ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಲಘು ಕಂಪನದ ಅನುಭವ

ಮಂಗಳೂರು: ಮಂಗಳವಾರ ಬೆಳಗ್ಗೆ  ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಲಘು ಕಂಪನದ ಅನುಭವವಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಜೂನ್ 25 ರಂದು ಸಂಭವಿಸಿದ ಭೂಕಂಪನದಂತೆಯೇ, ಸುಳ್ಯ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆ 7.45 ರ ಸುಮಾರಿಗೆ ಕಂಪನದ ಅನುಭವವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಪಾಜೆ, ಅರಂತೋಡು, ಪೆರಾಜೆ, ಜಾಲ್ಸೂರು, ಉಬರಡ್ಕ, ತೊಡಿಕಾನ, ಮಿತ್ತೂರು ನಿವಾಸಿಗಳಿಗೆ ಕಂಪನದ ಅನುಭವವಾಗಿದೆ. ನಡುಕ ನಾಲ್ಕು ಸೆಕೆಂಡುಗಳ ಕಾಲ ನಡೆಯಿತು ಎನ್ನಲಾಗಿದೆ.

ಈ ಬಗ್ಗೆ ವೊಲ್ಕಾನೋ ಡಿಸ್ಕವರಿಯಲ್ಲಿ ಮಾಹಿತಿ ಇದ್ದು, ದಕ್ಷಿಣ ಕನ್ನಡದಲ್ಲಿ ಇಂದು 5 ಗಂಟೆಗಳ ಹಿಂದೆ ಸಂಭವಿಸಿದ ಲಘುಪ್ರಮಾಣದ 3.5 ತೀವ್ರತೆಯ ಭೂಕಂಪ ಸುಳ್ಯದಿಂದ ಆಗ್ನೇಯಕ್ಕೆ 9.6 ಕಿ.ಮೀ ವ್ಯಾಪ್ತಿಯಲ್ಲಿ ಬೆಳಿಗ್ಗೆ 7.45 ರ ಸುಮಾರಿಗೆ ಅನುಭವವಾಗಿದೆ. ಬಿಡುಗಡೆಯಾದ ಅಂದಾಜು ಸಂಯೋಜಿತ ಭೂಕಂಪನ ಶಕ್ತಿ: 1.1 x 1010 ಜೌಲ್‌ (3.12 ಮೆಗಾವ್ಯಾಟ್ ಗಂಟೆಗಳು, 2.68 ಟನ್ ಟಿಎನ್‌ಟಿಗೆ ಸಮನಾಗಿರುತ್ತದೆ) ಗಳು ಎಂದು ದಾಖಲಾಗಿದೆ.