ಪುಷ್ಪಾ ದ ರೂಲ್ ಗೆ ಜೈ ಎಂದ ವಿಜಯ್ ಸೇತುಪತಿ? ಪುಷ್ಪಾ ಭಾಗ-2ರಲ್ಲಿ ಖಳನಾಯಕನಾಗಿ ಮಿಂಚಲಿರುವ ವೇಧ!
ಪುಷ್ಪಾ ಭಾಗ-2, ಪುಷ್ಪಾ ದ ರೂಲ್ ನಲ್ಲಿ ವಿಕ್ರಮ್ ವೇಧ ಖ್ಯಾತಿಯ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಸೇತುಪತಿ ಮುಖ್ಯ ಖಳನಾಯಕನಾಗಿ ನಟಿಸಲಿದ್ದಾರೆ ಹಾಗೂ ಫಹಾದ್ ಫಾಸಿಲ್ ಪೋಲೀಸ್ ಪಾತ್ರದಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಸರಿಯಾಗಿದ್ದರೆ ವಿಜಯ್ ಪುಷ್ಪಾ-1 ರಲ್ಲಿ ಅರಣ್ಯಾಧಿಕಾರಿಯ ಪ್ರಾತ್ರವನ್ನು ಮಾಡಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅವರು ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಪುಷ್ಪ ಭಾಗ ಎರಡಲ್ಲಿ ವಿಜಯ್ ನಟಿಸುವ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲವಾದರೂ, ಈ ಸುದ್ದಿಯು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ.
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ನಿವಾಸ ಸೇರಿದಂತೆ ಐದು ವಿವಿಧ ಸ್ಥಳಗಳ ಮೇಲೆ ಎಸಿಬಿ ದಾಳಿ
ಬೆಂಗಳೂರು: ಜಾರಿ ನಿರ್ದೇಶನಾಲಯದ ವರದಿಯ ಮೇರೆಗೆ ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಸೇರಿದಂತೆ ಐದು ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ಅವರ ನಿವಾಸ, ಸಿಲ್ವರ್ ಓಕ್ ಅಪಾರ್ಟ್‌ಮೆಂಟ್‌ನ ಫ್ಲಾಟ್, ಸದಾಶಿವನಗರದ ಅತಿಥಿ ಗೃಹ, ಬನಶಂಕರಿಯಲ್ಲಿರುವ ಜಿಕೆ ಅಸೋಸಿಯೇಟ್ಸ್ ಕಚೇರಿ ಮತ್ತು ನಗರದ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಂಡಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, […]
ಎಲೋರ್ಡಾ ಕಪ್: ಚೊಚ್ಚಲ ಪಂದ್ಯದಲ್ಲೇ ಚಿನ್ನ ಗೆದ್ದ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಅಲ್ಫಿಯಾ ಪಠಾಣ್ ಮತ್ತು ಗಿತಿಕಾ
ನವದೆಹಲಿ: ಕಜಕಿಸ್ತಾನದ ನೂರ್-ಸುಲ್ತಾನ್‌ನಲ್ಲಿ ನಡೆಯುತ್ತಿರುವ ಎಲೋರ್ಡಾ ಕಪ್‌ನಲ್ಲಿ ಹಾಲಿ ಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಅಲ್ಫಿಯಾ ಪಠಾಣ್ ಮತ್ತು ಗಿತಿಕಾ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಇತರ ಇಬ್ಬರು ಮಹಿಳಾ ಬಾಕ್ಸರ್‌ಗಳಾದ ಕಲೈವಾಣಿ ಶ್ರೀನಿವಾಸನ್ ಮತ್ತು ಜಮುನಾ ಬೋರೊ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ 81-ಕಿಲೋಗ್ರಾಂ ಫೈನಲ್‌ನಲ್ಲಿ, ಅಲ್ಫಿಯಾ 2016 ರ ವಿಶ್ವ ಚಾಂಪಿಯನ್ ಮತ್ತು ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿ ಲಜ್ಜತ್ ಕುಂಗೆಬಾಯೆವಾ ಅವರನ್ನು 5-0 ಅಂತರದಿಂದ ಸೋಲಿಸಿದ್ದಾರೆ. ಅಖಿಲ ಭಾರತೀಯ ಮಹಿಳೆಯರ 48 ಕೆಜಿ ಫೈನಲ್‌ನಲ್ಲಿ […]
ಟಾಟಾ ಮೋಟಾರ್ಸ್: ಜುಲೈ ತಿಂಗಳಲ್ಲಿ ಕಾರುಗಳ ಆಯ್ದ ಮಾಡೆಲ್ ಗಳ ಮೇಲೆ 18 ರಿಂದ 70 ಸಾವಿರದವರೆಗೆ ರಿಯಾಯಿತಿ
ನವದೆಹಲಿ: ಟಾಟಾ ಮೋಟಾರ್ಸ್, ಭಾರತದ ಅತಿ ದೊಡ್ಡ ಸ್ವದೇಶಿ ವಾಹನ ತಯಾರಕ ಮತ್ತು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯು ಜುಲೈ 2022 ರ ತಿಂಗಳಿಗೆ ಆಯ್ದ ಮಾಡೆಲ್ ಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ರಿಯಾಯತಿ ಘೋಷಿಸಲಾದ ಮಾಡೆಲ್ ಗಳು: ಟಾಟಾ ಟಿಯಾಗೊ: ಟಾಟಾ ಮೋಟಾರ್ಸ್‌ನಿಂದ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್, ಟಾಟಾ ಟಿಯಾಗೊವನ್ನು ರೂ 28,000 ವರೆಗೆ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಹ್ಯಾಚ್‌ಬ್ಯಾಕ್ XE, XM, XT ಮತ್ತು XZ ಮತ್ತು CNG ವೇರಿಯಂಟ್ […]
ಹೋಟೇಲು, ರೆಸ್ಟೋರೆಂಟ್ ಗಳು ಬಲವಂತ ಸೇವಾ ಶುಲ್ಕ ಸಂಗ್ರಹಿಸಿದಲ್ಲಿ ದೂರು ದಾಖಲಿಸಿ: ಗ್ರಾಹಕ ಸಂರಕ್ಷಣಾ ಪ್ರಾಧಿಕಾರ
ನವದೆಹಲಿ: ಯಾವುದೇ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಆಹಾರ ಬಿಲ್‌ಗೆ ಪೂರ್ವನಿಯೋಜಿತವಾಗಿ ಸೇವಾ ಶುಲ್ಕವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಈ ನಿಟ್ಟಿನಲ್ಲಿ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ಬೇರೆ ಯಾವುದೇ ಹೆಸರಿನಿಂದ ಸೇವಾ ಶುಲ್ಕದ ಸಂಗ್ರಹವನ್ನು ಮಾಡತಕ್ಕದ್ದಲ್ಲ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಸೇವಾ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಮತ್ತು ಸೇವಾ ಶುಲ್ಕವು […]