ಶ್ರೀ ವೆಂಕಟರಮಣ ಕಾಲೇಜು: ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರ : 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್ಯಾಂಕ್ಗಳನ್ನು ಪಡೆಯುವುದರ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುವುದರಿಂದ ಆ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿಜ್ಞಾನ ವಿಭಾಗದಲ್ಲಿ ಮೈತ್ರೆಯಿ 5 ನೇ ರ್ಯಾಂಕ್, ಮನೀಷ್ ಆರ್ ಹೆಬ್ಬಾರ್ 7 ನೇ ರ್ಯಾಂಕ್, ಪ್ರಾಚಿ ಎನ್. 9 ನೇ ರ್ಯಾಂಕ್, ಯು. ಕಾರ್ತಿಕ್ ಐತಾಳ್ 10 ನೇ ರ್ಯಾಂಕ್, ವಾಣಿಜ್ಯ ವಿಭಾಗದಲ್ಲಿ ದೀಕ್ಷಾ ಭಟ್ ಮತ್ತು ಪಂಚಮಿ […]
ಮತ್ತೆ ಮುಳುಗಿತು ಮಂಗಳೂರು: ಅವೈಜ್ಞಾನಿಕ ಕಾಮಗಾರಿಗಳಿಂದ ನದಿಯಂತಾಯ್ತು ಸ್ಮಾರ್ಟ್ ನಗರದ ರಸ್ತೆಗಳು
ಮಂಗಳೂರು: ಪ್ರತಿ ಬಾರಿಯಂತೆಯೆ ಈ ಬಾರಿಯೂ ಮಂಗಳೂರು ನಗರ ಸಂಪೂರ್ಣ ಮುಳುಗಡೆಯಾಗಿದ್ದು, ವಾಹನ ಸವಾರರು, ಪಾದಚಾರಿಗಳು ದೋಣಿಯ ಸಹಾಯದಿಂದ ಕೆಲಸ ಕಾರ್ಯಗಳಿಗೆ ಹೋಗಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ಕಳೆದ ಹಲವು ವರ್ಷಗಳಿಂದ ಈ ಸ್ಥಿತಿಯು ಸಾಮಾನ್ಯವೆಂಬಾತಾಗಿದ್ದು, ಸ್ಮಾರ್ಟಿ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿರುವ ವಿಶ್ವ ಪ್ರಸಿದ್ದ ಮಂಗಳೂರು ನಗರಕ್ಕೆ ಈ ಸಮಸ್ಯೆಯು ಕಪ್ಪು ಚುಕ್ಕೆಯಂತಾಗಿ ಕಾಡುತ್ತಿದೆ. ಚರಂಡಿ ವ್ಯವಸ್ಥೆಯೇ ಇಲ್ಲದ ಹೆದ್ದಾರಿಗಳು, ಹೊಂಡ ಬಿದ್ದ ರಸ್ತೆಗಳು, ಅವೈಜ್ಞಾನಿಕ ಕಾಮಗಾರಿಗಳು, ನೀರಿನ ಹರಿವು ಸರಾಗವಾಗಲು ಮಳೆಗಾಲಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಿ ಕ್ರಮ […]
ಈಸಿ ಲೈಫ್ ಮಾನ್ಸೂನ್ ಧಮಾಕಾ: ಕೃಷಿ ಯಂತ್ರೋಪಕರಣ ಬೃಹತ್ ಎಕ್ಸ್ ಚೇಂಜ್ ಮೇಳ; ಹಳೆ ಉಪಕರಣವನ್ನು ಹೊಸದರೊಂದಿಗೆ ಬದಲಾಯಿಸಿ
ಕೃಷಿ ಯಂತ್ರೋಪಕರಣಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 400 ಗಂಟೆಗಳ ಕ್ಲಚ್ ವಾರಂಟಿ ಹಾಗೂ 1ವರ್ಷ ಎಂಜಿನ್ ವಾರಂಟಿ. ಕೇವಲ 22,500 ರೂ(ಸಬ್ಸಿಡಿ)ನಲ್ಲಿ ಸುಧೀರ್ಘ ಬಾಳಿಕೆಯ ಕ್ಲಚ್ ನೊಂದಿಗೆ ಹೊಸ ಜಪಾನೀಸ್ ಟೆಕ್ನಾಲಜಿಯ ಹುಲ್ಲು ಕತ್ತರಿಸುವ ಯಂತ್ರ ಈಸಿ ಲೈಫ್ ಎಂಟರ್ಪ್ರೈಸಸ್ ನ ಶಾಖೆಗಳಲ್ಲಿ ಲಭ್ಯವಿದೆ. ಯಂತ್ರದ ವೈಶಿಷ್ಟ್ಯಗಳು # ಕಡಿಮೆ ಇಂಗಾಲದ ಹೊರಸೂಸುವಿಕೆ # ವರ್ಧಿತ ವೇಗ # ಹೊಸ ಎರಡು ಸ್ಟ್ರೋಕ್ ನ ಎಂಜಿನ್ # 20% ವರೆಗೆ ಇಂಧನ ಬಳಕೆ ಬೃಹತ್ ಎಕ್ಸ್ ಚೇಂಜ್ […]
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ: ಕಟ್ಟೆಚ್ಚರ ವಹಿಸಲು ದ.ಕ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು/ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಸಂಭಾವ್ಯ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಶಿಕ್ಷಣ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲ ಮಕ್ಕಳ ಬಗ್ಗೆ ನಿಗಾ ವಹಿಸಿವಂತೆ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ನೀಡಿದ್ದಾರೆ. ಶಾಲೆಗೆ ಹಾಜರಾಗಲು ತೊಂದರೆಯಾಗುವಂತಹ ಪ್ರದೇಶಗಳಲ್ಲಿ ರಜೆ ಘೋಷಣೆ ಮಾಡಲಾಗಿದ್ದು, ಹಾಜರಾಗಿರುವ ವಿದ್ಯಾರ್ಥಿಗಳಿಗೆ ಪಾಠ ಮುಂದುವರಿಸಲು ಸೂಚಿಸಲಾಗಿದೆ.
ಎಂ.ಎಲ್.ಸಿ ಕೆ.ಪಿ ನಂಜುಂಡಿ ಮತ್ತು ಬೆಂಬಲಿಗರಿಗೆ ಬುದ್ಧಿ ಹೇಳಿ: ವಿಶ್ವಕರ್ಮ ಮುಖಂಡರಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಸಮಾಜ ಅತ್ಯಂತ ಬೆಳವಣಿಗೆ ಕಾಣುತ್ತಿರುವ ಸಮಾಜವಾಗಿದ್ದು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಹಿತ ಅನೇಕ ಕ್ಷೇತ್ರಗಳಲ್ಲಿ ತನ್ನದೇ ರೀತಿಯಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದಿಂದ ನೇಮಕಗೊಂಡ ವಿಶ್ವಕರ್ಮ ನಿಗಮದ ಅಧ್ಯಕ್ಷ ಶ್ರೀ ಬಾಬು ಪತ್ತರ್ ಮತ್ತು ಸಮುದಾಯದ ಹಿರಿಯ ಸ್ವಾಮೀಜಿಯವರಾದ ಹಾಸನ ಜಿಲ್ಲೆಯ ಹರೆ ಮಾದನ ಹಳ್ಳಿ ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ […]