ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದ ಕ್ಷಣ: ಇಂದು 1983 ರ ವಿಶ್ವ ಕಪ್ ಗೆದ್ದ ದಿನ

ನವದೆಹಲಿ: ಬರೋಬ್ಬರಿ 39 ವರ್ಷಗಳ ಹಿಂದೆ ಅವಿಸ್ಮರಣೀಯ ದಾಖಲೆಯೊಂದು ನಡೆದ ದಿನವಿದು. ಮೂರು ದಶಕಗಳ ಹಿಂದೆ ವಿಶ್ವ ಛಾಂಪಿಯನ್ ವೆಸ್ಟ್ ಇಂಡೀಸಿನ ಧಾಂಡಿಗರನ್ನು ಸೋಲಿಸಿ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿ ಹಿಡಿದು ಸಮಸ್ತ ಭಾರತೀಯರು ಹೆಮ್ಮ ಪಡುವಂತೆ ಮಾಡಿದ ದಿನ ಜೂನ್ 25. 1983 ರಲ್ಲಿ ಈ ದಿನದಂದು, ಭಾರತೀಯ ಕ್ರಿಕೆಟ್ ತಂಡವು ಎಲ್ಲಾ ಅಡೆತಡೆ ಮತ್ತು ನಿರೀಕ್ಷೆಗಳನ್ನು ಮೀರಿ ಐತಿಹಾಸಿಕ ಲಾರ್ಡ್ಸ್ ಗ್ರೌಂಡ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್‌ನಲ್ಲಿ 43 ರನ್‌ಗಳಿಂದ ಸೋಲಿಸುವ ಮೂಲಕ […]
ಬ್ರಹ್ಮಾವರ ಲಿಟ್ಲ್ ರಾಕ್ ಶಾಲೆ ಬಳಿ ನದಿಯಂತಾದ ರಸ್ತೆ: ಪರದಾಡುತ್ತಿರುವ ಪ್ರಯಾಣಿಕರು

ಉಡುಪಿ: ಬ್ರಹ್ಮಾವರದ ಲಿಟ್ಲ್ ರಾಕ್ ಶಾಲೆ ಬಳಿಯ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಪೂರ್ತಿ ಕೆಸರು ನೀರು ತುಂಬಿಕೊಂಡಿದ್ದು ಇದು ರಸ್ತೆಯೋ ಇಲ್ಲ ಹೊಳೆಯೋ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ಪ್ರಾಣ ಭಯದಲ್ಲಿ ಸಂಚರಿಸುವಂತಾಗಿದೆ. ಚಿತ್ರ ಕೃಪೆ: ರಾಜೇಶ್ ಪಾಟೀಲ್
ಮೊಟ್ಟಮೊದಲ ಬಾರಿಗೆ ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್ ಆಯೋಜಿಸುತ್ತಿರುವ ಭಾರತ

ನವದೆಹಲಿ: ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರದಂದು, ಭಾರತವು ತನ್ನ ಮೊಟ್ಟಮೊದಲ ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುತ್ತಿರುವುದು ಹೆಮ್ಮೆ ಮತ್ತು ಜವಾಬ್ದಾರಿಯ ವಿಷಯವಾಗಿದೆ ಎಂದಿದ್ದಾರೆ. ತಮ್ಮ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಠಾಕೂರ್, ವಿಶ್ವಕಪ್ ನ ಎಲ್ಲಾ 16 ತಂಡಗಳನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಇದು ದೇಶದ ಮಹಿಳಾ ಕ್ರೀಡೆಗಾಗಿ ವಿಶೇಷ ಪಂದ್ಯಾವಳಿಯಾಗಿದೆ. ಕ್ರೀಡೆಯಲ್ಲಿ ಮಹಿಳೆಯರನ್ನು ಒಳಗೊಂಡ ಆಟ ಮೈದಾನವನ್ನಾಗಿ ಮಾಡಲು ಹೆಚ್ಚಿನ ಯುವತಿಯರನ್ನು ಈ ಕಾರ್ಯಕ್ರಮವು ಪ್ರೇರೇಪಿಸಲಿದೆ ಎಂದು ಅವರು […]
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ: ಯಶ್‍ಪಾಲ್ ಸುವರ್ಣ

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಯಶ್‍ಪಾಲ್ ಸುವರ್ಣ ತಿಳಿಸಿದ್ದಾರೆ. ಬ್ಯಾಂಕಿನ ಸದಸ್ಯರ ಮಕ್ಕಳು 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 85, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಹಾಗೂ 2021ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ. 70 ಮತ್ತು ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ.65 ಅಂಕಗಳಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಇತರ ವಿದ್ಯಾರ್ಥಿಗಳು […]
ಇಂಡಿಯನ್ ಆಯಿಲ್ ನಿಂದ ‘ಸೂರ್ಯ ನೂತನ್’ ಒಳಾಂಗಣ ಸೌರ ಅಡುಗೆ ವ್ಯವಸ್ಥೆ ಅಭಿವೃದ್ದಿ

ನವದೆಹಲಿ: ಇಂಡಿಯನ್ ಆಯಿಲ್ ಕಂಪನಿಯು ಹೊಸದಾದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಇದಕ್ಕೆ ‘ಸೂರ್ಯ ನೂತನ್’ ಎಂದು ಹೆಸರಿಸಿದೆ. ಇದು ಸೂರ್ಯನಿಂದ ಶಕ್ತಿಯನ್ನು ಸಂಗ್ರಹಿಸಿ, ವಿಶೇಷವಾಗಿ ವಿನ್ಯಾಸಗೊಳಿಸಿದ ಬಿಸಿ ಮಾಡುವ ಘಟಕದ ಮೂಲಕ ಸೂರ್ಯನ ಶಕ್ತಿಯನ್ನು ಶಾಖವಾಗಿ ಪರಿವರ್ತಿಸುತ್ತದೆ. ಈ ಸೂರ್ಯ ನೂತನ್ ಉತ್ಪನ್ನವನ್ನು ಪುನರ್ಭರ್ತಿ(ರೀಚಾರ್ಜ್) ಮಾಡಬಹುದು ಮತ್ತು ನಾಲ್ಕು ವ್ಯಕ್ತಿಗಳಿಗೆ ಆಹಾರ ತಯಾರಿಸಲು ಇದು ಸೂಕ್ತವಾಗಿದೆ. ಶುಕ್ರವಾರ ನವದೆಹಲಿಯಲ್ಲಿ ಸೂರ್ಯ ನೂತನ್ ಸಿಸ್ಟಂನ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ […]