ಕಾರ್ಕಳ: ಮೂರು ಮಾರ್ಗದ ಬಳಿ ಬಸ್ ನಿಲುಗಡೆ ಪುನರ್ ಸ್ಥಾಪಿಸುವಂತೆ ಪುರಸಭಾ ಸದಸ್ಯ ಶುಭದರಾವ್ ಒತ್ತಾಯ

ಕಾರ್ಕಳ: ಇಲ್ಲಿನ ವಿದ್ಯಾ ಸಂಸ್ಥೆಗಳಾದ ಕ್ರೈಸ್ಟ್ ‌ಕಿಂಗ್ ಪದವಿ ಪೂರ್ವಕಾಲೇಜು, ಶ್ರೀ ಭುವನೇಂದ್ರ ಹೈಸ್ಕೂಲ್ ಮತ್ತು ಎಸ್.ವಿ. ಟಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬಸ್ ಮೂಲಕ ಆನೆಕೆರೆ – ಮೂರು ಮಾರ್ಗವಾಗಿ ಸಂಚರಿಸುತ್ತಿದ್ದು, ಮೂರು‌ ಮಾರ್ಗದ ಬಳಿ ಇರುವ ಪೆಟ್ರೋಲ್ ಪಂಪ್ ಬಳಿ ಇಳಿದು ಕಾಲೇಜುಗಳಿಗೆ ತೆರಳುತ್ತಿದ್ದರು‌. ಈ ನಿಲುಗಡೆಯಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳಿಗೆ ತೆರಳಲು ಅನುಕೂಲವಾಗುತ್ತಿತ್ತು. ಆದರೆ ಈಗ ಪುರಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಪೆಟ್ರೋಲ್ ಪಂಪ್ ಬಳಿ ಬಸ್ ಗಳನ್ನು ನಿಲ್ಲಿಸಲು ಏಕಾಏಕಿ ನಿರ್ಬಂಧ […]

ಪ್ಲಾಸ್ಟಿಕ್ ಬ್ಯಾನ್: ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಿಯಂತ್ರಣ ಕೊಠಡಿಗಳ ಸ್ಥಾಪನೆ

ನವದೆಹಲಿ: ಕಾನೂನಿನ ಪರಿಣಾಮಕಾರಿ ಜಾರಿಗಾಗಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್‌ನ ಅಕ್ರಮ ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಪರಿಶೀಲಿಸಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುವುದು ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತಿಳಿಸಿದೆ. ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆ ನಿಷೇಧ ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಏಕ ಬಳಕೆಯ ಪ್ಲಾಸ್ಟಿಕ್ ಎಂದರೆ ಒಮ್ಮೆ ಮಾತ್ರ ಬಳಸಿ […]

ಪ್ರತಿಷ್ಠಿತ ಡೈಮಂಡ್ ಲೀಗ್ ಕೂಟದಲ್ಲಿ ಬೆಳ್ಳಿ ಬಾಚಿದ ನೀರಜ್ ಚೋಪ್ರಾ: ಒಂದೇ ತಿಂಗಳಲ್ಲಿ ಎರಡು ಬಾರಿ ದಾಖಲೆ ಮುರಿದ ಚಿನ್ನದ ಛೋರ

ನವದೆಹಲಿ: ನಿನ್ನೆ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಕೂಟದಲ್ಲಿ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದು ತಮ್ಮ ಮೊದಲ ಡೈಮಂಡ್ ಲೀಗ್ ಪದಕವನ್ನು ಪಡೆದರು. ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ 89.94 ಮೀಟರ್‌ಗಳ ಬೃಹತ್ ಎಸೆತದೊಂದಿಗೆ 2 ನೇ ಸ್ಥಾನ ಪಡೆದರು. ಹಾಲಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ 90.31 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು. ಈ ತಿಂಗಳ ಆರಂಭದಲ್ಲಿ […]

ವೈದ್ಯರ ನಿಸ್ವಾರ್ಥ ಸೇವೆಗೊಂದು ದೊಡ್ಡ ಸಲಾಂ: ಲಾವಣ್ಯ ಬರೆದ ಡಾಕ್ಟರ್ ಡೇ ಸ್ಪೆಷಲ್ ಬರಹ

  ಆರೋಗ್ಯವೇ ಭಾಗ್ಯ ಎನ್ನುವ ಮಾತು ಸರ್ವಕಾಲಿಕವಾದದ್ದು. ಆರೋಗ್ಯವನ್ನು ರಕ್ಷಿಸಿ ರೋಗಿಗಳ ಆರೋಗ್ಯಕ್ಕೆ ಮದ್ದು ನೀಡುವ ವೈದ್ಯರನ್ನು ದೇವರ ರೀತಿಯಲ್ಲಿ ಕಾಣುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಾನವರಾದ ನಾವುಗಳು ದೇವರನ್ನು ಪೂಜಿಸುತ್ತೇವೆ ಮತ್ತು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ನಮ್ಮ ಆರೋಗ್ಯವನ್ನು ಉತ್ತಮಗೊಳಿಸಿ ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೇವರ ಶಕ್ತಿ ಪಡೆದು ಕಣ್ಣೆದುರಿಗೆ ನಿಲ್ಲುವ ದೇವರು ಎಂದರೆ ತಪ್ಪಾಗಲಾರದು. ಆದ್ದರಿಂದಲೇ “ವೈದ್ಯೋ ನಾರಾಯಣೋ ಹರಿಃ” ಎಂಬ ಮಾತು ಅಕ್ಷರಶಃ […]

ಜೀವ ಉಳಿಸೋ ವೈದ್ಯರಿಗೂ ಇವೆ ನೂರಾರು ಒತ್ತಡ: ಡಾ. ಶಫೀಕ್. ಎ ಎಂ ಬರೆದ ಡಾಕ್ಟರ್ ಡೇ ಬರಹ

ಭಾರತದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಇದು ವೈದ್ಯರನ್ನು ನೆನಪಿಸಿಕೊಳ್ಳುವ ದಿನವಾಗಿರುವುದಲ್ಲದೆ, ವೈಯಕ್ತಿಕವಾಗಿ ಮತ್ತು ಒಂದು ಸಮಾಜವಾಗಿ ನಮಗೆ ವೈದ್ಯರು ಸಲ್ಲಿಸುವ ಎಲ್ಲಾ ಸೇವೆಗಳಿಗೆ ಕೃತಜ್ಞತೆ ಸಲ್ಲಿಸುವಂತಹ ದಿನ ಇದಾಗಿರುತ್ತದೆ. ಆದರೆ, ಅವರು ಕೂಡ ಮನುಷ್ಯರು ಎಂಬುದನ್ನು ನಾವು ಎಷ್ಟು ಬಾರಿ ಅರ್ಥ ಮಾಡಿಕೊಂಡಿದ್ದೇವೆ? ಮತ್ತು ಇತ್ತೀಚೆಗೆ ದೀರ್ಘಕಾಲದ ಕೆಲಸದ ಗಂಟೆಗಳಿಂದ ಮತ್ತು ಸತತವಾಗಿ ಹೆಚ್ಚುತ್ತಿರುವ ರೋಗಿಗಳ ಒತ್ತಡದಿಂದ ವೈದ್ಯರು ತೀವ್ರ ರೀತಿಯಲ್ಲಿ ಭಾವನಾತ್ಮಕವಾಗಿ ಮತ್ತು ತೀವ್ರ ರೀತಿಯಲ್ಲಿ ದೈಹಿಕವಾಗಿ ಸುಸ್ತಿಗೆ ಒಳಗಾಗಿರುವ ಹಲವಾರು […]