ಜುಲೈ 5ರಂದು ಬ್ರಹ್ಮಾವರದಲ್ಲಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 5ನೇ ಶಾಖೆ ಉದ್ಘಾಟನೆ

ಬ್ರಹ್ಮಾವರ: ಕ್ಷೌರಿಕರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಸ್ಥಾಪಿಸಿರುವ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 5ನೇ ಶಾಖೆಯು ಜು. 5 ರಂದು ಬ್ರಹ್ಮಾವರ ಸೈಂಟ್ ಅಂತೋನಿ ಪ್ರೆಸ್‌ ಕಟ್ಟಡದ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಕುರಿತು ಸಹಕಾರಿ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಾಹಿತಿ ನೀಡಿದರು. ಸಹಕಾರಿಯು ಉಡುಪಿ, ಕಾರ್ಕಳ, ಕುಂದಾಪುರ ಹಾಗೂ ಕಾಪುವಿನಲ್ಲಿ ಶಾಖೆಯನ್ನು ಹೊಂದಿದೆ‌. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್. ಕೃಷ್ಣ ರೆಡ್ಡಿ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಬಾರ್ಕೂರು ಕಚ್ಚೂರು ಶ್ರೀನಾಗೇಶ್ವರ […]

ಕರಾವಳಿ ಕರ್ನಾಟಕದಲ್ಲಿ ಅತ್ಯಾಧಿಕ ಮಳೆ ಮುನ್ಸೂಚನೆ: ರೈತರು ಮತ್ತು ಮೀನುಗಾರರಿಗೆ ಮುನ್ನೆಚ್ಚರಿಕೆಗಳು

ಉಡುಪಿ/ಮಂಗಳೂರು: ಮುಂದಿನ 48 ರಿಂದ 72 ಗಂಟೆಗಳ ಅವಧಿಯಲ್ಲಿ ಕರ್ನಾಟಕದ, ವಿಶೇಷವಾಗಿ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಅಧಿಕದಿಂದ ಅತ್ಯಾಧಿಕ ಮಳೆಯಾಗುವ ಸಾಧ್ಯತೆ ಇದ್ದು, ರೈತರಿಗೆ ಮತ್ತು ಮೀನುಗಾರರಿಗೆ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ.  ರೈತರು ಮುಂದಿನ 2-3 ದಿನಗಳವರೆಗೆ ಎಲ್ಲಾ ಕೃಷಿ ಚಟುವಟಿಕೆಗಳನ್ನು ಮುಂದೂಡಬಹುದು (ಬಿತ್ತನೆ, ಸಿಂಪಡಣೆ, ರಸಗೊಬ್ಬರ ಬಳಕೆ ಮತ್ತು ಕೊಯ್ಲು)  ರೈತರು ಭತ್ತದ ನಾಟಿಯನ್ನು ಮುಂದೂಡಬಹುದು  ಮೀನುಗಾರರು ಸಮುದ್ರ ತೀರದಿಂದ ದೂರ ಇರುವಂತೆ ಸೂಚಿಸಲಾಗಿದೆ  ಅಡಿಕೆ ತೋಟಗಳಲ್ಲಿ ರೈತರು ನೀರು ಹರಿಯಲು […]

ಸ್ಟಾರ್ಟ್ ಅಪ್ ಶ್ರೇಯಾಂಕ: ಗುಜರಾತ್, ಮೇಘಾಲಯ ಮತ್ತು ಕರ್ನಾಟಕ ಅತ್ಯುತ್ತಮ ಪ್ರದರ್ಶಕರು

ನವದೆಹಲಿ: ಉದ್ಯಮ ಮತ್ತು ಆಂತರಿಕ ವ್ಯಾಪಾರದ ಪ್ರಚಾರ ಇಲಾಖೆ (ಡಿಪಿಐಐಟಿ)ಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕದ ಪ್ರಕಾರ, ಉದಯೋನ್ಮುಖ ಉದ್ಯಮಿಗಳಿಗಾಗಿ(ಸ್ಟಾರ್ಟ್ ಅಪ್) ಆರಂಭಿಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಗುಜರಾತ್, ಮೇಘಾಲಯ ಮತ್ತು ಕರ್ನಾಟಕವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಾಗಿ ಹೊರಹೊಮ್ಮಿವೆ. ಕೇರಳ, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣವನ್ನು ಉನ್ನತ ಪ್ರದರ್ಶನಕಾರರು ಎಂದು ವರ್ಗೀಕರಿಸಲಾಗಿದೆ. ರಾಜ್ಯಗಳ ಸ್ಟಾರ್ಟಪ್ ಶ್ರೇಯಾಂಕ 2021 ಅನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೋಮವಾರ ಬಿಡುಗಡೆ ಮಾಡಿದರು. ಒಟ್ಟು 24 […]

ಏಕಾಗ್ರತೆ ಮತ್ತು ಮಾನಸಿಕ ಸದೃಢತೆಗೆ ಚೆಸ್ ಹಾಗೂ ಚಿತ್ರಕಲೆ ಸಹಕಾರಿ: ನಿತ್ಯಾನಂದ ಶೆಟ್ಟಿ

ಹೆಬ್ರಿ: ನಮ್ಮ ವ್ಯಕ್ತಿತ್ವ ವಿಕಸನಗೊಳ್ಳಲು ದೈಹಿಕ ವ್ಯಾಯಾಮದ ಜತೆ ಮಾನಸಿಕ ಚಟುವಟಿಕೆ ಕೂಡ ಮುಖ್ಯ. ಓದಿನಲ್ಲಿ ಏಕಾಗ್ರತೆ ಬರಲು ಹಾಗೂ ಮಾನಸಿಕವಾಗಿ ಸದೃಢರಾಗಲು ಚೆಸ್ ಹಾಗೂ ಚಿತ್ರಕಲೆ ಸಹಕಾರಿ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 7 ವರ್ಷಗಳಿಂದ ಉಚಿತ ಚೆಸ್ ತರಗತಿಯನ್ನು ನಡೆಸುತ್ತಿರುವುದರ ಜತೆಗೆ ಈ ಬಾರಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಮೂಡುಬಿದ್ರೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಶಿವಪುರ ಹೇಳಿದರು. ಅವರು ಭಾನುವಾರದಂದು ಚಾಣಕ್ಯ […]

ರೋಟರಿ ಮಣಿಪಾಲ: 22-23ನೇ ವರ್ಷದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಣಿಪಾಲ: ರೋಟರಿ ಮಣಿಪಾಲದ 22-23ನೇ ವರ್ಷದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 09, ಶನಿವಾರದಂದು ಸಂಜೆ 6 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಧ್ಯಕ್ಷೆ ರೇಣು ಜಯರಾಮ್, ಕಾರ್ಯದರ್ಶಿ ಶಶಿಕಲಾ ರಾಜವರ್ಮ ಮತ್ತು ಆರ್.ಸಿ.ಎಮ್ ತಂಡವು ತಿಳಿಸಿದೆ.