ದೇಶದ ಮೊದಲನೇ ಬುಡಕಟ್ಟು ಜನಾಂಗದ ಹಾಗೂ ಎರಡನೇ ಮಹಿಳಾ ರಾಷ್ಟ್ರಪತಿ: ದ್ರೌಪದಿ ಮುರ್ಮು
ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಎನ್.ಡಿ.ಎ ಪಕ್ಷದ ಅಭ್ಯರ್ಥಿ ದ್ರೌಪದಿ ಮುರ್ಮು ವಿಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ಅವರನ್ನು ಸೋಲಿಸಿ ದೇಶದ 15ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಪದವಿಯನ್ನು ಅಲಂಕರಿಸಿದ್ದಾರೆ. ಮೂರನೇ ಸುತ್ತಿನವರೆಗೆ 8,38,839 ಮೌಲ್ಯದ 3219 ಮಾನ್ಯ ಮತಗಳಲ್ಲಿ ದ್ರೌಪದಿ ಮುರ್ಮು 5,77,777 ಮೌಲ್ಯದ 2161 ಮತಗಳನ್ನು ಪಡೆದಿದ್ದಾರೆ. ಯಶವಂತ್ ಸಿನ್ಹಾ 2,61,062 ಮೌಲ್ಯದ 1058 […]
ಅಲೆವೂರು: ಸುಬೋಧಿನಿ ಶಾಲಾ ಮಕ್ಕಳಿಗೆ ಪುಸ್ತಕ, ಚಿತ್ರಕಲಾ ಪರಿಕರಗಳ ವಿತರಣೆ
ಅಲೆವೂರು: ಸುಬೋಧಿನಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಚಿತ್ರಕಲಾ ಪರಿಕರಗಳ ವಿತರಣೆ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು. ಜೆನೆಸಿಸ್ ಇಂಡಸ್ಟ್ರೀಸ್, ನವನೀತ್ ಪ್ರಕಾಶಕರು, ಹಾಗೂ ಡೋಮ್ಸ್ ಕಂಪೆನಿ ಪ್ರಾಯೋಜಕತ್ವದಲ್ಲಿ ಮಕ್ಕಳಿಗೆ ಪರಿಕರ ವಿತರಿಸಲಾಯಿತು. ಜೆನೆಸಿಸ್ ಸಂಸ್ಥೆಯ ಸಿಎಫ್ಒ ಯು.ಎಲ್ ಆಚಾರ್ಯ, ಎಚ್.ಆರ್ ಮುಖ್ಯಸ್ಥೆ ಶ್ವೇತಾ ಕಾಮತ್ ಹಾಗೂ ನಿರ್ದೇಶಕಿ ನಿರಾಲಿ ಓರಾರ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಎನ್.ಜಿ.ಒನ ಟ್ರಸ್ಟಿ ಅಮಿತ ಪೈ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ವಾರಿಜ ಸುಂದರ ಶೆಟ್ಟಿ, ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ಯಾಮರಾಯ ಆಚಾರ್ಯ, […]
ಅಖಿಲ ಭಾರತ ಮಟ್ಟದ ಕೆವಿಪಿವೈ ಪರೀಕ್ಷೆಯಲ್ಲಿ ಎಕ್ಸ್ಪರ್ಟ್ ಕಾಲೇಜಿಗೆ 42 ರ್ಯಾಂಕ್
ಮಂಗಳೂರು: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸಿದ ಕಿಶೋರ್ ವೈಜ್ಞಾನಿಕ್ ಪೋತ್ಸಾಹನ್ ಯೋಜನೆಯ ಪರೀಕ್ಷೆಯ ಪರಿಷ್ಕೃತ ಪಲಿತಾಂಶವನ್ನು ಘೋಷಿಸಿದ್ದು, ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ 42 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ರ್ಯಾಂಕ್ ಪಡೆದುಕೊಂಡಿದ್ದಾರೆ. ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಕೆ.ವಿ.ಪಿ.ವೈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಅದಿತ್ಯ ಕಾಮತ್ ಅಮ್ಮೆಂಬಳ ಅಖಿಲ ಭಾರತ ಮಟ್ಟದಲ್ಲಿ 127ನೇ ರ್ಯಾಂಕ್ ಹಾಗೂ ಶ್ರೇಯಸ್ ಕೆ. ನಿಶಾನಿ ಅಖಿಲ ಭಾರತ ಮಟ್ಟದಲ್ಲಿ 149ನೇ ರ್ಯಾಂಕ್ […]
ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ
ನವದೆಹಲಿ: ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂದು ದೆಹಲಿಯ ಸಂಸತ್ ಭವನದಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೆಗ್ಗಡೆಯವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ತನ್ನ ಗ್ರಾಹಕರಿಗಾಗಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಪ್ರಾರಂಭಿಸಿದ ಎಸ್.ಬಿ.ಐ
ನವದೆಹಲಿ: ಭಾರತದ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಅನ್ನು ಸುಲಭಗೊಳಿಸಲು ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದೆ. ಈಗ, ಎಸ್ಬಿಐ ಗ್ರಾಹಕರು ವಾಟ್ಸಾಪ್ ಬಳಸಿಕೊಂಡು ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಗ್ರಾಹಕರು ಇನ್ನು ಮುಂದೆ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕಾಗಿಲ್ಲ ಅಥವಾ ಎಟಿಎಂಗೆ ಹೋಗಬೇಕಾಗಿಲ್ಲ. ಎಸ್.ಬಿ.ಐ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪಡೆಯಬಹುದು ಮತ್ತು ವಾಟ್ಸಾಪ್ ನಲ್ಲಿ ಮಿನಿ ಸ್ಟೇಟ್ಮೆಂಟ್ ಅನ್ನು ವೀಕ್ಷಿಸಬಹುದು. ಗ್ರಾಹಕರು 919022690226 ಸಂಖ್ಯೆಗೆ ‘ಹಾಯ್’ ಎಂದು ಸಂದೇಶ ಕಳುಹಿಸಿ […]