ಮಾಹೆ: ತಂಬಾಕು ಮಾರಾಟಗಾರರ ಪರವಾನಗಿ ಪರಿಗಣನೆ ಕಾರ್ಯಾಗಾರ ಆಯೋಜನೆ

ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಯೂನಿಯನ್ (ಕ್ಷಯರೋಗ ಮತ್ತು ಶ್ವಾಸಕೋಶದ ಕಾಯಿಲೆಗಳ ವಿರುದ್ಧ ಅಂತರರಾಷ್ಟ್ರೀಯ ಒಕ್ಕೂಟ) ನ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಸರ್ವೇಕ್ಷಣಾ ಕಚೇರಿ, ಉಡುಪಿ ಜಿಲ್ಲಾ ಪಂಚಾಯತ್, ಮತ್ತು ಉಡುಪಿ ನಗರ ಪಾಲಿಕೆಯ ವತಿಯಿಂದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ದಂತವೈದ್ಯಶಾಸ್ತ್ರ ವಾರ ಆಚರಣೆಯ ಅಂಗವಾಗಿ “ಉಡುಪಿ ಜಿಲ್ಲೆಯಲ್ಲಿ ತಂಬಾಕು ಮಾರಾಟಗಾರರ ಪರವಾನಗಿ ಪರಿಗಣನೆಗಳು” ಈ ಕುರಿತು ಸಾಮರ್ಥ್ಯ ವರ್ಧನೆಯ ಕಾರ್ಯಾಗಾರವನ್ನು ಜೂನ್ 23 ರಂದು ಕೆಎಂಸಿ ಮಣಿಪಾಲದ ಟಿ.ಎಂ.ಎ ಪೈ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಾಗಾರವನ್ನು ತಂಬಾಕು ಮಾರಾಟಗಾರರ ಪರವಾನಗಿ ಮತ್ತು ತಂಬಾಕು ಸಂಬಂಧಿತ ರೋಗಗಳ ಬಗ್ಗೆ ಜಾಗೃತಿ ಸೃಷ್ಟಿಸುವ ಬಗ್ಗೆ ಕೇಂದ್ರೀಕರಿಸಲಾಗಿತ್ತು. ಪರವಾನಿಗೆಯ ಮೂಲಕ ಭಾರತವನ್ನು ತಂಬಾಕು ಮುಕ್ತಗೊಳಿಸಿ ಯುವಜನರ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಕಾರ್ಯಾಗಾರವು ಒತ್ತು ನೀಡಿತ್ತು.

ಡಾ. ಅಮಿತ್ ಯಾದವ್, ತಂಬಾಕು ನಿಯಂತ್ರಣದ ಹಿರಿಯ ತಾಂತ್ರಿಕ ಸಲಹೆಗಾರ, ಯೂನಿಯನ್ ಆಗ್ನೇಯ ಏಷ್ಯಾ ಕಚೇರಿ, ನವದೆಹಲಿ, ಪ್ರಭಾಕರ್, ಯೂನಿಯನ್ ನ ಕರ್ನಾಟಕ ರಾಜ್ಯ ಯೋಜನಾ ವ್ಯವಸ್ಥಾಪಕ ಮತ್ತು ಮಹಾಂತೇಶ್, ವಿಭಾಗೀಯ ಸಂಯೋಜಕ ಬ್ಲೂಮ್‌ಬರ್ಗ್ ಉಪಕ್ರಮ ಕರ್ನಾಟಕ ತಂಬಾಕು ನಿಯಂತ್ರಣ ಕೋಶ, ಯೂನಿಯನ್, ಇವರು 3 ಸಂವಾದಾತ್ಮಕ ಸೆಶನ್ ಗಳನ್ನು ಕಾರ್ಯಾಗಾರದಲ್ಲಿ ನಡೆಸಿಕೊಟ್ಟರು.

ಉಡುಪಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವೈದ್ಯಕೀಯ ಮತ್ತು ದಂತಶಾಸ್ತ್ರ ಬೋಧಕರು, ವಿದ್ಯಾರ್ಥಿಗಳು, ಇಂಟರ್ನ್ ಗಳು ಮತ್ತು ಸ್ನಾತಕೋತ್ತರ ಪದವೀಧರರು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಹೆಚ್ ಪ್ರಸನ್ನ, ಮಾಹೆ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ. ರಘು ಎ.ಆರ್. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಎಂಸಿಒಡಿಎಸ್ ನ ಡೀನ್ ಡಾ.ಮೋನಿಕಾ ಸಿ ಸೊಲೊಮನ್, ಅಸೋಸಿಯೇಟ್ ಡೀನ್ ಡಾ. ವಿದ್ಯಾ ಸರಸ್ವತಿ ಎಂ, ಎಂಸಿಒಡಿಎಸ್ ಪ್ರಾಧ್ಯಾಪಕ ಮತ್ತು ಸಾರ್ವಜನಿಕ ಆರೋಗ್ಯ ದಂತವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಮಪ್ರಸಾದ್ ವಿ.ಪಿ
ಮತ್ತು ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ವಿಭಾಗದ ರೀಡರ್ ಡಾ. ಪ್ರಜ್ಞಾ ನಾಯಕ್ ಉಪಸ್ಥಿತರಿದ್ದರು.

ಸಂವಾದ ಮುಗಿದ ಬಳಿಕ ಕಾರ್ಯಾಗಾರದ ಅಂಗವಾಗಿ ಜಿಲ್ಲೆಯ ತಂಬಾಕು ಮುಕ್ತಗ್ರಾಮ ಕೋಡಿ ಬೆಂಗ್ರೆಗೆ ಭೇಟಿ ನೀಡಲಾಯಿತು.