ಮಲ್ಪೆ: ಜಿ.ಎಸ್.ಬಿ ಸಮಾಜದ ರಾಮಮಂದಿರದಲ್ಲಿ ಲಕ್ಷ ತುಳಸಿ ಅರ್ಚನೆ

ಮಲ್ಪೆ ಜಿ.ಎಸ್.ಬಿ ಸಮಾಜದ ರಾಮಮಂದಿರದಲ್ಲಿ ಆಷಾಢ ಏಕಾದಶೀ ಅಂಗವಾಗಿ ಆದಿತ್ಯವಾರ ಜಿ.ಎಸ್. ಬಿ ಯುವಕ ಮಂಡಳಿ ಆಶ್ರಯದಲ್ಲಿಅರ್ಚಕ ವಿಘ್ನೇಶ ಭಟ್, ಲಕ್ಷ್ಮಣ ಭಟ್ ಕಲ್ಯಾಣಪುರ ಇವರ ಮಾರ್ಗದರ್ಶನದಲ್ಲಿ ದೇವರಿಗೆ ಲಕ್ಷ ತುಳಸಿ ಅರ್ಚನೆ ಜರಗಿತು , ಶ್ರೀ ದೇವರ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ನೂರಾರು ಸಮಾಜ ಬಂಧುಗಳು ಉಪಸ್ಥಿತರಿದ್ದರು.

ಪೈಪ್ ಲೈನ್ ಕಾಮಗಾರಿಗಾಗಿ ಮರಗಳ ತೆರವು: ಜುಲೈ 18 ರಂದು ಸಾರ್ವಜನಿಕ ಅಹವಾಲು ಸಭೆ

ಉಡುಪಿ: ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ಕುಡಿಯುವ ನೀರು ಸರಬರಾಜು ಯೋಜನೆಯಡಿ ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಜೆ.ಎಲ್.ಎಸ್.ಆರ್ ವರೆಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ, ಕಾಮಗಾರಿಗೆ ಅಡಚಣೆಯಾಗುವ 58 ಗಿಡಗಳನ್ನು ತೆರವುಗೊಳಿಸುವ ಕುರಿತು ಜುಲೈ 18 ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ಅಥವಾ ಸಭೆ ನಡೆಯುವ ದಿನಾಂಕದ ಒಳಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಸಂರಕ್ಷಣಾಧಿಕಾರಿಯವರ […]

ತಮಿಳುನಾಡಿನ ರೈತನ ಕೈಚಳಕ: ಭತ್ತದ ಗದ್ದೆಯಲ್ಲಿ ಮೂಡಿಬಂತು ತಿರುವಳ್ಳುವರ್ ಚಿತ್ರ!

ತಂಜಾವೂರು: ಇಲ್ಲಿನ ಮಲೈಯಪ್ಪನಲ್ಲೂರಿನ ರೈತ ಇಳಂಗೋವನ್ ಎನ್ನುವವರು ಭತ್ತದ ಗದ್ದೆಯಲ್ಲಿ ತನ್ನ ಕೈಚಳಕೆ ತೋರಿಸಿ, ತಮಿಳು ಕವಿ ತಿರುವಳ್ಳುವರ್ ಅವರ ಚಿತ್ರ ಮೂಡಿ ಬರುವಂತೆ ಭತ್ತದ ಗದ್ದೆಯನ್ನು ನಾಟಿ ಮಾಡಿದ್ದಾರೆ. “ಹಲವು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ತಿರುವಳ್ಳುವರ್ ಸಾವಯವ ಕೃಷಿಯ ಬಗ್ಗೆ ಬರೆದಿದ್ದಾರೆ, ಅದಕ್ಕಾಗಿಯೇ ನಾನು ಅದನ್ನು 2 ವಿಧದ ಭತ್ತದ ತಳಿಗಳೊಂದಿಗೆ ತಿರುವಳ್ಳುವರ್ ಅವರ ಚಿತ್ರ ಮಾಡಿದ್ದೇನೆ ಎಂದು ಇಳಂಗೋವನ್ ಸುದ್ದಿ ಸಂಸ್ಥೆ ಎ.ಎನ್.ಐ ಗೆ ಹೇಳಿದ್ದಾರೆ. ರೈತರಾದವರು ಕಲಾಕಾರರೂ ಆಗಿದ್ದರೆ ಗದ್ದೆಯೆ ಕ್ಯಾನ್ವಾಸ್, […]

ಅಮರನಾಥ ಯಾತ್ರೆ: ಜಿಲ್ಲಾ ಯಾತ್ರಾರ್ಥಿಗಳ ಸಂಬಂಧಿಕರು ಜಿಲ್ಲಾಡಳಿತದ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಮನವಿ

ಉಡುಪಿ: ಜಿಲ್ಲೆಯಿಂದ ಅಮರನಾಥ ಕ್ಷೇತ್ರ ಯಾತ್ರೆ ಕೈಗೊಂಡು, ಮೇಘಸ್ಪೋಟದ ಪ್ರವಾಹಕ್ಕೆ ಸಿಲುಕಿರುವ, ಸುರಕ್ಷಿತವಾಗಿರುವ ಯಾತ್ರಾರ್ಥಿಗಳು ಯಾರಾದರೂ ಇದ್ದಲ್ಲಿ ಇವರ ಸಂಬಂಧಿಕರು ಕೂಡಲೇ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 1077 (0820-2574802) ಕರೆ ಮಾಡಿ ಸಂಬಂಧಪಟ್ಟ ಯಾತ್ರಾರ್ಥಿಗಳ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಕೋರಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್ ಗಳ ಪೈಪೋಟಿಯ ನಡುವೆಯೂ ಸಹಕಾರಿ ರಂಗದ ಬೆಳವಣಿಗೆ ಅಗಾಧ: ಲಾಲಾಜಿ ಮೆಂಡನ್

  ಪಡುಬಿದ್ರಿ: ಜನತೆಯ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಅಗಾಧವಾಗಿ ಬೆಳೆದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಪೈಪೋಟಿಯ ನಡುವೆಯೂ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತ ರೈತರ ಆಶಯಗಳನ್ನು ಪೂರೈಸುತ್ತಿರುವ ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸೊಸೈಟಿಯು ಇಂದು ಬೃಹತ್ತಾಗಿ ಬೆಳೆದಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು. ಅವರು ಶನಿವಾರ ಪಡುಬಿದ್ರಿ ವ್ಯಾವಸಾಯಿಕ ಸೊಸೈಟಿಯ ಪಡುಬಿದ್ರಿ ಸಿಟಿ ಶಾಖೆಯ ನವೀಕೃತ ಹವಾನಿಯಂತ್ರಿತ ಕಟ್ಟಡ, ಕೃಷಿ ಉಪಕರಣಗಳ ಮಳಿಗೆಯ ಉದ್ಘಾಟನೆ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ […]