದಲ್ಲಾಗಲೀ, ಸಿನಿಮಾ ರಂಗದಲ್ಲಾಗಲೀ ಗಾಡ್ ಫಾದರ್, ಮದರ್ ಗಳಿಲ್ಲದೆ ಕೇವಲ ತಮ್ಮ ಪ್ರತಿಭೆ ಮತ್ತು ಸ್ವಂತ ಬಲದಿಂದಲೇ ತಮ್ಮ […]