ಅಖಿಲ ಭಾರತ ಮಟ್ಟದ ಕೆವಿಪಿವೈ ಪರೀಕ್ಷೆ: ಎಕ್ಸ್ ಪರ್ಟ್ ಕಾಲೇಜಿನ 10 ವಿದ್ಯಾರ್ಥಿಗಳಿಗೆ ರ‍್ಯಾಂಕ್

ಮಂಗಳೂರು: ಭಾರತ ಸರಕಾರದ ವಿಜ್ಞಾನ ಮತ್ತುತಂತ್ರಜ್ಞಾನ ಇಲಾಖೆ ನಡೆಸಿದ ಕಿಶೋರ್ ವೈಜ್ಞಾನಿಕ್ ಪೋತ್ಸಾಹನ್‌ ಯೋಜನೆಯ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವಕಾಲೇಜಿನ 10 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದರ‍್ಯಾಂಕ್ ಪಡೆದುಕೊಂಡಿದ್ದಾರೆ. ಇಂಡಿಯನ್‌ ಇನ್ಸಿಟ್ಯೂಟ್‌ ಆಫ್ ಸೈನ್ಸ್ ನಡೆಸಿದ ಕೆ.ವಿ.ಪಿ.ವೈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕಾಮತ್ ಅಮ್ಮೆಂಬಳ 127ನೇ ರ‍್ಯಾಂಕ್ ಹಾಗೂ ಶ್ರೇಯಸ್ ಕೆ. ನಿಶಾನಿ 149ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಎಸ್‌ಸಿ-ಎಸ್‌ಟಿ ವಿಭಾಗದಲ್ಲಿ ವಿಶಾಲ್‌ ಎಸ್. 49ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. […]

ಮಂಗಳೂರು: ಜುಲೈ 3 ರಂದು ರವೀಂದ್ರ ಕಲಾ ಭವನದಲ್ಲಿ ಸರೋದ್ ವಾದನ ಕಾರ್ಯಕ್ರಮ

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನವು ಪ್ರಸ್ತುತ ಪಡಿಸುತ್ತಿರುವ ಸರೋದ್‌ ವಾದನ ಕಾರ್ಯಕ್ರಮವು ಜುಲೈ 3 ರಂದು ಸಂಜೆ 6 ಗಂಟೆಗೆ ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಕೊಲ್ಕತ್ತಾದ ಪಂ.ತೇಜೇಂದ್ರ ನಾರಾಯಣ ಮಜುಮ್‌ದಾರ್‌ ಅವರ ಸರೋದ್‌ ವಾದನಕ್ಕೆ ದೇಶದ ಖ್ಯಾತ ತಬ್ಲಾಪಟು ಮುಂಬೈನ ಪಂ.ಯೋಗೀಶ್ ಸಂಶಿ ಅವರು ತಬ್ಲಾ ಸಾಥ್‌ನೀಡಲಿದ್ದಾರೆ. ಸಂಗೀತಾಸಕ್ತರೆಲ್ಲರಿಗೂ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶಾವಕಾಶವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ […]

ಜಿನಿಸಸ್ ಇಂಡಸ್ಟ್ರೀಸ್ ಹಾಗೂ ಡೋಮ್ಸ್ ಕಂಪನಿ ವತಿಯಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಉಡುಪಿ: ಶನಿವಾರದಂದು ಜಿನಿಸಸ್ ಇಂಡಸ್ಟ್ರೀಸ್ ಹಾಗೂ ಡೋಮ್ಸ್ ಕಂಪನಿಯ ಪ್ರತಿನಿಧಿಗಳು ಆತ್ರಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ ಮತ್ತು ಕ್ರೆಯಾನ್ ಬಾಕ್ಸ್ ಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷೆ ಶ್ಯಾಮಲಾ ಪ್ರಭು ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯಾನಂದ ನಾಯಕ್, ಸಿ ಆರ್ ಪಿ ಪ್ರದೀಪ್, ಕೌಶಲ್ ವೋರಾ, ನಿರಾಲಿ ವೋರಾ, ಅಯಾನ್ ರಾನಿಲ್, ‘ವನ್ ಗುಡ್ ಸ್ಟೆಪ್’ ಎನ್.ಜಿ.ಒ ದ ಟ್ರಸ್ಟಿ ಅಮಿತಾ […]

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಲೀಪ್ ಹೆಗ್ಡೆ ಮನೆಗೆ ಸಾರಾಯಿ ಬಾಟಲಿ ಎಸೆತ: ರಾಜಕೀಯ ದುರುದ್ದೇಶ ಶಂಕೆ

ಹಿರಿಯಡ್ಕ: ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಲೀಪ್ ಹೆಗ್ಡೆ ಅವರ ಕುಕ್ಕೆಹಳ್ಳಿ ಮನೆಯಲ್ಲಿ ಶುಕ್ರವಾರದಂದು ತಡ ರಾತ್ರಿ ಸುಮರು 11.30 ಗಂಟೆಗೆ ಕೆಲವು ಕಿಡಿಕೇಡಿಗಳು ಸಾರಾಯಿ ಬಾಟಲಿಯನ್ನು ಎಸೆದು ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಯಾರೋ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿರಬೇಕು ಎಂದು ದಿಲೀಪ್ ಹೆಗ್ಡೆ ಹೇಳಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಿಡಿಗೇಡಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಕಿಡಿಗೇಡಿಗಳನ್ನು ಶೀಘ್ರವೆ ಬಂಧಿಸುವಂತೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, […]

ಬೂದು ಬಣ್ಣದ ನವಿಲಿನ ಅಂದ ಚಂದ ನೋಡಿರಾ…. ಇದು ಏಷ್ಯಾ ಖಂಡದಲ್ಲಿ ಮಾತ್ರ ಕಾಣಸಿಗುವ ಪಕ್ಷಿ

ಬೂದು ನವಿಲು-ಫೆಸೆಂಟ್ (ಪಾಲಿಪ್ಲೆಕ್ಟ್ರಾನ್ ಬೈಕಲ್ಕಾರಟಮ್), ಈಶಾನ್ಯ ಭಾರತ, ಚೀನಾ ಮತ್ತು ಇಂಡೋ-ಚೀನಾದಲ್ಲಿ ಕಂಡುಬರುವ ಗ್ಯಾಲಿಫಾರ್ಮ್ಸ್ ಪಕ್ಷಿಯಾಗಿದೆ. ಈ ನವಿಲು ಮ್ಯಾನ್ಮಾರ್‌ನ ರಾಷ್ಟ್ರೀಯ ಪಕ್ಷಿಯಾಗಿದೆ. ಗ್ಯಾಲಿಫಾರ್ಮ್ಸ್ ಸುಮಾರು 70 ಕುಲಗಳು ಮತ್ತು 250 ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡಿರುವ ಒಂದು ದೊಡ್ಡ ಮತ್ತು ವೈವಿಧ್ಯಮಯ ಪಕ್ಷಿಗಳ ಗುಂಪಾಗಿದೆ. ಈ ಗುಂಪಿನ ಪಕ್ಷಿಗಳನ್ನು ‘ಗ್ಯಾಲಿನೇಶಿಯಸ್ ಬರ್ಡ್ಸ್’ (ಕೋಳಿಯಂತಹ ಪಕ್ಷಿ) ಅಥವಾ ಆಟದ ಪಕ್ಷಿಗಳು (ಅನೇಕ ಜಾತಿಗಳನ್ನು ಬೇಟೆಯಾಡಲಾಗುತ್ತದೆ) ಎಂದು ಕರೆಯಲಾಗುತ್ತದೆ. ಗ್ಯಾಲಿಫಾರ್ಮ್ಸ್ ಟರ್ಕಿ, ಕೋಳಿಗಳು, ಕ್ವಿಲ್ ಮತ್ತು ಇತರ ಭೂಪಕ್ಷಿಗಳನ್ನು […]