ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ: ಕಾರಾಗೃಹ ಸಿಬ್ಬಂದಿಯ ನೌಕರಿಗೆ ಕುತ್ತು
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ದೊರೆಯುತ್ತಿರುವ ಬಗ್ಗೆ ವರದಿ ಬಂದ ಮೇಲೆ ರಾಜ್ಯಾದ್ಯಂತ ಈ ಬಗ್ಗೆ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತ ಸರಕಾರ ಇನ್ನು ಮುಂದೆ ಕೈದಿಗಳಿಗೆ ಡ್ರಗ್ಸ್, ಮದ್ಯ, ಮೊಬೈಲ್ ಮುಂತಾದ ವಸ್ತುಗಳನ್ನು ಪೂರೈಸುವ ಕಾರಾಗೃಹ ಸಿಬ್ಬಂದಿಗಳನ್ನು ಸೇವೆಯಿಂದಲೇ ವಜಾ ಮಾಡಲು ಮುಂದಾಗಿದೆ. ಕಾರಾಗೃಹದ ನೂತನ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಇನ್ನು ಮುಂದೆ ಜೈಲಿನ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡದೆ, ನೇರವಾಗಿ ಸೇವೆಯಿಂದಲೇ ವಜಾಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಕೆಲ […]
ಮಂಗಳೂರಿನಲ್ಲಿ ವಿವಿಧ ಖಾಲಿ ಹುದ್ದೆಗಳು
1. ಕಂಪ್ಯೂಟರ್ ಶಿಕ್ಷಕಿ ವಿದ್ಯಾರ್ಹತೆ: ಬಿಸಿಎ/ ಎಂಸಿಎ ಅಥವಾ ಕಂಪ್ಯೂಟರ್ ಡಿಪ್ಲೊಮಾ ಸಂಬಳ: 15000 2. ಮೊಬಿಲೈಸರ್- ಪುರುಷ / ಮಹಿಳೆ ವಿದ್ಯಾರ್ಹತೆ: ಯಾವುದೇ ಪದವೀಧರ/ರೆ ಫೀಲ್ಡ್ ವರ್ಕ್ ಅನುಭವ ವೇತನ: 12 ರಿಂದ 15 ಸಾವಿರ 3. ಸೆಂಟರ್ ಮ್ಯಾನೇಜರ್- ಪುರುಷ ವಿದ್ಯಾರ್ಹತೆ: ಎಂಎಸ್‌ಡಬ್ಲ್ಯೂ ಅಥವಾ ಯಾವುದೇ ಸ್ನಾತಕೋತ್ತರ ಪದವೀಧರ ಜೊತೆಗೆ ಫೀಲ್ಡ್ ವರ್ಕ್ ಅನುಭವ ವೇತನ: 25000. ಸಂಪರ್ಕ ಸಂಖ್ಯೆ: 9448503033 ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಿ: [email protected] *ಇದು ಮಾಹಿತಿ ಉದ್ದೇಶಕ್ಕಾಗಿ […]
ಸಂಚಲನ-ಉನ್ನತಿ ಕೆರಿಯರ್ ಅಕಾಡೆಮಿ-ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಲಿ: ಬಿಎಫ್ಎಸ್ಐ ಕ್ಷೇತ್ರದಲ್ಲಿ ಉಚಿತ ತರಬೇತಿ ಹಾಗೂ ಉದ್ಯೋಗಾವಕಾಶ
ಉಡುಪಿ: ಕಳೆದ 7 ವರ್ಷಗಳಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಾಗೂ ಪ್ರಕಲ್ಪಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಘಟನೆ ಸಂಚಲನ ಸಂಸ್ಥೆಯು ಇದೀಗ ದೇಶದ ಅಗ್ರಮಾನ್ಯ ಲಾಜಿಸ್ಟಿಕ್ಸ್ ಸಂಸ್ಥೆಯಾದ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಪ್ರೈ ಲಿ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಉಡುಪಿ ಜಿಲ್ಲೆಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಸಂಚಲನ ಸಂಸ್ಥೆಯು ತನ್ನ ತರಬೇತು ಪಾಲುದಾರ ಸಂಸ್ಥೆ ಹಾಗೂ ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ಮೂಲಕ ಜಿಲ್ಲೆಯ […]
ದ್ವಿತೀಯ ಪಿ.ಯುಸಿ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಉಡುಪಿ: ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಲಾದ ಪ್ರತಿಯನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಲು ಜುಲೈ 15 ರ ವರೆಗೆ ಹಾಗೂ ಮರುಮೌಲ್ಯಮಾಪನ ಮತ್ತು ಮರು ಎಣಿಕೆಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 18 ರ ವರೆಗೆ ವಿಸ್ತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗುಂಬೆಯಲ್ಲಿ ಗುಡ್ಡ ಕುಸಿತ: ವಾಹನ ಸಂಚಾರ ತಾತ್ಕಾಲಿಕ ಸ್ಥಗಿತ, ಬದಲಿ ಮಾರ್ಗ ಉಪಯೋಗಿಸುವುದು ಸೂಕ್ತ
ಕಾರ್ಕಳ: ಜಿಲ್ಲೆಯಲ್ಲಿ ಸುರಿಯುತ್ತಿರ ಧಾರಾಕಾರ ಮಳೆಯಿಂದಾಗಿ ಹೆಬ್ರಿ ತಾಲೂಕಿನ ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಸುಮಾರು 30 ಮೀಟರ್ ಭೂಕುಸಿತ ಉಂಟಾಗಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ವಾಹನ ಸಂಚಾರ ಪುನಃ ಸ್ಥಾಪಿಸಲು ಸುಮಾರು 3 ಗಂಟೆಗಳ ಸಮಯ ಹಿಡಿಯಬಹುದೆಂದು ಅಂದಾಜಿಸಲಾಗಿದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುವುದರಿಂದ ಪ್ರಯಾಣಿಕರು ಬದಲಿ ಮಾರ್ಗ ಉಪಯೋಗಿಸುವುದು ಸೂಕ್ತ ಎನ್ನಲಾಗಿದೆ.