ಶ್ರೀ ವೆಂಕಟರಮಣ ಕಾಲೇಜು: ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪುರ : 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ‍್ಯಾಂಕ್‌ಗಳನ್ನು ಪಡೆಯುವುದರ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುವುದರಿಂದ ಆ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವಿಜ್ಞಾನ ವಿಭಾಗದಲ್ಲಿ ಮೈತ್ರೆಯಿ 5 ನೇ ರ‍್ಯಾಂಕ್, ಮನೀಷ್ ಆರ್ ಹೆಬ್ಬಾರ್ 7 ನೇ ರ‍್ಯಾಂಕ್, ಪ್ರಾಚಿ ಎನ್. 9 ನೇ ರ‍್ಯಾಂಕ್, ಯು. ಕಾರ್ತಿಕ್ ಐತಾಳ್ 10 ನೇ ರ‍್ಯಾಂಕ್, ವಾಣಿಜ್ಯ ವಿಭಾಗದಲ್ಲಿ ದೀಕ್ಷಾ ಭಟ್ ಮತ್ತು ಪಂಚಮಿ ಕಿಣಿ 5 ನೇ ರ‍್ಯಾಂಕ್, ಶ್ರೀಶ 6 ನೇ ರ‍್ಯಾಂಕ್, ಕೃತಿಕಾ 7 ನೇ ರ‍್ಯಾಂಕ್, ಅದಿತಿ ಮತ್ತು ಶೃದ್ಧಾ ಬಿ ಸಾಲಿಯಾನ್ 8 ನೇ ರ‍್ಯಾಂಕ್, ದೇವಾಡಿಗ ಅಂಜಲಿ ಚಂದ್ರ ಮತ್ತು ರಕ್ಷಿತಾ ಆನಂದ ಪೂಜಾರಿ 9 ನೇ ರ‍್ಯಾಂಕ್ ಪಡೆದಿದ್ದಾರೆ.

ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈಯವರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪೂರ್ವಕವಾಗಿ ಶಾಲು ಹೊದಿಸಿ, ಫಲಪುಷ್ಪ, ಬೆಳ್ಳಿಲೋಟ, ಬೆಳ್ಳಿ ನಾಣ್ಯ ನೀಡಿ ಸನ್ಮಾನ ಮಾಡಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿ, ವೆಂಕಟರಮಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ ಶ್ಯಾನುಭಾಗ್, ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ , ಹಿರಿಯ ರಸಾಯನಶಾಸ್ತ್ರ ಉಪನ್ಯಾಸಕ ರಮಾಕಾಂತ ರೇವಣ್‌ಕರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗಣಿತಶಾಸ್ತ್ರ ಉಪನ್ಯಾಸಕ ಸುಜೇಯ ಸ್ವಾಗತಿಸಿ, ರಸಾಯನಶಾಸ್ತ್ರ ಉಪನ್ಯಾಸಕ ಸಂದೀಪ್ ಗಾಣಿಗ ವಂದಿಸಿ, ಇಂಗ್ಲೀಷ್ ಉಪನ್ಯಾಸಕ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.