ಯುವಕರ ಉದ್ಯೋಗದ ಕನಸಿಗೆ ಸಹಕಾರ ನೀಡುವ ಸ್ಕಿಲ್ ಕನೆಕ್ಟ್ ಪೋರ್ಟಲ್ ಜುಲೈ 15 ರಂದು ಲೋಕಾರ್ಪಣೆ: ಡಾ.ಅಶ್ವಥ್ ನಾರಾಯಣ್
ಉಡುಪಿ: ರಾಜ್ಯದ ಯುವಜನತೆಗೆ ಅವರ ಕನಸಿನ ಉದ್ಯೋಗ ಪಡೆಯಲು ಸಹಕಾರಿಯಾಗುವಂತೆ ಎಲ್ಲಾ ಅಗತ್ಯ ಮಾಹಿತಿ ಹಾಗೂ ನೆರವು ನೀಡುವ ಸ್ಕಿಲ್ ಕನೆಕ್ಟ್ ಪರಿಷ್ಕೃತ ಪೋರ್ಟಲ್ ಅನ್ನು ಜುಲೈ 15 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದರು. ಅವರು ಇಂದು ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಕೌಶಾಲ್ಯಾಭಿವೃದ್ಧಿ ಉದ್ಯಮ […]
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು: ಮನು ಹಂದಾಡಿಯವರಿಂದ ನಗೆ ಹಬ್ಬ ಕಾರ್ಯಕ್ರಮ
ಕುಂದಾಪುರ : ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಮನು ಹಂದಾಡಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮನು ಹಂದಾಡಿಯವರಿಂದ ವಿದ್ಯಾರ್ಥಿಗಳಿಗಾಗಿ ‘ನಗೆ ಹಬ್ಬ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕುಂದಾಪ್ರ ಕನ್ನಡದ ಕಂಪನ್ನು ಪಸರಿಸುತ್ತಾ ಸಮಾಜದಲ್ಲಿರುವ ಶಿಕ್ಷಣವಂತ, ಅಕ್ಷರವಂತ, ವಿದ್ಯಾವಂತರ ನಡುವೆ ಇರುವ ವ್ಯತ್ಯಾಸವನ್ನು ತಿಳಿಸುವುದರ ಮೂಲಕ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೌಲ್ಯಗಳನ್ನು […]
ಮಾಹೆ: ತಂಬಾಕು ಮಾರಾಟಗಾರರ ಪರವಾನಗಿ ಪರಿಗಣನೆ ಕಾರ್ಯಾಗಾರ ಆಯೋಜನೆ
ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಯೂನಿಯನ್ (ಕ್ಷಯರೋಗ ಮತ್ತು ಶ್ವಾಸಕೋಶದ ಕಾಯಿಲೆಗಳ ವಿರುದ್ಧ ಅಂತರರಾಷ್ಟ್ರೀಯ ಒಕ್ಕೂಟ) ನ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಸರ್ವೇಕ್ಷಣಾ ಕಚೇರಿ, ಉಡುಪಿ ಜಿಲ್ಲಾ ಪಂಚಾಯತ್, ಮತ್ತು ಉಡುಪಿ ನಗರ ಪಾಲಿಕೆಯ ವತಿಯಿಂದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ದಂತವೈದ್ಯಶಾಸ್ತ್ರ ವಾರ ಆಚರಣೆಯ ಅಂಗವಾಗಿ “ಉಡುಪಿ ಜಿಲ್ಲೆಯಲ್ಲಿ ತಂಬಾಕು ಮಾರಾಟಗಾರರ ಪರವಾನಗಿ ಪರಿಗಣನೆಗಳು” ಈ ಕುರಿತು ಸಾಮರ್ಥ್ಯ ವರ್ಧನೆಯ ಕಾರ್ಯಾಗಾರವನ್ನು ಜೂನ್ 23 ರಂದು ಕೆಎಂಸಿ ಮಣಿಪಾಲದ ಟಿ.ಎಂ.ಎ ಪೈ ಸಭಾಂಗಣದಲ್ಲಿ […]
ತಾಂತ್ರಿಕ ಪ್ರಾಜೆಕ್ಟ್ ಸ್ಪರ್ಧೆ: ನಿಟ್ಟೆ ವಿದ್ಯಾರ್ಥಿಗಳ ತಂಡಕ್ಕೆ ಪ್ರತಿಷ್ಠಿತ ಎಫ್.ಪಿ.ಎಸ್.ಐ ಪ್ರಶಸ್ತಿ
ನಿಟ್ಟೆ: ಪ್ರತಿಷ್ಠಿತ ಫ಼್ಲುಯಿಡ್ ಪವರ್ ಸೊಸೈಟಿ ಸಂಘಟಿಸಿದ ತಾಂತ್ರಿಕ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ “ಮ್ಯಾನುವಲ್ ಥರ್ಮೋಫಾರ್ಮರ್ ಮೆಷಿನ್” ಗೆ ಎಂ.ಎಸ್. ಯೋಗನರಸಿಂಹ ಪ್ರೈಜ್ ಫಾರ್ ಇನ್ನೋವೇಶನ್ 2022 ಎಂಬ ಪ್ರಶಸ್ತಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಲಭಿಸಿದೆ. ಫ್ಲುಯಿಡ್ ಪವರ್ ಚಾಲೆಂಜ್ 2022 ಕಾರ್ಯಕ್ರಮದಲ್ಲಿ ನೀಡಲಾದ ಈ ಬಹುಮಾನವು ರೂ. 5000 ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಜೂನ್ ಮೂರನೇ ವಾರದಲ್ಲಿ ಬೆಂಗಳೂರಿನ ಕ್ಯಾಪಿಟಲ್ ಹೋಟೇಲ್‌ನಲ್ಲಿ […]
ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲೆ 28% ತೆರಿಗೆ: ವರದಿಯನ್ನು ಮುಂದೂಡಿದ ಜಿ.ಎಸ್.ಟಿ ಕೌನ್ಸಿಲ್
ನವದೆಹಲಿ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕಾರ್ಯವಿಧಾನದ ವಿಸ್ತರಣೆ ಮತ್ತು ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಗರಿಷ್ಠ 28 ಪ್ರತಿಶತ ತೆರಿಗೆ ದರದ ಮೇಲೆ ಎಲ್ಲರ ಗಮನ ಕೇಂದ್ರಿತವಾಗಿದೆ. ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು, ಕುದುರೆ ರೇಸಿಂಗ್ ಕುರಿತು ಸಚಿವರ ಗುಂಪು ವರದಿ(ಜಿಒಎಂ)ಯನ್ನು ಮುಂದೂಡಲಾಗಿದೆ. ಜಿಒಎಂ ಈಗ 15 ದಿನಗಳಲ್ಲಿ ನಿಯಮಗಳ ಕುರಿತು ಸಲಹೆಗಳನ್ನು ಸಲ್ಲಿಸಲಿದೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಜಿಒಎಂ, ಆನ್‌ಲೈನ್ ಗೇಮಿಂಗ್‌ಗೆ ಆಟಗಾರರು ಆಟದಲ್ಲಿ ಭಾಗವಹಿಸುವಾಗ ಪಾವತಿಸುವ ಸ್ಪರ್ಧೆಯ ಪ್ರವೇಶ […]