ಎಂಟು ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

ನವದೆಹಲಿ: ಎಂಟು ಮಂದಿ ಪ್ರಯಾಣಿಸಬಹುದಾದ ಮೋಟಾರು ವಾಹನಗಳ ಕಾರು ತಯಾರಕರು ಕನಿಷ್ಠ ಆರು ಏರ್ ಬ್ಯಾಗ್ ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ‘ಇಂಟೆಲ್ ಇಂಡಿಯಾ’ಸ್ ಸೇಫ್ಟಿ ಪಯೋನಿಯರ್ಸ್ ಕಾನ್ಫರೆನ್ಸ್ 2022’ ನಲ್ಲಿ ಮಾತನಾಡಿದ ಗಡ್ಕರಿ, ಪ್ರತಿ ವರ್ಷ ದೇಶಾದ್ಯಂತ ಐದು ಲಕ್ಷ ಅಪಘಾತಗಳಲ್ಲಿ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಾರೆ ಎಂದು ಹೇಳಿದರು. ಏರ್‌ಬ್ಯಾಗ್ ಎನ್ನುವುದು ವಾಹನದ ಪ್ರಯಾಣಿಕರ-ಸಂಯಮ ವ್ಯವಸ್ಥೆಯಾಗಿದ್ದು, ಘರ್ಷಣೆಯ ಸಮಯದಲ್ಲಿ ಚಾಲಕ ಮತ್ತು […]
ರಬಿ ಋತುವಿನಲ್ಲಿ 187 ಲಕ್ಷ ಮೆಟ್ರಿಕ್ ಟನ್ ಗೋಧಿ, 860 ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರಹಿಸಿದ ಸರಕಾರ

ನವದೆಹಲಿ: ರಬಿ ಮಾರುಕಟ್ಟೆ ಋತು 2022-23 ರಲ್ಲಿ ಸರಕಾರವು ಇದುವರೆಗೆ 187 ಲಕ್ಷ 86 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಸಂಗ್ರಹಿಸಿದೆ. ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 37 ಸಾವಿರದ ಎಂಟುನೂರ ಐವತ್ತೆರಡು ಕೋಟಿಗೂ ಹೆಚ್ಚಾಗಿದ್ದು, ಸುಮಾರು 17 ಲಕ್ಷ 85 ಸಾವಿರ ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಖಾರಿಫ್ ಬೆಳೆ 755 ಲಕ್ಷ ಮೆಟ್ರಿಕ್ ಟನ್ ಮತ್ತು ರಬಿ ಬೆಳೆ 105 ಲಕ್ಷ ಮೆಟ್ರಿಕ್ ಟನ್ ಸೇರಿದಂತೆ 860 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು […]