ಕ್ಯಾನ್ಸರ್ ಪೀಡಿತ ಮಕ್ಕಳ ಆಸೆ ಪೂರೈಸಿದ ಬೆಂಗಳೂರು ಆಗ್ನೇಯ ಪೊಲೀಸ್: ಖಾಕಿ ತೊಟ್ಟು ಡಿಸಿಪಿ ಆದ ಮಕ್ಕಳು

ಬೆಂಗಳೂರು: ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಶನಿವಾರ ಕೇರಳದ ಮೊಹಮ್ಮದ್ ಸಲ್ಮಾನ್ ಮತ್ತು ಬೆಂಗಳೂರಿನ ಮಿಥಿಲೇಶ್ ಎಂಬ ಇಬ್ಬರು ಬಾಲಕರನ್ನು ಕೆಲವು ಗಂಟೆಗಳ ಕಾಲ ಉಪ ಪೊಲೀಸ್ ಆಯುಕ್ತರನ್ನಾಗಿ (ಡಿಸಿಪಿ) ಮಾಡಲಾಯಿತು ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಇದು ಪೊಲೀಸ್ ಅಧಿಕಾರಿಗಳಾಗುವ ಅವರ ಆಸೆಯನ್ನು ಈಡೇರಿಸುವ ಸಣ್ಣ ಪ್ರಯತ್ನವಾಗಿತ್ತು. ಈ ಇಬ್ಬರು ಹುಡುಗರು ಕ್ಯಾನ್ಸರ್‌ ರೋಗಿಗಳಾಗಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಮಕ್ಕಳ ಬದುಕಿನ ಬಗ್ಗೆ ಏನೂ ಹೇಳಲಾಗದಿದ್ದರೂ ಭವಿಷ್ಯದಲ್ಲಿ ಪೊಲೀಸರಾಗುವ ಅವರ ಕನಸನ್ನು ಕೆಲವೆ ಗಂಟೆಗಳ […]

ಮಂಕಿಪಾಕ್ಸ್ ಪ್ರಕರಣದಲ್ಲಿ ಏರಿಕೆ: ಜಾಗತಿಕ ತುರ್ತುಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ; ಭಾರತದಲ್ಲಿ ಒಟ್ಟು ನಾಲ್ಕು ಪ್ರಕರಣ ದೃಢ

ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ವೈರಸ್ ಕುರಿತು ಡಬ್ಲ್ಯೂ.ಎಚ್.ಒ ನ ತುರ್ತು ಸಮಿತಿಯ ಎರಡನೇ ಸಭೆಯ ಕೊನೆಯಲ್ಲಿ ಈ ಘೋಷಣೆ ಬಂದಿದೆ. ವರ್ಗೀಕರಣವು ವಿಶ್ವ ಆರೋಗ್ಯ ಸಂಸ್ಥೆಯು ನೀಡಬಹುದಾದ ಅತ್ಯುನ್ನತ ಎಚ್ಚರಿಕೆಯಾಗಿದೆ. ವಿಶ್ವಾದ್ಯಂತ ಮಂಕಿಪಾಕ್ಸ್ ಪ್ರಕರಣಗಳಲ್ಲಿ ಏರಿಕೆಯನ್ನು ಅನುಸರಿಸಿ ಈ ಎಚ್ಚರಿಕೆಯನ್ನು ನೀಡಲಾಗಿದೆ. 75 ದೇಶಗಳಿಂದ ಈಗ 16,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ, ಏಕಾಏಕಿ ಏರಿಕೆಯ ಪರಿಣಾಮವಾಗಿ ಇದುವರೆಗೆ ಐದು ಸಾವುಗಳು ಸಂಭವಿಸಿವೆ ಎಂದು ಸಂಸ್ಥೆಯ […]

ಹಗಲು ರಾತ್ರಿ ಹಾರಾಡಬಹುದು ತ್ರಿವರ್ಣ ಧ್ವಜ: ಭಾರತದ ರಾಷ್ಟ್ರ ಧ್ವಜ ಸಂಹಿತೆಗೆ ತಿದ್ದುಪಡಿ ತಂದ ಸರ್ಕಾರ

ನವದೆಹಲಿ: ತ್ರಿವರ್ಣ ಧ್ವಜವನ್ನು ತೆರೆದ ಸ್ಥಳಗಳು ಮತ್ತು ವೈಯಕ್ತಿಕ ಮನೆಗಳು ಅಥವಾ ಕಟ್ಟಡಗಳ ಮೇಲೆ ಹಗಲು ರಾತ್ರಿ ಪ್ರದರ್ಶಿಸಲು ಅನುಮತಿಸಲು ಸರ್ಕಾರವು ಭಾರತದ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿದೆ. ಮುಂಚಿನ ನಿಬಂಧನೆಗಳ ಪ್ರಕಾರ, ರಾಷ್ಟ್ರ ಧ್ವಜವನ್ನು ತೆರೆದ ಸ್ಥಳದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಪ್ರದರ್ಶಿಸಲು ಅವಕಾಶವಿತ್ತು. ಸೂರ್ಯಾಸ್ತದ ಬಳಿಕ ರಾಷ್ಟ್ರಧ್ವಜವನ್ನು ತೆರೆದ ಸ್ಥಳಗಳಲ್ಲಿ ಹಾರಿಸಲು ಅನುಮತಿ ಇರಲಿಲ್ಲ. ಈಗ, ಸಾರ್ವಜನಿಕರು, ಖಾಸಗಿ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಗಳು ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಅನುಗುಣವಾಗಿ ಎಲ್ಲಾ ದಿನಗಳಲ್ಲಿ […]

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ರಜತ ಪದಕ ಗೆದ್ದ ಮೊದಲ ಭಾರತೀಯ ನೀರಜ್ ಚೋಪ್ರಾ

ಅಮೇರಿಕಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ಇಂದು ಬೆಳಗ್ಗೆ ಒರೆಗಾನ್‌ನ ಯುಜೀನ್‌ನಲ್ಲಿ ನಡೆದ ಸ್ಪರ್ಧೆಯ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್‌ ದೂರ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದಿದ್ದಾರೆ. ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಜಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ನಂತರ […]

ಶ್ರೀಕೃಷ್ಣ ಮಠ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ,ಮಧುರ ಧ್ವನಿ ಚಾರಿಟೇಬಲ್ ಟ್ರಸ್ಟ್ ನ ಶ್ರೀಮತಿ ಪೂಜಾ ಮಹೇಶ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ವಯೊಲಿನ್ ನಲ್ಲಿ ಶರ್ಮಿಳಾ ರಾವ್ ಮತ್ತು ತಬಲಾದಲ್ಲಿ ಬಾಲಚಂದ್ರ ಭಾಗವತರು ಸಹಕರಿಸಿದರು.