ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ತ್ರಿಷಾ ಕಾಲೇಜಿನಲ್ಲಿ ಕಾರ್ಯಾಗಾರ

ಉಡುಪಿ: ಉಡುಪಿ ಜಿಲ್ಲಾ ಉಪನ್ಯಾಸಕರ ವೇದಿಕೆ ಮತ್ತು ಕ್ರಿಯೇಟಿವ್ ಪ.ಪೂ.ಕಾಲೇಜು ಕಾರ್ಕಳ ಹಾಗೂ ತ್ರಿಷಾ ಪ.ಪೂ.ಕಾಲೇಜು ಉಡುಪಿ ಇವರ ಸಹಭಾಗಿತ್ವದಲ್ಲಿ 2022 ನೇ ಸಾಲಿನ ಭೌತಶಾಸ್ತ್ರ ಕಾರ್ಯಾಗಾರ ಉಡುಪಿ ಸಂತೆಕಟ್ಟೆ ತ್ರಿಷಾ ಪ.ಪೂ ಕಾಲೇಜಿನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸರಕಾರಿ ಪ.ಪೂ.ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಆದಿತ್ಯ ರಾವ್, ಭೌತಶಾಸ್ತ್ರದಲ್ಲಿ ಫೋರ್ಸ್, ಟಾರ್ಕ್ ಹಾಗೂ ಆಂಗ್ಯುಲರ್ ಮುಮೆಂಟಮ್ ನ ಆಂತರಿಕ ಸಂಬಂಧದ ಬಗ್ಗೆ ವಿವಿಧ ಮಾಡೆಲ್ ಗಳ ಪ್ರಾತ್ಯಕ್ಷಿಕೆ ನೀಡಿ ಅದಕ್ಕೆ ಸಂಬಂಧಿಸಿದ ಉದಾಹರಣೆ ನೀಡಿ ಸವಿವರ […]

ಬೆಳ್ತಂಗಡಿ: ಕೆಂಬರ್ಜೆ ನಿವಾಸಿ ಡಾಕಮ್ಮ ನಿಧನ

ಬೆಳ್ತಂಗಡಿ: ಇಲ್ಲಿನ ಕೆಂಬರ್ಜೆ ನಿವಾಸಿ ಡಾಕಮ್ಮ(82ವ) ರವರು ಅಸೌಖ್ಯದಿಂದ ಜು.20ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಲಲಿತಾ, ರಮೇಶ್, ಕೃಷ್ಣಪ್ಪ, ಸೂರಪ್ಪ, ಗುಲಾಬಿ, ಗೀತಾ, ಭವಾನಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.  

ಭಾರತ ನಮ್ಮ ಆಪ್ತ ಮಿತ್ರ! ಹೀಗೆಂದರು 69% ಅಫ್ಘನ್ ಜನರು!! ಸಮೀಕ್ಷೆಯಲ್ಲಿ ಬಯಲಾಯ್ತು ಅಫ್ಘನ್ನರ ಭಾರತ ಪ್ರೇಮ

ಕಾಬುಲ್: ಇತ್ತೀಚಿನ ಸಮೀಕ್ಷೆಯ ಪ್ರಕಾರ ಅಫ್ಘಾನಿಸ್ತಾನದ ಶೇಕಡ 69 ರಷ್ಟು ಜನರು ಭಾರತವನ್ನು ಅಫ್ಘಾನಿಸ್ತಾನದ ‘ಬೆಸ್ಟ್ ಫ್ರೆಂಡ್’ ದೇಶವಾಗಿ ಆಯ್ಕೆ ಮಾಡಿದ್ದಾರೆ. ಬ್ರಸೆಲ್ಸ್ ಮೂಲದ ಸುದ್ದಿ ವೆಬ್‌ಸೈಟ್ ಇಯು ರಿಪೋರ್ಟರ್, ಅಫ್ಘಾನಿಸ್ತಾನದ ಜನರ ಒಳನೋಟವನ್ನು ಪಡೆಯಲು, ಅವರ ಹಿಂದಿನ, ಪ್ರಸ್ತುತ ಸನ್ನಿವೇಶ ಮತ್ತು ಅವರ ಭವಿಷ್ಯದ ಆಕಾಂಕ್ಷೆಗಳ ಸಾಮಾನ್ಯ ಜನರ ಮೌಲ್ಯಮಾಪನದ ತಿಳುವಳಿಕೆಯನ್ನು ಸಂಗ್ರಹಿಸುವ ಸಮೀಕ್ಷೆಯನ್ನು ನಡೆಸಲಾಯಿತು ಎಂದು ಹೇಳಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 67 ಕ್ಕಿಂತ ಹೆಚ್ಚು ಅಫ್ಘಾನ್ ಜನರು ಸಂಯುಕ್ತ ಅಮೇರಿಕಾದ ತಪ್ಪಾದ ಸಮಯದಲ್ಲಿ […]

ಸಿ.ಎಸ್‌ ಫೌಂಡೇಶನ್ ಅರ್ಹತಾ ಪರೀಕ್ಷೆ: ಕ್ರಿಯೇಟಿವ್‌ ವಿದ್ಯಾರ್ಥಿನಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣ

ಕಾರ್ಕಳ: ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಕು. ಸುಮಾ ಇವರು ತಮ್ಮ ಪ್ರಥಮ ಪ್ರಯತ್ನದಲ್ಲಿ ʼಇನ್ಸ್‌ಸ್ಟಿಟ್ಯೂಟ್‌ ಆಫ್‌ ಕಂಪನಿ ಸೆಕ್ರೆಟರೀಸ್‌ʼ ನಡೆಸುವ ರಾಷ್ಟ್ರ ಮಟ್ಟದ ಸಿ.ಎಸ್‌ ಫೌಂಡೇಶನ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಕ್ರಿಯೇಟಿವ್‌ ಕಾಲೇಜಿನ ಮೊದಲ ವರ್ಷದ ಸಿ.ಎಸ್‌ ಫಲಿತಾಂಶದಲ್ಲಿಯೇ ಕು. ಸುಮಾರವರು ಉತ್ತಮ ಸಾಧನೆ ಮಾಡಿದ್ದು, ಕ್ರಿಯೇಟಿವ್‌ ಪ.ಪೂ ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿರುತ್ತಾರೆ. ಇವರ ಸಾಧನೆಗೆ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆಯು ತನ್ನ ಪ್ರಾರಂಭದ ಹಂತದಿಂದಲೇ […]

ಬ್ಯಾಂಕ್ ಆಫ್ ಬರೋಡಾ 115 ನೇ ಸ್ಥಾಪನಾ ದಿನಾಚರಣೆ

ಉಡುಪಿ: ಬ್ಯಾಂಕ್ ಅಪ್ ಬರೋಡ ಅತ್ರಾಡಿ ಶಾಖೆಯಲ್ಲಿ ಬ್ಯಾಂಕಿನ 115 ನೇ ಸ್ಥಾಪನಾ ದಿನಾಚರಣೆಯನ್ನು ಬ್ಯಾಂಕಿನ ಹಿರಿಯ ಗ್ರಾಹಕ ಸತ್ಯಾನಂದ ನಾಯಕ್ ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಬ್ಯಾಂಕಿನ ಸ್ಥಾಪಕರಾದ ಮಹಾರಾಜ್ ಸಯಾಜಿ ರಾವ್ ಗಾಯಕ್ವಡ್ ರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ನಂತರ ಮಾತನಾಡುತ್ತಾ, 1973 ರಲ್ಲಿ ಅತ್ರಾಡಿಯಲ್ಲಿ ವಿಜಯ ಬ್ಯಾಂಕ್ ಶಾಖೆ ಉದ್ಘಾಟನೆ ಅದ ಸಂದರ್ಭದ ದಿನಗಳು, 1969 ರಲ್ಲಿ ಬ್ಯಾಂಕ್ ರಾಷ್ಟೀಕರಣ, 2020 ರಲ್ಲಿ ಬ್ಯಾಂಕ್ ಆಫ್ ಬರೋಡದೊಂದಿಗೆ ದೇನಾ […]