ಪುರಿಯಲ್ಲಿ ಜಗದೊಡೆಯ ಜಗನ್ನಾಥನ ರಥಯಾತ್ರೆ: ಸಂಜೆ 4 ಗಂಟೆಗೆ ರಥೋತ್ಸವ ಆರಂಭ

ಪುರಿ: ಜಗದೊಡೆಯನಾದ ಜಗನ್ನಾಥನ ರಥಯಾತ್ರೆಯ ಪಹಂಡಿ ಆಚರಣೆಗಳು ಒಡಿಶಾದ ಪುರಿಯಲ್ಲಿ ಪ್ರಾರಂಭವಾಗಿದೆ. ಎರಡು ವರ್ಷಗಳ ಕೋವಿಡ್ -19 ಮಹಾಮಾರಿಯ ನಂತರ ಈ ವರ್ಷ ಜಗನ್ನಾಥ ರಥ ಯಾತ್ರೆಯಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಉತ್ಸವದಲ್ಲಿ ನಿರೀಕ್ಷಿತ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಒಡಿಶಾ ಪೊಲೀಸರು ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಎಲ್ಲಾ ಧಾರ್ಮಿಕ ಕ್ರಿಯೆಗಳು ಮುಗಿದ ಬಳಿಕ ಭಗವಾನ್ ಜಗನ್ನಾಥ, ದೇವಿ ಸುಭದ್ರ ಮತ್ತು ಭಗವಾನ್ ಬಲಭದ್ರನ ಮೂರು ರಥಗಳನ್ನು ಭಕ್ತರು ಎಳೆಯುತ್ತಾರೆ ಮತ್ತು ಶ್ರೀಮಂದಿರದ ಸಿಂಹ ದ್ವಾರದ […]

ಮರದ ಕೆಳಗೆ ಕುಳಿತಿರುವ ಹಳ್ಳಿ ವೈದ್ಯನಿಂದ ಕ್ಯಾಪ್ಟನ್ ಕೂಲ್ ಮೊಣಕಾಲು ನೋವಿಗೆ ಚಿಕಿತ್ಸೆ!! ಧೋನಿ ಸರಳತೆಗೆ ಮತ್ತೊಂದು ನಿದರ್ಶನ

ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ರಾಂಚಿಯಲ್ಲಿರುವ ತಮ್ಮ ಮನೆಯಲ್ಲಿ ಬಿಡುವಿನ ಸಮಯವನ್ನು ಆನಂದಿಸುತ್ತಿದ್ದಾರೆ. ರಾಂಚಿಯಲ್ಲಿ ಭಾರತದ ಮಾಜಿ ಕ್ರಿಕೆಟ್ ನಾಯಕ ತಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಭೇಟಿ ಮಾಡುತ್ತಿದ್ದಾರೆ. ರಾಂಚಿಯ ಕೆಲವು ಯುವ ಕ್ರಿಕೆಟಿಗರನ್ನು ಭೇಟಿ ಮಾಡಲು ಅವರು ಜೆಎಸ್‌ಸಿಎ ಕ್ರೀಡಾಂಗಣಕ್ಕೂ ಹೋಗಿದ್ದಾರೆ. ಇದೇ ವೇಳೆ ತಮ್ಮ ಮೊಣಕಾಲು ನೋವಿಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಆದರೆ ದೊಡ್ಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲ, ಬದಲಿಗೆ ಮರದ ಕೆಳಗೆ ಕುಳಿತು ರೋಗಿಗಳನ್ನು ನೋಡುವ ವೈದ್ಯ ಬಂಧನ್ ಸಿಂಗ್ […]

ಪೋಷಣ್ ಯೋಜನೆಗೆ ಮಕ್ಕಳ ಆಧಾರ್ ಕಾರ್ಡ್ ಕಡ್ಡಾಯವಲ್ಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ನವದೆಹಲಿ: ಪೋಷಣ್ ಅಭಿಯಾನ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಮಕ್ಕಳ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದೆ. ಪೋಷಣ್ ಟ್ರ್ಯಾಕರ್‌ನಲ್ಲಿ ತಾಯಿಯ ಆಧಾರ್ ಐಡಿಯನ್ನು ನಮೂದಿಸಲಾಗಿದೆ ಎಂದು ಖಚಿತಪಡಿಸಿ ಫಲಾನುಭವಿಗೆ ಪೌಷ್ಟಿಕಾಂಶದ ವಿತರಣೆಯನ್ನು ಮಾಡಲಾಗುತ್ತದೆ. ಮನೆಗೆ ಕೊಂಡು ಹೋಗಬಹುದಾದ ಪಡಿತರವನ್ನು ವಿತರಿಸುವ ಬಗ್ಗೆ ಫಲಾನುಭವಿಗೆ ಎಸ್.ಎಂ.ಎಸ್ ಸಂದೇಶ ಕಳುಹಿಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ.

ಮಣಿಪಾಲ ನಗರ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ದಳದಿಂದ ದಾಳಿ; ದಂಡ ವಸೂಲಿ

ಉಡುಪಿ: ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಮಣಿಪಾಲ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೆಲ್ ಹಾಗೂ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ 28 ಪ್ರಕರಣ ದಾಖಲಿಸಿ, 4800 ರೂ. ದಂಡ ವಸೂಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್, ಹಿರಿಯ […]

ಅಗ್ನಿಪಥ್ ಯೋಜನೆಯಡಿ ವಾಯುಸೇನೆ ನೇಮಕಾತಿಗಾಗಿ ಆನ್‌ಲೈನ್ ಪರೀಕ್ಷೆಗೆ ಅರ್ಜಿ ಆಹ್ವಾನ

ಉಡುಪಿ: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಸೇನೆಯ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಜುಲೈ 24 ರಂದು ನಡೆಯುವ ಆನ್‌ಲೈನ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. 1999 ಡಿಸೆಂಬರ್ 29 ರಿಂದ 2005 ಜೂನ್ 29 ರ ಒಳಗೆ ಜನಿಸಿರುವ, ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಕಲಾ, ವಾಣಿಜ್ಯ, ವಿಜ್ಞಾನ, ವಿಭಾಗದಲ್ಲಿ ಶೇ. 50 ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ, ಅಭ್ಯರ್ಥಿಗಳು ಜುಲೈ 5 ರ ಒಳಗೆ ವೆಬ್‌ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ […]