ಭಾರೀ ಮಳೆ ಹಿನ್ನೆಲೆ: ಉಡುಪಿ ಜಿಲ್ಲೆಯಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಹೆಚ್ಚು ಮಳೆಯಾಗುವ ಸಂಭಾವ್ಯತೆಯಲ್ಲಿ ಮುಂಜಾಗೃತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 1 ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ ಹಾಗೂ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆ: ದ.ಕ ಜಿಲ್ಲೆಯಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ
ಮಂಗಳೂರು: ಮುಂಗಾರು ಆರ್ಭಟ ಮುಂದವರಿದ ಹಿನ್ನೆಲೆಯಲ್ಲಿ ನಾಳೆ ಜುಲೈ 1 ರಿಂದ ದ.ಕ ಜಿಲ್ಲೆಯಲ್ಲಿ ಶಾಲೆ-ಕಾಲೇಜಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಉದಯಪುರ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬಜರಂಗದಳ; ಹಿಂಜಾವೇ ಬೃಹತ್ ಪ್ರತಿಭಟನೆ
ಉಡುಪಿ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ, ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿತು. ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ನೂರಾರು ಹಿಂದೂ ಕಾರ್ಯಕರ್ತರು ಘಟನೆಯ ವಿರುದ್ಧ ಧಿಕ್ಕಾರ ಕೂಗುತ್ತಾ ಸಾಗಿದರು. ಈ ಸಂದರ್ಭ ಹಿಂದೂ ಜಾಗರಣ ವೇದಿಕೆ ಮುಖಂಡರು ಮದರಾಸಗಳ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್‍ರಂತಹ ದುಷ್ಕೃತ್ಯಗಳನ್ನು […]
ಏಕನಾಥ್ ಶಿಂಧೆಗೆ ‘ಮಹಾ’ ಕಮಾನು: ಶಿವಸೇನೆಗೆ ಬೆಂಬಲ ನೀಡಲಿದೆ ಬಿಜೆಪಿ
ಮುಂಬಯಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ನಂತರ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾದ ಫಡ್ನವಿಸ್ ಮತ್ತು ಶಿಂಧೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬಿಜೆಪಿ ಬೆಂಬಲ ನೀಡಲಿದ್ದು, ಶಿಂಧೆ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಸಂಜೆ 7.30 ಕ್ಕೆ ಪ್ರಮಾಣ ವಚನ ಸ್ವೀಕಾರ ನಡೆಯಲಿದ್ದು, ಶಿಂಧೆ ಜೊತೆಗಿದ್ದ ಶಾಸಕರು […]
ಸಿ ಎ ದಿನಾಚರಣೆ: ತ್ರಿಶಾ ಹಳೆ ವಿದ್ಯಾರ್ಥಿನಿ ಶ್ರೀಲತಾ ಭಟ್ ಅವರ ಸ್ವ ಅನುಭವದ ಮಾತುಗಳು
ಸವಾಲಿನ ಜೊತೆಗೆ ಏನಾದರೂ ಮಾಡಬೇಕೆನ್ನುವ ಉತ್ಸಾಹವಿತ್ತು. ಸಿಎ ಪದವಿಯ ಜವಾಬ್ದಾರಿ ಮತ್ತು ಕಾರ್ಯವೈಖರಿಯನ್ನು ಗಮನದಲ್ಲಿಟ್ಟುಕೊಂಡು ಸಿ.ಎ ಆಗುವ ಕನಸು ಕಂಡು ಆಳ್ವಾಸ್ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸಕ್ಕಾಗಿ ಸೇರಿಕೊಂಡೆ. ಸಿಎ ಗೋಪಾಲಕೃಷ್ಣ ಭಟ್ ಅವರ ಪ್ರಶಿಕ್ಷಣ ಕಾರ್ಯಕ್ರಮದಿಂದ ಪ್ರೇರೇಪಣೆಗೊಂಡು ಸಿ.ಎ ಯ ಮೂರು ಹಂತಗಳನ್ನು ‘ತ್ರಿಶಾ ಕ್ಲಾಸಸ್’ ಉಡುಪಿಯಲ್ಲಿ ಪೂರ್ತಿಗೊಳಿಸಿದೆ. ಉಡುಪಿಯ ‘ಸಿ.ಎ ಸಂಸ್ಥೆ ಸಿಕಾಸ’ ನನ್ನ ವೈಯಕ್ತಿಕ ಬೆಳವಣಿಗೆಯೊಂದಿಗೆ ಶ್ರದ್ಧೆ, ಶಿಸ್ತು, ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ತ್ರಿಶಾ ಸಂಸ್ಥೆಯು ನನ್ನ ಮೊದಲ ಕಾರ್ಯಕ್ಷೇತ್ರವಾದ ಅದ್ವೈತ್ ಕನ್ಸಲ್ಟನ್ಸಿ ಆಯ್ಕೆಯಲ್ಲೂ ಕೂಡ […]